Prajwal Revanna: ಬೆಡ್‌ಗಳ ಮೇಲಿನ ಆ "ಕಲೆ"ಗಳ ಕಲಾಕಾರ ನಾನಲ್ಲ
Prajwal Revanna Case: ಪ್ರಜ್ವಲ್ ರೇವಣ್ಣ ಪ್ರಕರಣ ಬರೀ ರಾಜ್ಯ, ದೇಶ, ಅಲ್ಲದೆ ವಿದೇಶದಾದ್ಯಂತ ಸುತ್ತಕೊಂಡು ಬಂದಿದೆ. ಇನ್ನು ಇದೀಗ ಅತ್ಯಾಚಾರ ಪ್ರಕರಣದ ಆರೋಪಯಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ತನಿಖೆ ತೀವ್ರಗೊಳಿಸಿದ್ದು, ಅವರ ಮನೆಯಲ್ಲಿ ಬೆಡ್‌ಶೀಟ್‌ಗಳ ಮೇಲೆ ಸಂಶಯಸ್ಪಾದ ಕೆಲೆಗಳು ಕಂಡುಬಂದಿರುವ ಬಗ್ಗೆ ಪ್ರಶ್ನೆ ಮಾಡಿದೆ. ಹಾಗಾದರೆ ಈ ಬಗ್ಗೆ ಪ್ರಜ್ವಲ್ ರೇವಣ್ಣ ಅವರ ಪ್ರತಿಕ್ರಿಯೆ ಹೇಗಿತ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಡ್‌ಶೀಟ್ ಕಲೆಗಳ ಬಗ್ಗೆ ಎಸ್‌ಐ ಪ್ರಶ್ನಿಸಿದಾಗ ಪ್ರಜ್ವಲ್ ರೇವಣ್ಣ ಅವರು ಆ ಕಲೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಮೇ 29ರಂದು ಬಸವನಗುಡಿಯಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಮನೆಯನ್ನು ಕೋರ್ಟ್‌ನಲ್ಲಿ ಸರ್ಚ್ ವಾರೆಂಟ್ ಪಡೆದು ಎಸ್‌ಐಟಿ ಶೋಧಕ್ಕೊಳಪಡಿಸಿತ್ತು. ಪ್ರಜ್ವಲ್ ಆಗಮನಕ್ಕೂ ಒಂದು ದಿನ ಮೊದಲೇ ನಡೆಸಲಾದ ಈ ತಪಾಸಣೆಯ ವೇಳೆ ಅನುಮಾನದ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಲವು ವಸ್ತುಗಳನ್ನು ಕೊಂಡೊಯ್ಯಲಾಗಿದ್ದು ಈ ವೇಳೆ ಪತ್ತೆಯಾದ ವಸ್ತುಗಳ ಬಗ್ಗೆ ಕೋರ್ಟ್‌ಗೆ ಮಾಹಿತಿ ಒದಗಿಸಲಾಗಿದೆ.
ಎಚ್.ಡಿ.ರೇವಣ್ಣ ಅವರ ಮನೆಯಲ್ಲಿ ಪ್ರಕರಣದ ಎರಡನೇ ಆರೋಪಿ ಪ್ರಜ್ವಲ್ ಕೃತ್ಯ ಎಸಗಿದ ಸ್ಥಳದಲ್ಲಿ ಶೋಧಕಾರ್ಯ ನಡೆಸಿದ್ದು, ಈ ವೇಳೆ ತನಿಖೆಗೆ ಅವಶ್ಯಕ ಎಂದು ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ, ಡಬಲ್ ಕಾಟ್ ಹಾಸಿಗೆ ಮೇಲೆ ಅಲ್ಲಲ್ಲಿ ಇದ್ದ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದ ಬೆಡ್‌ಸ್ಪ್ರೆಡ್ ಕಂಡುಬಂದಿದ್ದು, ಈ ಕಲೆಗಳನ್ನು ಪ್ರಜ್ವಲ್ ಮುಂದೆ ಹಿಡಿದು ಪ್ರಶ್ನಿಸಿದಾಗ ಅವರು, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಒನ್ ಸೈಟ್ ಕಾಟ್ ಹಾಸಿಗೆ ಮೇಲೆಯೂ ಅಲ್ಲಲ್ಲಿ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದು, ಜೊತೆಗೆ ಒಂದು ಗ್ರೇ ಕಲರ್ ಅದರ ಮೇಲೆ ಸಿಲ್ವರ್ ಕಲರ್ ಕಲರ್‌ವುಳ್ಳ ವಾಲ್ ಪೇಪರ್ ತುಣುಕು ಸಿಕ್ಕಿದೆ. ಸದ್ಯ ಇದೀಗ ಎಸ್‌ಐಟಿ ಅಧಿಕಾರಿಗಳು ಇವುಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ತಜ್ಞರ ಪರೀಕ್ಷೆಗೆ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಅಲ್ಲದೆ ಅಶ್ಲೀಲ ವಿಡಿಯೋವನ್ನು ಮಾಡಿಕೊಂಡಿರುವ ಎನ್ನಲಾದ ಮೊಬೈಲ್ ಸಹ ಪ್ರಜ್ವಲ್ ಬಳಿ ಸಿಕ್ಕಿಲ್ಲ. ಈ ಬಗ್ಗೆ ಪ್ರಶ್ನಿ ಕೇಳಿದಾಗ, ಅದು ಒಂದು ವರ್ಷದ ಹಿಂದೆಯೇ ಕಳೆದುಹೋಗಿದೆ. ಈ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ ಎಂದು ಪ್ರಜ್ವಲ್ ರೇವಣ್ಣ ಅವರು ತಿಳಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇನ್ನು ಮಹತ್ವದ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿರುವ ಎಸ್‌ಐಟಿ ಅಧಿಕಾರಿಗಳ ತಂಡ ಪ್ರಜ್ವಲ್ ರೇವಣ್ಣ ಪಾಲ್ಗೊಂಡಿರಬಹುದಾದ ಕೃತ್ಯದ ಸಂಬಂಧ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಸಂಗ್ರಹ ಮಾಡುತ್ತಿದೆ ಎನ್ನಲಾಗಿದೆ.












Click it and Unblock the Notifications