ರಾಜ್ಯ ರಾಜಕೀಯದಲ್ಲಿ ಮತ್ತೆ CD ಸದ್ದು: ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ, ಸೆಪ್ಟೆಂಬರ್ 08: ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಡಿ ವಿಚಾರ ಸದ್ದು ಮಾಡುತ್ತಿದ್ದು, ಸಮ್ಮನೇ ಹೆದರಿಸುವ ಅಗತ್ಯವಿಲ್ಲ. ನಿಮ್ಮಲ್ಲಿ ಬಿಜೆಪಿ ನಾಯಕರ ಯಾವುದೇ ಸಿಡಿ ಇದ್ದರೂ ಬಿಡುಗಡೆ ಮಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್ ಗೆ ಸವಾಲು ಹಾಕಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಯಾವುದೇ ಸಿಡಿ ಇದ್ದರೆ ಮೊದಲು ಬಿಡುಗಡೆ ಮಾಡಿರಿ ಸುಮ್ಮನೆ ಏನು ಮಾತಾಡಬೇಡಿ. ಯಾವುದೇ ರೀತಿಯ ಹೆದಿಸುವುದು ಬೆದರಿಕೆ ಬೇಡಾ, ಇದು ಬಹಳ ದಿನ ನಡೆಯಲ್ಲ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯಂದ್ರ, ಆರ್ ಅಶೋಕ ಹೇಳಿದ್ದಾರೆಸಿಡಿ ಬಿಡುಗಡೆ ಮಾಡಿ ತನಿಖೆ ಮಾಡಿಸುಮ್ಮನೆ ಯಾವುದೇ ವಿಷಯ ತಂದು ವಿಷಯಾಂತರ ಮಾಡುವುದು ಬೇಡಾನಾನು ಇದಕ್ಕೆ ಅವಕಾಶ ಕೊಡಲ್ಲ ಎಂದರು.

ಮಹದಾಯಿ ಯೋಜನೆ ಜಾರಿಯಲ್ಲಿ ಯಾರು ವಿರೋಧ ವ್ಯಕ್ತಪಡಿಸಿದರು. ಅಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಇದ್ದಾಗ ನಿಯೋಗ ದಲ್ಲಿ ಕಾಂಗ್ರೆಸ್ ನವರು ಬಂದಿದ್ದರು, ನ್ಯಾಯಾಧೀಕಾರಣ ಮೊದಲು ಯೋಜನೆ ಜಾರಿಗೆ ಒತ್ತಾಯ ಮಾಡಿದರುನಮಗೂ ಕುಡಿಯುವ ನೀರು ಕೊಡಿ ಎಂದು ಹೇಳಿದರು.
ನ್ಯಾಯಾಧೀಕರಕ್ಕೆ ಸುಪರ್ದಿಗೆ ಕೊಟ್ಟರು ಆದರೆ ಬೇಗಾ ವರದಿ ಬರಲಿಲ್ಲ ನಂತರ ಪ್ರಧಾನಿ ನರೇಂದ್ರ ಮೋದಿ ಅವರು2014 ಕ್ಕೆ ಬಂದರು, ಆವಾಗ ವರದಿ ತೆಗೆದುಕೊಂಡವು. 2018 ಕ್ಕೆ ವರದಿ ತರಿಸವು, 2020 ರಲ್ಲಿ ಗೇಜೆಟ್ ಪಾಸ್ ಮಾಡಿದವು, 2022 ರಲ್ಲಿ ಕ್ಲೀಯನ್ಸ್ ಕೊಡಲಾಯಿತು. 2024 ಕ್ಕೆ ಡಿಪಿಆರ್ ಪಾಸ ಮಾಡಲಾಯಿತು. ಆದರೆ, ಜುಲೈ 31 ಕ್ಕೆ ಸಭೆ ಆಯಿತು ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಸಭೆ ಎಂದು ಹೇಳಿದರು.
ವನ್ಯ ಜೀವಿ ಯೋಜನೆ ಇದೆ ಅಂತಾ ಯಾರು ಹೇಳಲಿಲ್ಲ. ವನ್ಯ ಜೀವಿ ಮಂಡಳಿ ನೋಟೀಸ್ ಮೊದಲು ಕರ್ನಾಟಕ ಸರಕಾರಕ್ಕೆ ಬರುತ್ತದೆ. ಎಲ್ಲವನ್ನು ಉಲ್ಟಾ ಮಾಡಿದವರು ಕಾಂಗ್ರೆಸ್ ನವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ಅವರು ಒಂದು ಹನಿ ನೀರು ಕರ್ನಾಟಕಕ್ಕೆ ಕೊಡಲ್ಲ ಅಂತಾ ಹೇಳಿದ್ದರು. ಮೊದಲು ಇದಕ್ಕೆ ಉತ್ತರ ಕೊಡಿ, ಮುಡಾ, ವಾಲ್ಮೀಕಿ, ಇನ್ನು ಬೇರೆ ಬೇರೆ ಇಲಾಖೆಯಲ್ಲಿ ಕಾಂಗ್ರೆಸ್ ಕೈ ಇದೆ. ಇದು ಸ್ಪಷ್ಟವಾಗಿದೆ ಇದನ್ನು ಡೈವಲ್ಟ್ ಮಾಡಲಿಕ್ಕೆ ಏನೇನು ಮಾತನಾಡುತ್ತಾರೆ. ಮುಡಾ, ವಾಲ್ಮೀಕಿ, ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಆದ ಹಗರಣ ಕುರಿತು ಕಾಂಗ್ರೆಸ್ ನವರೇ ದಾಖಲೆ ಕೊಟ್ಟಿದ್ದಾರೆ. ಈಗ ನಾನು ಏನು ಹೇಳಲ್ಲ ಇದು ತನಿಖೆ ಆಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು.
-
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications