ಮಹಿಳಾ ನಿಲಯದಲ್ಲಿ ಅನಾಥ ಮಕ್ಕಳನ್ನು ನೋಡಿ ದಿವ್ಯಾ ಹಾಗರಗಿ ಕಣ್ಣೀರು?

ಬೆಂಗಳೂರು, ಮೇ. 11: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿ ಮೊನ್ನೆ ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಕಣ್ಣೀರು ಹಾಕಿದ್ದರು. ದಿವ್ಯಾ ಹಾಗರಗಿ ಮಹಿಳಾ ನಿಲಯದಲ್ಲಿ ಬುದ್ಧಿಮಾಂದ್ಯ ಮಕ್ಕಳ ಸ್ಥಿತಿ ನೀಡಿ ಮತ್ತೊಮ್ಮೆ ಕಣ್ಣೀರು ಹಾಕಿದ್ದಾಳಂತೆ. ಮಾತ್ರವಲ್ಲ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದ ಬಳಿಕ ಅನಾಥಾಶ್ರಮ ಕಟ್ಟಿ ಸಮಾಜ ಸೇವೆ ಮಾಡ್ತಾಳಂತೆ!

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿ ಪಲಾಯನವಾಗಿದ್ದ ದಿವ್ಯಾ ಹಾಗರಗಿ ಪುಣೆಯ ಉದ್ಯಮಿ ಮನೆಯಲ್ಲಿ ಸಿಕ್ಕಿಬಿದ್ದಿದ್ದರು. ಸಿಐಡಿ ಪೊಲೀಸರು ಮಹಾರಾಷ್ಟ್ರದಲ್ಲಿ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದರು. ರಾಜ್ಯದ ಪ್ರಭಾವಿ ನಾಯಕರ ಜತೆ ಗುರುತಿಸಿಕೊಂಡಿದ್ದ ದಿವ್ಯಾ ಹಾಗರಗಿ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿಯಾಗಿದ್ದರು.

ಪಿಎಸ್ಐ ಅಕ್ರಮದಲ್ಲಿ ಬಂಧನದ ಬಳಿಕ ವಿಚಾರಣೆ ಎದುರಿಸಿದ್ದ ದಿವ್ಯಾ ಹಾಗರಗಿ ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಕಣ್ಣೀರು ಹಾಕಿದ್ದರು. ನಮ್ಮ ಅಪ್ಪ ಜೈಲಿಗೆ ಹೋಗಲು ನೀನೇ ಕಾರಣ ಎಂದು ಮಗ ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ದಿವ್ಯಾ ಪೊಲೀಸರ ಎದುರಲ್ಲೇ ಕಣ್ಣೀರು ಹಾಕಿದ್ದರು. ಇದೀಗ ಮತ್ತೊಂದು ಘಟನೆಯಲ್ಲಿ ದಿವ್ಯಾ ಹಾಗರಗಿ ಕಣ್ಣೀರು ಹಾಕಿದ್ದಾರೆ.

PSI Recruitment Scam Accused Divya Hagaragi Cries after Seeing Orphanage Children

ಸಿಐಡಿ ವಿಚಾರಣೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿಯನ್ನು ಕಲಬುರಗಿಯ ಅಳಂದ ರಸ್ತೆಯಲ್ಲಿದ್ದ ಸರ್ಕಾರಿ ಮಹಿಳಾ ನಿಲಯದಲ್ಲಿ ಬಿಡಲಾಗಿತ್ತು. ಅಲ್ಲಿ ಅನಾಥ ಮಕ್ಕಳ, ಬುದ್ಧಿಮಾಂಧ್ಯ ಮಕ್ಕಳ ವಸತಿ ನಿಲಯವೂ ಅಲ್ಲಿಯೇ ಇತ್ತು. ಬುದ್ಧಿಮಾಂದ್ಯ ಮತ್ತು ಅನಾಥ ಮಕ್ಕಳ ಸ್ಥಿತಿ ನೋಡಿ ಕಣ್ಣೀರು ಹಾಕಿದರಂತೆ. ಮಂಗಳವಾರ ದಿವ್ಯಾ ಹಾಗರಗಿಯನ್ನು ಭೇಟಿ ಮಾಡಲು ಹೋಗಿದ್ದ ಆಕೆಯ ಆಪ್ತೆ ಜತೆ ಮಾತನಾಡಿರುವ ದಿವ್ಯಾ ಹಾಗರಗಿ, ನಾನು ಜೈಲಿನಿಂದ ಬಿಡುಗಡೆಯಾಗಿ ಬಂದರೆ, ಅನಾಥಾಶ್ರಮ ಕಟ್ಟಿಸಿ ಬುದ್ಧಿಮಾಂದ್ಯ ಮಕ್ಕಳ ಸೇವೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರಂತೆ.

PSI Recruitment Scam Accused Divya Hagaragi Cries after Seeing Orphanage Children

ಅನಾಥ ಹಾಗೂ ಬುದ್ಧಿಮಾಂದ್ಯ ಮಕ್ಕಳ ಸ್ಥಿತಿ ನೋಡಿ ದಿವ್ಯಾ ಹಾಗರಗಿ ಮನಸು ಪರಿವರ್ತನೆ ಆಯಿತಾ? ವಾಸ್ತವ ಜೀವನ ಅರ್ಥವಾಗಿ ಅನಾಥಾಶ್ರಮ ಕಟ್ಟುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+