ಸಂವಿಧಾನದ ಪವರ್ ತೋರಿಸ್ತೇವೆ: ಆರೆಸ್ಸೆಸ್ ಬ್ಯಾನ್ ಬಗ್ಗೆ ಪ್ರಿಯಾಂಕ್ ಖರ್ಗೆ ಟ್ವೀಟ್
ರಾಜ್ಯದಲ್ಲಿ ಆರೆಸ್ಸೆಸ್ ಬ್ಯಾನ್ ಮಾಡುವ ಬಗ್ಗೆ ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ ಮುಂದುವರೆದಿದೆ. ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಭಜರಂಗದಳ ಮಾತ್ರವಲ್ಲ ಆರೆಸ್ಸೆಸ್ ಸಂಘಟನೆ ಆದರೂ ಕೂಡ ಬ್ಯಾನ್ ಮಾಡ್ತೀವಿ ಎಂದು ಪ್ರಿಯಾಂಕ ಹೇಳಿಕೆ ನೀಡಿದ್ದರು.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದರು. ಪ್ರಿಯಾಂಕ್ ಅವರ ಹೇಳಿಕೆಯನ್ನು ಹಲವು ಖಂಡಿಸಿದ್ದರು. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ, ಹಿಂದೂ ವಿರೋಧಿ ಎನ್ನುವಂತೆ ಬಿಂಬಿಸಿ ಮಾತನಾಡಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಕಿಡಿ ಕಾರಿದ್ದರು. ನಿಮಗೆ ತಾಕತ್ತಿದರೆ ಆರೆಸ್ಸೆಸ್ ಬ್ಯಾನ್ ಮಾಡಿ ನೋಡಿ ಎಂದು ಸವಾಲು ಹಾಕಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕಾಂಗ್ರೆಸ್ ನಾಯಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ ಅಂತಿದಾರೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 26, 2023
ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲಾ.
ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ.
ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ನಾವು ತೋರಿಸುತ್ತೇವೆ.
ಬಿಜೆಪಿ ನಾಯಕರ ಹೇಳಿಕೆಗೆ ಖರ್ಗೆ ತಿರುಗೇಟು
ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ, ಟ್ವೀಟ್ ಮಾಡಿರುವ ಅವರು, " ಬಿಜೆಪಿಗರು, ಪದೇ ಪದೇ, ಆರೆಸ್ಸೆಸ್ ಬ್ಯಾನ್ ಮಾಡಿ ನೋಡಿ ಅಂತಿದಾರೆ. ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ರೀತಿಯಲ್ಲ, ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ನಾವು ತೋರಿಸುತ್ತೇವೆ." ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ.
ನಿಮ್ಮಪ್ಪ, ಅಜ್ಜಿ, ಮುತ್ತಾತನಿಗೆ ಬ್ಯಾನ್ ಮಾಡಲು ಆಗಿಲ್ಲ
ಆರೆಸ್ಸೆಸ್ ಬ್ಯಾನ್ ಬಗ್ಗೆ ಮಾತನಾಡಿದ್ದ ಮಾಜಿ ಸಚಿವ ಆರ್. ಅಶೋಕ್, "ನೀವು ಬಿಡಿ ನಿಮ್ಮಪ್ಪ, ಅಜ್ಜಿ, ಮುತ್ತಾತನಿಗೆ ಆರೆಸ್ಸೆಸ್ ಬ್ಯಾನ್ ಮಾಡಲು ಆಗಿಲ್ಲ. ಸಂಸತ್ತಿನಲ್ಲಿ ಬಹುಮತ ಇದ್ದಾಗಲೇ ನೀಮಗೆ ಬ್ಯಾನ್ ಮಾಡಲು ಆಗಲಿಲ್ಲ, ನಿಮಗೆ ತಾಕತ್ ಇದ್ದರೆ ಆರ್ ಎಸ್‌ಎಸ್ ಬ್ಯಾನ್ ಮಾಡಿ, ನಿಮ್ಮ ಸರ್ಕಾರ ಮೂರು ನಾಲ್ಕು ರಾಜ್ಯಗಳಲ್ಲಿ ಇರಬಹುದು, ಆದರೆ ಆರೆಸ್ಸೆಸ್ ಲಕ್ಷಾಂತರ ಶಾಖೆಗಳಿವೆ ಆರ್ ಎಸ್ಎಸ್ ಮತ್ತು ಬಜರಂಗದಳ, ಹಿಂದೂಗಳ ಧ್ವನಿಯಾಗಿದೆ" ಎಂದು ಹೇಳಿದ್ದರು.
ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಬಜರಂಗ ದಳ ಮತ್ತು ಆರೆಸ್ಸೆಸ್ ಆದರೂ ಬ್ಯಾನ್ ಮಾಡುವುದಾಗಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಇದೇ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡುತ್ತಿದೆ.












Click it and Unblock the Notifications