Prajwal Revanna Case: ಬಿಟ್ಟು ಬಿಡದೇ ಕಾಡುತ್ತಿದೆ ಪೆನ್‌ ಡ್ರೈವ್‌ ಪ್ರಕರಣ; ದೇಶಕ್ಕೆ ಪ್ರಜ್ವಲ್‌ ರೇವಣ್ಣ ಬರುವುದು ಯಾವಾಗ?

ಬೆಂಗಳೂರು, ಮೇ 11: ರಾಜ್ಯದಲ್ಲಿ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ.

ಹೌದು, ಪ್ರಜ್ವಲ್‌ ರೇವಣ್ಣ ಸದ್ಯ ವಿದೇಶಕ್ಕೆ ಪರಾರಿಯಾಗಿದ್ದು, ಮಹಿಳೆಯ ಅಪಹರಣ ಕೇಸ್‌ ನಲ್ಲಿ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರನ್ನ ಈಗಾಗಲೇ ಬಂಧಿಸಿದ್ದಾರೆ. ಇತ್ತ ಎಸ್‌ ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣಗಾಗಿ ಹುಡುಕಾಟ ನಡೆಸಿದ್ದಾರೆ. ಏಪ್ರಿಲ್‌ 26 ರಂದು ಹಾಸನ ಲೋಕಸಭಾ ಚುನಾವಣೆ ನಡೆದಿದ್ದು, ಮತದಾನ ಮಾಡಿದ ಪ್ರಜ್ವಲ್‌ ರೇವಣ್ಣ ಅವರು ಅಶ್ಲೀಲ ದೃಶ್ಯಗಳು ಮೊಬೈಲ್‌ಗಳಲ್ಲಿ ಹರಿದಾಡಿದ್ದೇ ತಡ, ಊರು ಬಿಟ್ಟು ವಿದೇಶಕ್ಕೆ ಹೋಗಿದ್ದಾರೆ. ಇದೀಗ ಪ್ರಜ್ವಲ್‌ರನ್ನ ಕರೆ ತರೋದಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಆಗಿದೆ. ಪ್ರಜ್ವಲ್‌ ಎಲ್ಲಿದ್ದೀಯಪ್ಪಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆ ಜೋರಾಗಿದೆ.

Prajwal Case When will Prajwal Revanna come to the country

ಸಾಕಷ್ಟು ಮಹಿಳೆಯರ ಬೆತ್ತಲೆ ಫೋಟೋ, ವಿಡಿಯೋಗಳು ಹರಿದಾಡಿದ್ದೇ ತಡ, ಈ ಕುರಿತ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನೇನೋ ರಚನೆ ಮಾಡಿದೆ. ಆದರೆ, ಈ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಅವರೇ ಕೈಗೆ ಸಿಗುತ್ತಿಲ್ಲ. ವಿದೇಶದಲ್ಲಿ ಕೂತು ಸತ್ಯಕ್ಕೆ ಜಯ ಅಂತಾ ಹಾಸನ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಟ್ವೀಟ್ ಮಾಡಿದ್ದು ಬಿಟ್ಟರೆ ವಿಚಾರಣೆಗೆ ಹಾಜರಾಗೋದು ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಅತ್ಯಾಚಾರ , ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿದೇಶದಿಂದ ದೇಶಕ್ಕೆ ವಾಪಸ್‌ ಬಾರದಿರಲು ನಿರ್ಧಾರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಚುನಾವಣಾ ಫಲಿತಾಂಶದ ಬಳಿಕವೇ ವಿದೇಶದಿಂದ ದೇಶಕ್ಕೆ ಪ್ರಜ್ವಲ್ ರೇವಣಗಣ ವಾಪಸ್‌ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸದ್ಯ ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈವ್‌ ಪ್ರಕರಣದಿಂದಾಗಿ ಮೈತ್ರಿ ನಾಯಕರು ತೀವ್ರ ಮುಜುಗರವನ್ನ ಎದುರಿಸುತ್ತಿದ್ದು, ತಕ್ಷಣ ದೇಶಕ್ಕೆ ಹಿಂತಿರುಗಿದರೇ ತಕ್ಷಣ ಬಂಧನ ಜೊತೆಗೆ ವಿಚಾರಣೆ ಎದುರಿಸಬೇಕಾದ ಭೀತಿ ಎದುರಾಗಿದೆ. ಹೀಗಾಗಿ ಸದ್ಯ ಪ್ರಜ್ವಲ್‌ ರೇವಣ್ಣ ಅವರು ದೇಶಕ್ಕೆ ಬರುವುದು ಅನುಮಾನವಾಗಿದೆ.

ಒಂದು ವೇಳೆ ದೇಶಕ್ಕೆ ಪ್ರಜ್ವಲ್‌ ರೇವಣ್ಣ ಅವರ ಬಂದರೇ ಬಂಧನವಾದರೆ ಆರೋಪಗಳ ಸಂಬಂಧ ಮತ್ತಷ್ಟು ವಿಚಾರಗಳು ಬಯಲಾಗೋ ಆತಂಕ ಎದುರಾಗಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಮತ್ತಷ್ಟು ವಿಚಾರ ಬಯಲಾದರೆ ಕುಟುಂಬ ಹಾಗು ಪಕ್ಷಕ್ಕೆ ಹೆಚ್ಚಿನ ಮುಜುಗರದ ಭೀತಿವನ್ನುಂಟು ಮಾಡುತ್ತವೆ. ಹೀಗಾಗಿ ದೇಶಕ್ಕೆ ವಾಪಸ್‌ ಆಗುವುದನ್ನ ಪ್ರಜ್ವಲ್‌ ರೇವಣ್ಣ ಮುಂದೂಡುತ್ತಿದ್ದಾರೆ ಎನ್ನಲಾಗಿದೆ.

ಇತ್ತ ತಂದೆಯ ಬಂಧನವಾಗಿ ಜೈಲು ಸೇರಿದ್ರೂ ದೇಶಕ್ಕೆ ವಾಪಸ್ ಬರಲು ಪ್ರಜ್ವಲ್‌ ರೇವಣ್ಣ ಮನಸ್ಸು ಮಾಡಿಲ್ಲ. ವಿದೇಶದಲ್ಲಿದ್ದುಕೊಂಡೇ ಕಾನೂನಾತ್ಮಕ ರಕ್ಷಣೆಗಳ ಬಗ್ಗೆ ಮಾಹಿತಿಯನ್ನ ಪ್ರಜ್ವಲ್‌ ರೇವಣ್ಣ ಅವರು ತಿಳಿದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಚುನಾವಣಾ ಫಲಿತಾಂಶದ ಬಳಿಕ ಅಥವಾ ರೇವಣ್ಣಗೆ ಜಾಮೀನು ಮಂಜೂರಾದ ಬಳಿಕ ದೇಶಕ್ಕೆ ವಾಪಸ್ ಆಗಲು ತಿರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಬಂಧನವಾದಾಗ ಕನಿಷ್ಠ ತಂದೆ ಹೊರಗಿದ್ದರೆ ಕಾನೂನಾತ್ಮಕ ನೆರವಿಗೆ ಬೇಕಾದ ಪ್ರಯತ್ನ ಮಾಡಬಹುದು. ತಂದೆ ಜೈಲಿನಲ್ಲಿರುವಾಗಲೇ ತಾನು ಜೈಲು ಸೇರಿದ್ರೆ ಹೆಚ್ಚಿನ ಸಂಕಷ್ಟ ಎದುರಾಗುವ ಭೀತಿ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+