ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 04: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಸೋಮವಾರ ಕಂಡು ಬಂದಿದೆ. ಪೇಪರ್ ಲೀಕ್ ಮಾಡಿದ ಮಾಸ್ಟರ್ ಮೈಂಡ್ ಸೇರಿ ಮೂವರ ಬಂಧನವಾಗಿದೆ. ಪಿಯು ಬೋರ್ಡ್ ಅಧಿಕಾರಿಗಳಿಗೆ ಎಷ್ಟು ಮೊತ್ತ ನೀಡಿ ಪೇಪರ್ ಖರೀದಿಸಿದ್ದ ಎಂಬುದು ಕೂಡಾ ಬಹಿರಂಗವಾಗಿದೆ.

ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಶರಣ ಪ್ರಕಾಶ್ಪಾಟೀಲ್ ಅವರ ಆಪ್ತ ಸಹಾಯಕನೊಬ್ಬನ ವಿಚಾರಣೆ ಜಾರಿಯಲ್ಲಿದ್ದು, ವಿಚಾರಣೆ ಬಳಿಕ ಬಂಧನ ಸಾಧ್ಯತೆಯಿದೆ. ಸಚಿವ ಶರಣ ಗೌಡ ಪಾಟೀಲ್ ಅವರು ಸೇಡಂನಿಂದ ಹೈದರಬಾದ್ ಮಾರ್ಗವಾಗಿ ಬೆಂಗಳೂರಿನ ಕಡೆಗೆ ದೌಡಾಯಿಸುತ್ತಿದ್ದಾರೆ.

ಪದವಿ ಪೂರ್ವ ಶಿಕ್ಷಣ ಬೋರ್ಡ್ ನ ಅಧಿಕಾರಿಗಳಿಗೆ ಸುಮಾರು 10 ಲಕ್ಷ ರು ನೀಡಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆಯನ್ನು ಮಾಸ್ಟರ್ ಮೈಂಡ್ ಖರೀದಿಸಿದ್ದಾನೆ ಎಂದು ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್(ಸಿಐಡಿ) ಅಧಿಕಾರಿಗಳು ಹೇಳಿದ್ದಾರೆ.

Chemistry paper leak- Accused purchased question paper for Rs 10 lakh

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮುಖ್ಯರೂವಾರಿ, ಕಿಂಗ್ ಪಿನ್, ಮಾಸ್ಟರ್ ಮೈಂಡ್ ಹೆಸರು ಮಂಜುನಾಥ್, ವಿಜಯನಗರದ ಕಾಲೇಜೊಂದರಲ್ಲಿ ದೈಹಿಕ ಶಿಕ್ಷಣ(ಪಿಟಿ) ವಿಭಾಗದ ಮುಖ್ಯಸ್ಥ. ಈತ 10 ಲಕ್ಷ ರು ನೀಡಿ ಪೇಪರ್ ಖರೀದಿಸಿದ್ದ.[ಪೇಪರ್ ಲೀಕ್ ಆಗಿದ್ದು ಹೇಗೆ? ಯಾರು ಯಾರು ಬಂಧನ?]

ಮಾರ್ಚ್ 21ರಂದು ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂದು ಪರೀಕ್ಷೆ ನಡೆದ ಬಳಿಕ ಅದನ್ನು ರದ್ದುಪಡಿಸಲಾಗಿತ್ತು. ಪಶ್ನೆ ಪತ್ರಿಕೆ ಸೋರಿಕೆ ಕುರಿತು ಸಿಐಡಿ ತನಿಖೆ ನಡೆಸಲು ಆದೇಶ ನೀಡಲಾಗಿತ್ತು. ತನಿಖೆಗೆ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು 5 ತಂಡಗಳನ್ನು ರಚನೆ ಮಾಡಿದ್ದರು.[ದ್ವೇಷಕ್ಕಾಗಿ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ?]

2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ, ಪುನಃ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಸದ್ಯ, ಏ.12ರಂದು ಮರು ಪರೀಕ್ಷೆ ನಡೆಸುವುದಾಗಿ ದಿನಾಂಕ ಘೋಷಣೆ ಮಾಡಲಾಗಿದೆ.

English summary
The alleged mastermind in the question paper leak case being investigated in Karnataka had paid Rs 10 lakh to officials in the Pre-University Board, investigations have found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X