ಭವಾನಿ ರೇವಣ್ಣಗೆ ಸಂಕಷ್ಟ: ಜಾಮೀನು ರದ್ದಿತಿಗೆ ಹೈಕೋರ್ಟ್‌ಗೆ ಮನವಿ
ಬೆಂಗಳೂರು, ಜೂನ್ 15: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಪ್ರಾಸಿಕ್ಯೂಷನ್ ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಮಾಡಿದೆ.
ಅಲ್ಲದೆ, ಭವಾನಿ ತನಿಖೆಗೆ ಅಸಹಕಾರ ತೋರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮಂಜೂರಾಗಿರುವ ಮಧ್ಯಂತರ ನಿರೀಕ್ಷ ಣಾ ಜಾಮೀನು ಮುಂದುವರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಶೇಷ ನ್ಯಾಯಪೀಠ ಕೆಲ ಕಾಲ ವಿಚಾರಣೆ ನಡೆಸಿದ ನಂತರ ತೀರ್ಪು ಕಾಯ್ದಿರಿಸಿರುವುದಾಗಿ ಪ್ರಕಟಿಸಿತು.

ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಪ್ರೊ. ರವಿವರ್ಮ ಕುಮಾರ್, "ನ್ಯಾಯಾಲಯ ಕಳೆದ ವಾರ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು. ನ್ಯಾಯಾಲಯದ ನಿರ್ದೇಶನದಂತೆ ಭವಾನಿ ರೇವಣ್ಣ ತನಿಖೆಗೆ ಸಹಕಾರ ನೀಡುತ್ತಿಲ್ಲ, ಅಸಹಕಾರ ತೋರುತ್ತಿರುವುದರಿಂದ ತನಿಖೆ ಮುಂದವರಿಸಲಾಗುತ್ತಿಲ್ಲ" ಎಂದರು.
ತನಿಖೆಗೆ ದಿಕ್ಕು ತಪ್ಪಿಸುತ್ತಿದ್ದಾರೆ: ಅಲ್ಲದೆ, ಭವಾನಿ ರೇವಣ್ಣ ತನಿಖೆಗೆ ಸಹಕರಿಸುತ್ತಿಲ್ಲ, ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಹಾಗಾಗಿ ಅವರನ್ನು ಬಂಧಿಸಿಯೇ ವಿಚಾರಣೆಗೊಳಪಡಿಸಬೇಕಾಗಿದೆ. ಮೂರು ದಿನ ತನಿಖೆಗೆ ಹಾಜರಾದರೂ ಎಲ್ಲಾ ಪ್ರಶ್ನೆಗಳಿಗೂ ನೋ ಎಂಬ ಉತ್ತರ ನೀಡಿದ್ದಾರೆ, ಪೋನ್ ಕೋಡುತ್ತಿಲ್ಲ. ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದರು.
ಆ ನಂತರ ಪ್ರಾಸಿಕ್ಯೂಷನ್ ವಕೀಲರು, ಭವಾನಿ ರೇವಣ್ಣ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾರೆ. ಮಹಿಳೆಯ ಅಪಹರಣದ ಹಿಂದಿನ ಸೂತ್ರಧಾರಿ ಅವರೇ, ಎಲ್ಲಾಆರೋಪಿಗಳೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ, ಅದಕ್ಕೆ ಸಾಕ್ಷಿಗಳು ಇವೆ ಎಂದು ಹೇಳಿದರು.
ಆಗ ನ್ಯಾಯಪೀಠ, ಪ್ರಾಸಿಕ್ಯೂಷನ್ ಕೇಳಿದ ಪ್ರಶ್ನೆಗೆ ಉತ್ತರ ಹೇಳುವುದು ಬಿಡುವುದು ಆರೋಪಿಗೆ ಬಿಟ್ಟ ವಿಚಾರ, ಜತೆಗೆ ನೀವು (ಪ್ರಾಸಿಕ್ಯೂಷನ್) ಹೀಗೆ ಉತ್ತರ ನೀಡಬೇಕೆಂದು ಬಯಸುವುದು ಸರಿಯಲ್ಲ. ಅನಗತ್ಯ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರ ನೀಡದೇ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ತನಿಖೆಯ ವೇಳೆ ಕೇಳಲಾದ ಪ್ರಶ್ನೆಗಳು ಮತ್ತು ಉತ್ತರಗಳ ಪ್ರತಿಯನ್ನು ನೀಡುವಂತೆ ಸೂಚಿಸಿತು.
ಮೂರು ದಿನಗಳ ವಿಚಾರಣೆ ವೇಳೆ ಭವಾನಿ ರೇವಣ್ಣ ಅವರನ್ನು ಕೇಳಿದ ಪ್ರಶ್ನಾವಳಿಗಳ ಹಾಗೂ ಉತ್ತರಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, "ಆರೋಪಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಆದರೆ ನಿಮಗೆ ಬೇಕಾದ ಉತ್ತರವನ್ನು ಅವರು ಕೋಡೋದಿಕ್ಕೆ ಸಾಧ್ಯವಿಲ್ಲ. ಅವರು ತಮಗೆ ತಿಳಿದಿದ್ದನ್ನು ಹೇಳಿದ್ದಾರೆ. ಅದು ಅಸಹಕಾರ ಹೇಗಾದೀತು?" ಎಂದು ಪ್ರಶ್ನಿಸಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಆರೋಪ ಸಂಬಂಧ ಕೆ. ಆರ್. ನಗರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ನಾನಾ ಸೆಕ್ಷ ನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.
ಅದರಲ್ಲಿ ಭವಾನಿ ಪತಿ ಎಚ್. ಡಿ. ರೇವಣ್ಣ ಮೊದಲ, ಸತೀಶ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ. ಎಚ್. ಡಿ. ರೇವಣ್ಣ ಈಗಾಗಲೇ ಬಂಧನಕ್ಕೊಳಗಾಗಿ ಜಾಮೀನು ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಭವಾನಿ ಅವರ ಹೆಸರು ಕೇಳಿ ಬಂದಿದೆ.
ಆದರೆ, ಎಫ್‌ಐಆರ್‌ನಲ್ಲಿಅವರ ಹೆಸರು ಉಲ್ಲೇಖಿಸಿಲ್ಲ. ಈ ಪ್ರಕರಣದಲ್ಲಿ ಭವಾನಿ ನಿರೀಕ್ಷಣಾ ಜಾಮೀನು ಕೋರಿದ್ದರು. ನ್ಯಾಯಾಲಯ ಕಳೆದ ವಾರ ಅವರನ್ನು ಬಂಧಿಸದಂತೆ ಮಧ್ಯಂತರ ಜಾಮೀನು ನೀಡಿ, ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿತ್ತು.












Click it and Unblock the Notifications