ಕಲಬುರ್ಗಿ ಹತ್ಯೆಯ ಸಂಚು ರೂಪಿಸಿದ್ದು ರುದ್ರ ಪಾಟೀಲ್?

ಬೆಂಗಳೂರು, ಸೆಪ್ಟೆಂಬರ್, 18 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಹತ್ಯೆಯ ಸಂಚು ರೂಪಿಸಿದ ಪ್ರಮುಖ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಲಬುರ್ಗಿ ಅವರ ಹತ್ಯೆ ನಡೆಯುವ ದಿನ ಆರೋಪಿ ಬೆಳಗಾವಿಯಲ್ಲಿದ್ದ ಎಂದು ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.

ಮಹಾರಾಷ್ಟ್ರದ ಸಾಂಗ್ಲಿ ಮೂಲದ ರುದ್ರ ಪಾಟೀಲ್ (32) ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ನರೇಂದ್ರ ಧಾಬೋಲ್ಕರ್, ಗೋವಿಂದ ಪನ್ಸಾರೆ ಅವರ ಹತ್ಯೆಯ ಸಂಚನ್ನು ಪಾಟೀಲ್ ರೂಪಿಸಿದ್ದ ಎಂದು ಆರೋಪಿಸಲಾಗಿದೆ. [ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]

MM Kalburgi

ರುದ್ರ ಪಾಟೀಲ್‌ಗಾಗಿ ಕರ್ನಾಟಕ ಸಿಐಡಿ ಪೊಲೀಸರು ಹುಟುಕಾಟ ಆರಂಭಿಸಿದ್ದಾರೆ. ಸಿಬಿಐ ಮತ್ತು ರಾಷ್ಟ್ರೀಯ ತನಿಖಾ ತಂಡಕ್ಕೂ ಪಾಟೀಲ್ ಬೇಕಾಗಿದ್ದಾನೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಡೆದ ಹತ್ಯೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಪಾಟೀಲ್ ಕುರಿತು ಮಾಹಿತಿ ಲಭ್ಯವಾಗಿದೆ. [ಮೂರು ಹತ್ಯೆಗಳ ನಡುವೆ ಸಾಮ್ಯತೆ]

ಪೊಲೀಸರ ವಿಚಾರಣೆ ವೇಳೆ ಈ ಮೂರು ಹತ್ಯೆ ಪ್ರಕರಣದ ಸಂಚನ್ನು ರುದ್ರ ಪಾಟೀಲ್ ಮಾಡಿದ್ದಾಗಿ ಆರೋಪಿಯೊಬ್ಬ ಒಪ್ಪಿಕೊಂಡಿದ್ದಾನೆ. ಸಿಐಡಿ ಮೂಲಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಎಂ.ಎ.ಕಲಬುರ್ಗಿ ಅವರ ಹತ್ಯೆ ನಡೆದ ಆ.30ರಂದು ಪಾಟೀಲ್ ಬೆಳಗಾವಿಯಲ್ಲಿದ್ದ ಎಂದು ಮಹಾರಾಷ್ಟ್ರ ಸೈಬರ್ ವಿಂಗ್ ಮಾಹಿತಿ ನೀಡಿದೆ. [ಕಲಬುರ್ಗಿ ಹತ್ಯೆ : ತನಿಖೆಯ ಪ್ರಗತಿ ಏನು?]

ಸಿಬಿಐ ಸಹ ಪಾಟೀಲ್‌ಗಾಗಿ ಹುಡುಕಾಟ ನಡೆಸುತ್ತಿದೆ. ಸಾಂಗ್ಲಿ ಮೂಲದ ಈ ವ್ಯಕ್ತಿ ಅಕ್ರಮವಾಗಿ ಸ್ಫೋಟಕಗಳನ್ನು ಸಾಗಣೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ರಾಷ್ಟ್ರೀಯ ತನಿಖಾ ದಳ ಪಾಟೀಲ್‌ ಹುಡುಕಾಟಕ್ಕಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.

ರಾಷ್ಟ್ರೀಯ ತನಿಖಾ ದಳ ನೀಡಿರುವ ರುದ್ರ ಪಾಟೀಲ್ ವಿಳಾಸ : Saham Mobile Shopee, Panchmukhi, Maruti Road, Gaonbhag, Sangli, Maharashtra. Flat No. 8, Dattakrupa Appartment, Joshi Gali, Gaonbhang, Sangli, Maharashtra.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+