ಪ್ರಜ್ವಲ್‌ ವಿಡಿಯೋ ಬಗ್ಗೆ ಜನವರಿ ತಿಂಗಳಲ್ಲೇ ಡಿ ಕೆ ಶಿವಕುಮಾರ್‌ ಭೇಟಿ ಮಾಡಿದ್ರಾ ರೇವಣ್ಣ ಪುತ್ರ?

ಹಾಸನ, ಮೇ 02: ರಾಜ್ಯದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ವಿಚಾರವಾಗಿ ಸದ್ದು ಜೋರಾಗಿದೆ. ಇದರ ಬೆನ್ನಲ್ಲೇ ಕಳೆದ ಜನವರಿಯಲ್ಲಿ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರ ಪುತ್ರ ಹಾಗೂ ಪ್ರಜ್ವಲ್‌ ,ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ವಿಚಾರ ಮುನ್ನಲೆಗೆ ಬಂದಿದೆ.

ಹೌದು, ಕಳೆದ ಜನವರಿ ತಿಂಗಳಿನಲ್ಲೇ ಈ ಪೆನ್‌ ಡ್ರೈವ್‌ ವಿಚಾರವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರನ್ನ ತಮಗೆ ನೆರವಾಗುವಂತೆ ಕೋರಲು ಸೂರಜ್‌ ಅವರು ಭೇಟಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಕಳೆದ ಜನವರಿ ತಿಂಗಳಿನಲ್ಲಿ ಗ್ರಾಂಟ್ಸ್‌‌ಗಳು ಮತ್ತು ಎಲ್‌ಓಸಿ ವಿಷಯವಾಗಿ ಭೇಟಿ ಮಾಡಿದ್ದೆ. ನಮ್ಮ ಕ್ಷೇತ್ರ, ನಮ್ಮ ಜಿಲ್ಲೆಯ ಪ್ರತಿನಿಧಿ ಇದ್ದೀನಿ. ಡಿ ಕೆ ಶಿವಕುಮಾರ್‌ ಅವರನ್ನ ನಾನು ನಿಜ ಎಂದು ಹೇಳಿದ್ದಾರೆ.

Prajwal Case Did Suraj Revanna Meet DK Shivakumar To Discuss Prajwal Revanna Video

ಒಂದುವರೆ ತಿಂಗಳಿನಿಂದ ಎಲೆಕ್ಷನ್‌ನಲ್ಲಿ ಇಲ್ಲೇ ಬ್ಯುಸಿ ಇದ್ದೀನಿ. ಬೆಂಗಳೂರಿಗೆ ಇವತ್ತಿನವರೆಗೂ ಹೋಗಿಲ್ಲ, ಒಂದು‌ ದಿನನೂ ಕೂಡ ಹೋಗಿಲ್ಲ, ಒಂದುವರೆ ತಿಂಗಳಿನಿಂದ ಬೆಂಗಳೂರಿಗೂ ಹೋಗಿಲ್ಲ. ಡಿ.ಕೆ.ಶಿವಕುಮಾರ್ ಆಗಲಿ ಬೇರೆ ಯಾವುದೇ ರಾಜಕಾರಣಿ ಆಗಲಿ ಭೇಟಿ ಮಾಡುವ ಸಂದರ್ಭ ಎಲ್ಲಿ ಬರುತ್ತದೆ. ನಮ್ಮ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸೌಹಾರ್ದವಾಗಿ ಭೇಟಿ ಮಾಡಿದ್ದು ನಿಜ ಎಂದು ಸ್ಪಷ್ಟ ಪಡಿಸಿದರು.

ದಯವಿಟ್ಟು ರಾಜ್ಯದ ಜನತೆಗೆ ಒಂದು ಸ್ಪಷ್ಟನೆ ಇರಲಿ. ಯಾವುದೇ ತರಹದ ವಿಷಯಗಳ ಬಗ್ಗೆ ದುರಾಲೋಚನೆ ಇರಬಾರದು, ಪ್ರಕರಣವನ್ನ ತನಿಖೆಗೆ ವಹಿಸಿದಾರೆ ಅಲ್ಲಿ ಏನು ಸಾಭೀತಾಗಬೇಕೊ ಸಾಬೀತಾಗಲಿದೆ. ಈ ಬಗ್ಗೆ ನಾನು ಏನು ಮಾತನಾಡಲಿ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ವಿದೇಶದಿಂದ ಯಾವಾಗ ಬರಲಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಪ್ರಜ್ವಲ್ ಬಗ್ಗೆ ನನಗೆ ಮಾಹಿತಿ ಇಲ್ಲ. ಇಲ್ಲಿ ನಾವು ಏನು ಕಾರ್ಯಕ್ರಮ ಅಟೆಂಡ್ ಆಗಬೇಕು ನಮ್ಮ ಕೆಲಸ ನಾನು ಮಾಡ್ತಾ ಇದೀನಿ. ರೇವಣ್ಣ ಅವರು ಏನೆಂದು ನಮ್ಮ ಜಿಲ್ಲೆಯ ಜನರಿಗೆ ಗೊತ್ತು ನಮ್ಮ ತಾಲ್ಲೂಕಿನ ಜನರಿಗೆ ಗೊತ್ತು. ಅಂತಹ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಿದ್ದರೂ ಮಾಡ್ತಾರೆ. ಹಾಸನ ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿರೋಧ ಅಥವಾ ಪ್ರತಿಸ್ಪರ್ಧಿ ಇಲ್ಲ ಎಂದು ಹೇಳಿದರು.

ಪ್ರಜ್ವಲ್‌ ಅವರನ್ನ ಸಿಲುಕಿಸಬೇಕು, ವೀಕ್ ಮಾಡಬೇಕು ಎಂದು ಶಡ್ಯಂತ್ರ ಮಾಡ್ತಾ ಇದಾರೆ. ಯಾವ ಕಾರ್ಯಕರ್ತರು, ಯಾರೂ ಗೊಂದಲದಲ್ಲಿ ಇಲ್ಲ, ಹಾಸನದಲ್ಲಿ ನಾವು ಸಭೆ ಮಾಡಿದ್ದೇವೆ. ಚುನಾವಣೆ ಯಾವ ರೀತಿ ಆಗಿದೆ ಎಂದು ಎಲ್ಲಾ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ನೂರಕ್ಕೆ ನೂರು ಪ್ರಜ್ವಲ್‌ರೇವಣ್ಣ ಅವರು ಗೆಲ್ಲುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+