ಮೂವರು ಕನ್ನಡಿಗರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
ನವದೆಹಲಿ, ಜನವರಿ 17: ಮೂವರು ಕನ್ನಡಿಗರು ಸೇರಿ 49 ಜನರಿಗೆ ಇಂದು 2016ನೇ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು.

4 ಜನ ಸಾಧಕರಿಗೆ ಫೆಲೋಶಿಪ್ (ಅಕಾಡೆಮಿ ರತ್ನ) ಹಾಗೂ 45 ಜನ ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (ಅಕಾಡೆಮಿ ಪುರಸ್ಕಾರ)ವನ್ನು ಪ್ರದಾನ ಮಾಡಲಾಯಿತು.

ಇವರಲ್ಲಿ ಥಿಯೇಟರ್ ವಿಭಾಗದಲ್ಲಿ ಕರ್ನಾಟಕದ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಸಂಗೀತ ವಿಭಾಗದಲ್ಲಿ ಸುಗಮ ಸಂಗೀತ ಕಲಾವಿದೆ ರತ್ನಮಾಲಾ ಪ್ರಕಾಶ್, ವಯೋಲಿನ್ ವಾದಕ ಮೈಸೂರು ಮಂಜುನಾಥ್ ರಾಷ್ಟ್ರಪತಿಗಳಿಂದ ಅಕಾಡೆಮಿ ಪುರಸ್ಕಾರಗಳನ್ನು ಸ್ವೀಕರಿಸಿದರು.

ಕಲಾವಿದರು, ಗುರುಗಳು ಮತ್ತು ವಿಧ್ವಾಂಸರಿಗೆ ಈ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತದೆ.













Click it and Unblock the Notifications