Prajwal Revanna: ದೇಶಕ್ಕೆ ಬರುತ್ತಿದ್ದಂತೆಯೇ ಅರೆಸ್ಟ್ ಆಗ್ತಾರಾ ಪ್ರಜ್ವಲ್ ರೇವಣ್ಣ?

ಬೆಂಗಳೂರು, ಮೇ 29: ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ರಾಷ್ಟ್ರಮಟ್ಟದಲ್ಲೂ ಬಾರೀ ಸದ್ದು ಮಾಡಿತ್ತು. ಪ್ರಜ್ವಲ್‌ ರೇವಣ್ಣ ದೇಶದಿಂದ ಪರಾರಿಯಾಗಿ ಬರೋಬ್ಬರಿ ಒಂದು ತಿಂಗಳ ನಂತರ ಪ್ರತ್ಯಕ್ಷರಾಗಿದ್ದಾರೆ.

ಪ್ರಜ್ವಲ್‌ ರೇವಣ್ಣ ಗಾಗಿ ಎಸ್‌ ಐಟಿ ಅಧಿಕಾರಿಗಳು ನಿರಂತರ ಹುಡುಕಾಟವನ್ನ ನಡೆಸುತ್ತಿದೆ. ಇತ್ತ ಮಹಿಳೆಯ ಅಪಹರಣ ಕೇಸ್‌ ನಲ್ಲಿ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರು ಜೈಲು ಪಾಲಾಗಿದ್ರು. ಇತ್ತ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರ ಕುಟುಂಬದವರು ಪ್ರಜ್ವಲ್‌ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಮುಜುಗರವನ್ನ ಅನುಭವಿಸಿದ್ದು, ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಎಚ್ಚರಿಕೆ ಬೆನ್ನಲ್ಲೇ ಎಸ್‌ ಐಟಿ ಮುಂದೆ ಹಾಜಾರಾಗುತ್ತೇನೆ ಎಂದು ಪ್ರಜ್ವಲ್‌ ರೇವಣ್ಣ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ದೇಶಕ್ಕೆ ಬರುತ್ತಿದ್ದಂತೆ ಎಸ್‌ ಐಟಿ ಅಧಿಕಾರಿಗಳು ಪ್ರಜ್ವಲ್‌ ಅವರನ್ನ ಅರೆಸ್ಟ್‌ ಮಾಡಲಿದ್ದಾರೆ.

Prajwal Case Prajwal Will Be Arrested As Soon As He Comes To The Country Says Parameshwar

ವಿಡಿಯೋ ಹಂಚಿಕೊಂಡ ಪ್ರಜ್ವಲ್‌ ಹೇಳಿದ್ದೇನು?

ದೇಶ ಬಿಟ್ಟು ವಿದೇಶಕ್ಕೆ ಹೋಗಿ ಬರೋಬ್ಬರಿ ಒಂದು ತಿಂಗಳ ನಂತರ ವಿದೇಶದಲ್ಲೇ ಕೂತು ವಿಡಿಯೋ ಹಂಚಿಕೊಂಡಿರುವ ಪ್ರಜ್ವಲ್‌ ರೇವಣ್ಣ ಅವರು ಕಾಂಗ್ರೆಸ್‌ ವಿರುದ್ಧ ಆರೋಪಿಸಿದ್ದಾರೆ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಭಾರೀ ಷಡ್ಯಂತ್ರಗಳೇ ನಡೆದಿವೆ. ಆದರೆ ನಾನು ಜನತೆಯನ್ನು ಕ್ಷಮೆ ಕೇಳುವೆ. ಈ ತಿಂಗಳು 31ಕ್ಕೆ ದೇಶಕ್ಕೆ ವಾಪಾಸಾಗುವೆ. ವಿಶೇಷ ತನಿಖಾತಂಡದ ಎದುರು ಅಂದು ಮೇ 31 ರಂದು ಬೆಳಿಗ್ಗೆ 10 ಗಂಟೆಗೆ ಹಾಜರಾಗುವೆ. ಎಲ್ಲಾ ವಿಚಾರಣೆಯನ್ನು ಎದುರಿಸಿವೆ ಎಂದು ಹೇಳಿಕೊಂಡಿದ್ದಾರೆ.

ನಾನು ರಾಜ್ಯದ ಜನತೆ, ಜೆಡಿಎಸ್ ಕಾರ್ಯಕರ್ತರು, ತಮ್ಮ ತಂದೆ, ತಾಯಿ,ತಾತ. ಕುಮಾರಣ್ಣ ಮತ್ತು ಕುಟುಂಬದವರ ಬಳಿ ಕ್ಷಮೆ ಕೇಳುವೆ. ನಾನು ವಿದೇಶದಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುವೆ. ದೇವರ ಆಶೀರ್ವಾದ, ಕುಟುಂಬದ ಆಶೀರ್ವಾದ ಮತ್ತು ಜನರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಪ್ರಜ್ವಲ್‌ ಕೇಳಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಮತದಾನ ಮಾಡಿ ಮರು ದಿನ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಎಸ್‌ಐಟಿ ಕೂಡ ರಚನೆ ಆಗಿರಲಿಲ್ಲ. ಏ.26ರಂದು ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿರ್ಧರಿತವಾಗಿತ್ತು. ವಿದೇಶದಲ್ಲಿ ಉಳಿದುಕೊಂಡು ಮೂರ್ನಾಲ್ಕು ದಿನದ ಬಳಿಕ ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನೆಲ್ ನೋಡುವ ವೇಳೆ ವಿಡಿಯೋ ಬಿಡುಗಡೆ, ಪ್ರಕರಣ ದಾಖಲಾದ ಮಾಹಿತಿ ನನಗೆ ಗೊತ್ತಾಯಿತು. ಇದಾದ ನಂತರ ಎಸ್ಐಟಿ ಕೂಡ ನನಗೆ ನೋಟಿಸ್ ನೀಡಿತು. ಎಸ್‌ಐಟಿ ನೋಟಿಸ್‌ಗೆ ಎಕ್ಸ್‌ ಖಾತೆ ಮತ್ತು ನಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆಎಂದು ಪ್ರಜ್ವಲ್‌ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ಟಿವಿಗಳಲ್ಲಿಯೇ ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆ. ಹಾಸನದಲ್ಲಿ ಎಲ್ಲ ನನ್ನ ವಿರುದ್ಧದ ಶಕ್ತಿಗಳು ಒಟ್ಟಾಗಿ ಭಾರೀ ಪಿತೂರಿಯನ್ನೇ ಮಾಡಿದ್ದಾರೆ. ರಾಜಕೀಯವಾಗಿ ನಾನೇನು ಬೆಳೆಯುತ್ತಿದ್ದೇನೆ, ಅದನ್ನು ಮುಗಿಸಬೇಕು ಎನ್ನುವ ಕಾರಣದಿಂದಲೇ ಬೇರೆ ಬೇರೆ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಪ್ರಜ್ವಲ್‌ ಆರೋಪಿಸಿದ್ದಾರೆ ಆರೋಪಿಸಿದ್ದಾರೆ.

ದೇಶಕ್ಕೆ ಬರುತ್ತಿದ್ದಂತೆ ಪ್ರಜ್ವಲ್‌ ಅರೆಸ್ಟ್!‌

ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮೇ 31 ರಂದು ಭಾರತಕ್ಕೆ ಮರಳಿದ ತಕ್ಷಣ ಬಂಧಿಸಿ ವಿಚಾರಣೆ ನಡೆಸಲಿದೆ ಎಂದು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಹೇಳಿದ್ದಾರೆ.

ಎಸ್‌ಐಟಿ ಬಳಿ ಇರುವ ಮಾಹಿತಿ ಮತ್ತು ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ಅರೆಸ್ಟ್ ವಾರೆಂಟ್ ಈಗಾಗಲೇ ಜಾರಿಯಾಗಿರುವುದರಿಂದ, ತನಿಖೆಯ ಭಾಗವಾಗಿ ಬಂಧಿಸಬೇಕು. ಪ್ರಜ್ವಲ್ ಅವರು ಎಸ್‌ಐಟಿಗೆ ಏನು ಹೇಳಿಕೆ ನೀಡಬೇಕೋ ಅದನ್ನು ನೀಡಲಿ. ತನಿಖಾ ತಂಡ ಮುಂದಿನ ಕ್ರಮ ಕೈಗೊಳ್ಳಲಿದೆ. ಇಂತಹ ಘಟನೆ ರಾಜ್ಯದಲ್ಲಿ ಹಿಂದೆಂದೂ ನಡೆದಿಲ್ಲ. ಅವರು ಮೊದಲು ರಾಜ್ಯಕ್ಕೆ ಬಂದು ತನಿಖೆ ಎದುರಿಸಲಿ ಎಂದು ಡಾ.ಪರಮೇಶ್ವರ ಹೇಳಿದರು.

ಇನ್ನೂ ಪ್ರಜ್ವಲ್ ಪತ್ತೆಗೆ ನಾವು ಎಲ್ಲಾ ಪ್ರಯತ್ನ ಮಾಡ್ತಾ ಇದ್ದೇವೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವಾರೆಂಟ್ ತೆಗೆದುಕೊಂಡು ಮಿನಿಸ್ಟ್ರಿ ಆಫ್ ಹೋಂಗೆ ತಿಳಿಸಲಾಗಿದೆ‌. ಬ್ಲೂ ಕಾರ್ನರ್ ನೋಟಿಸ್ ಕೊಡಲಾಗಿದೆ. ಲೋಕೆಶನ್ ತಿಳಿದುಕೊಂಡು ಇಂಟರ್ ಪೋಲ್ ಅವರು ಟ್ರೇಸ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಜ್ವಲ್ ಅವರು ನಾನು ವಾಪಸ್ ಬರ್ತೀನಿ ಅಂತಾ ತಿಳಿಸಿದ್ದಾರೆ. ವಾಪಸ್ ಬರುವುದಾಗಿ ತಿಳಿಸಿರುವ ಪ್ರಜ್ವಲ್ ರೇವಣ್ಣ ನಿರ್ಧಾರ ಬಹಳ ಸೂಕ್ತ. ಯಾಕೆಂದ್ರೆ, ಕಾನೂನಿಂದ‌ ಯಾರು ತಪ್ಪಿಸಿಕೊಳ್ಳೊಕೆ ಆಗಲ್ಲ. ಮೇ 31 ಅವರ ಪಾಸ್ ಪೋರ್ಟ್ ಎಕ್ಸ್ಪೇರ್ ಆಗುತ್ತೆ. ಇದೆಲ್ಲಾ ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+