ರಾಜ್ಯಕ್ಕೆ ಪ್ರಜ್ವಲ್ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ ಕುಮಾರಸ್ವಾಮಿ.. ಕಾರಣವೇನು?
ಬೆಂಗಳೂರು, ಮೇ 31: ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ರಾಷ್ಟ್ರಮಟ್ಟದಲ್ಲೂ ಬಾರೀ ಸದ್ದು ಮಾಡಿದ್ದು, ಗುರುವಾರ ತಡರಾತ್ರಿ ಪ್ರಜ್ವಲ್ ಅವರನ್ನ ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇತ್ತ ಪ್ರಜ್ವಲ್ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರು ಬಿಟ್ಟು ತಮ್ಮ ಕುಟುಂಬದ ಸಮೇತ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೌದು, ಪ್ರಜ್ವಲ್ ರೇವಣ್ಣ ಅವರ ಪ್ರಕರಣದಿಂದಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬ ತೀವ್ರ ಮುಜುಗರವನ್ನ ಅನುಭವಿಸಿದೆ.ಸದ್ಯ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ತಮ್ಮ ಇಡೀ ಕುಟುಂಬ ಸಮೇತ ರೆಸಾರ್ಟ್ ಒಂದಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಜ್ವಲ್ ಆಗಮನ ಮತ್ತು ಆ ಬಳಿಕ ನಡೆಯುವ ರಾಜಕೀಯ ಚರ್ಚೆಗಳಿಂದ ತಪ್ಪಿಸಿಕೊಳ್ಳಲು ಹಾಗೂ ಮುಜುಗರದಿಂದ ಪಾರಾಗಲು ಕುಟುಂಬ ಸಮೇತ ಪ್ರವಾಸ ಹೋಗಿದ್ದಾರೆ ಎನ್ನಲಾಗಿದೆ.

ಧರ್ಮಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು, ಪುತ್ರ ನಿಖಿಲ್ ಕುಮಾರಸ್ವಾಮಿ ಅವರು, ಸೊಸೆ ರೇವತಿ ಅವರು ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜತೆಯಲ್ಲಿದ್ದಾರೆ.
ಏಪ್ರಿಲ್ 26 ರಂದು ಹಾಸನದಲ್ಲಿ ನಡೆದ ಮತದಾನಕ್ಕೂ ಎರಡು ದಿನ ಮೊದಲೇ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈ ಪ್ರಕರಣ ತೀವ್ರ ಸದು ಮಾಡಿತ್ತು. ಒಂದು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೆಲ ದಿನಗಳ ಹಿಂದೆಯಷ್ಟೇ ನಾನು ಬಂದು ಎಸ್ ಐಟಿ ತನಿಖೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿರು. ಅದರಂತೆ ಪ್ರಜ್ವಲ್ ರೇವಣ್ಣ ಗುರುವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಬರೋಬ್ಬರಿ ಒಂದು ತಿಂಗಳು ಕಳೆದ್ರೂ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣಕ್ಕೆ ಮುಕ್ತಿನೇ ಸಿಗಲಿಲ್ಲ.ರಾಜ್ಯದಲ್ಲಿ ತಲೆ ಎತ್ತಿ ಮೆರೆದಿದ್ದ ದೊಡ್ಡ ಗೌಡರ ಕುಟುಂಬವನ್ನ ತಲೆತಗ್ಗಿಸುವಂತೆ ಮಾಡಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಇತ್ತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪರೇಡ್ ಮುಗಿಸಿ ದೇವರ ಮೊರೆ ಹೋಗಿದ್ದಾರೆ. ಇನ್ನೂ ಬೇಲ್ಗೆ ಅರ್ಜಿ ಸಲ್ಲಿಸಿ ರೇವಣ್ಣ ಅವರ ಪತ್ನಿ ಭವಾನಿ ಸಹ ಕಾಣಿಸಿಲ್ಲ. ಸಹೋದರ ಸೂರಜ್ ಅದೆಲ್ಲಿದ್ದಾರೆ ಅನ್ನೋದು ಕುಟುಂಬಕ್ಕಷ್ಟೇ ಗೊತ್ತಿದೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ್ದ ಕುಮಾರಸ್ವಾಮಿಗೆ ಈ ಪ್ರಕರಣ ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತ್ಯುತ್ತರ ಕೊಡುವ ಜವಾಬ್ದಾರಿ ನಿಭಾಯಿಸಿದ್ರು. ಹಿಯಾಳಿಕೆ, ಅವಮಾನ, ಅಸಮಾಧಾನಗಳಿಂದ ಕುಮಾರಸ್ವಾಮಿ ಅವರು ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಅಷ್ಟಾಗಿ ಕಾಣಿಸಿಕೊಂಡಿದ್ದೆ ಇಲ್ಲ. ಸದ್ಯ ಪರಿಸ್ಥಿತಿ ಕಾರ್ಮೋಡಕ್ಕೆ ಸರಿಯುತ್ತಿದ್ದು, ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಕುಮಾರಸ್ವಾಮಿ ಪ್ರವಾಸಕ್ಕೆ ತೆರಳಿದ್ದಾರೆ.
ಇನ್ನೂ ಕುಮಾರಸ್ವಾಮಿ ಅವರ ಕುಟುಂಬ ಜೊತೆಗೆ ಪ್ರವಾಸ ಮಾಡುವುದು ಹೊಸದೇನಲ್ಲ. ಈ ಹಿಂದೆ ಯುರೋಪ್,ಅರಬ್ ಕಂಟ್ರಿಗಳಿಗೆ ಫ್ಯಾಮಿಲಿ ಟ್ರಿಪ್ ಮಾಡಿದ್ರು. ಆದ್ರೆ, ಆಗಿನ ಪರಿಸ್ಥಿತಿ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಪ್ರಜ್ವಲ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರಿಗೆ ಬೇಸರ ತರಿಸಿದೆ. ಪ್ರಜ್ವಲ್ ಆಗಮನದ ಹಿನ್ನೆಲೆ, ತಮ್ಮ ಮುಖ ದರ್ಶನಕ್ಕೂ ಅವಕಾಶ ಸಿಗದಂತೆ ದೂರ ತೆರಳಿದ್ದಾರೆ. ಅಲ್ಲದೇ ಒಂದು ವೇಳೆ ಇಂದು ಪ್ರಜ್ವಲ್ ರೇವಣ್ಣ ಅವರ ಬಂಧನವಾದ್ರೆ ಮತ್ತೊಮ್ಮೆ ಕುಟುಂಬಕ್ಕೆ ಮುಜುಗರ ತರಲಿದೆ. ಕಾಂಗ್ರೆಸ್ ನಾಯಕರ ವಾಗ್ದಾಳಿಗಳನ್ನ ಎದುರಿಸೋದು ಕಷ್ಟ. ಅಲ್ಲದೆ, ಲೈಂಗಿಕ ಕೇಸ್ನಲ್ಲಿ ನಾಯಕರ ಆರೋಪಗಳಿಗೆ ಉತ್ತರ ನೀಡೋದು ಅಸಾಧ್ಯ ಎಂದು ಕುಮಾರಸ್ವಾಮಿ ಕುಟುಂಬದವರ ಜೊತೆ ಪ್ರವಾಸದಲ್ಲಿದ್ದಾರೆ.












Click it and Unblock the Notifications