ಕರ್ನಾಟಕದಲ್ಲಿ ನವೆಂಬರ್ 1ರಿಂದ ಹಿಂಗಾರು ಮಳೆ ಶುರು

ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ನವೆಂಬರ್ 1ರಿಂದ ಹಿಂಗಾರು ಮಳೆಯ ಆರ್ಭಟ ಶುರುವಾಗಲಿದೆ. ಈಗಾಗಲೇ ಪ್ರವಾಹದಿಂದ ನಲುಗಿರುವ ಕರ್ನಾಟಕದಹಲವು ಜಿಲ್ಲೆಗಳಲ್ಲಿ ಹಿಂಗಾರಿನಲ್ಲೂ ವಿಪರೀತ ಮಳೆಯಾಗುವ ಸಾಧ್ಯತೆ ಇದೆ.

ನವೆಂಬರ್ 1 ರ ಹೊತ್ತಿಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುಉವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿರಲಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೆ ಭಾರೀ ಮಳೆಯಿಂದಾಗಿ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಈ ಬಾರಿಯ ಹಿಂಗಾರು ಮಳೆ ತಡವಾಗಿ ಅಂದರೆ ಅಕ್ಟೋಬರ್ 28 ರಿಂದ ಆರಂಭವಾಗಿದೆ. ಮುಂಗಾರಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದೀಗ ದಕ್ಷಿಣ ಒಳನಾಡಿನ ವ್ಯಾಪ್ತಿಯಲ್ಲೇ ಹೆಚ್ಚು ಪ್ರಭಾವ ಬೀರುವ ಹಿಂಗಾರು ಮಳೆ ನಿನ್ನೆಯಿಂದ ಆರಂಭವಾಗಿದೆ.

Post Monsoon Starts From November 1 In Karnataka

ನೈಋುತ್ಯ ಮುಂಗಾರಿನ ಕೊನೆಯ ದಿನವಾದ ಬುಧವಾರ ಬೆನ್ನಿಗಾನಹಳ್ಳಿಯಲ್ಲಿ ಒಂದು ಮಿ.ಮೀ. ಮಳೆಯಾಗಿದೆ. ಇಡೀ ರಾಜ್ಯದಲ್ಲಿ ಬೇರೆಲ್ಲೂ 1 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿಲ್ಲ.

ಹಾಲಿ ಅಕ್ಟೋಬರ್‌ ತಿಂಗಳಿನಲ್ಲಿ ಈವರೆಗೆ ಒಟ್ಟು 204 ಮಿ.ಮೀ. ಮಳೆಯಾಗಿದ್ದು, ಎರಡು ವರ್ಷದಿಂದೀಚೆಗೆ ಹೆಚ್ಚಿನ ಪ್ರಮಾಣದ ಮಳೆ ದಾಖಲಾಗಿದೆ.

ನಗರದಲ್ಲಿ ಅಕ್ಟೋಬರ್‌ ಮಾಸದಲ್ಲಿ ವಾಡಿಕೆಯಂತೆ 168.3 ಮಿ.ಮೀ. ಮಳೆಯಾಗುತ್ತದೆ. 2018ರಲ್ಲಿ 111.7 ಮಿ.ಮೀ. ಹಾಗೂ 2019 ರಲ್ಲಿ 178.4 ಮಿ.ಮೀ.ನಷ್ಟು ವರ್ಷಧಾರೆಯಾಗಿದೆ. ಕಳೆದೆರಡು ವರ್ಷಕ್ಕೆ ಹೋಲಿಸಿದಲ್ಲಿ ಹಾಲಿ ಅಕ್ಟೋಬರ್‌ನಲ್ಲಿ ಹೆಚ್ಚು ಮಳೆ ಬಿದ್ದ ದಾಖಲೆಯಾಗಿದೆ.

ಹಿಂಗಾರು ಮಾರುತಗಳು ಆರಂಭವಾಗಿದ್ದರೂ, ಬೆಂಗಳೂರಿಗೆ ಇನ್ನೂ 2-3 ದಿನ ಮಳೆಯಾಗುವ ಸಾಧ್ಯತೆ ಇಲ್ಲ. ಭಾನುವಾರದಿಂದ ಎರಡು ದಿನ ಪಾಲಿಕೆ ವ್ಯಾಪ್ತಿಯ ಕೆಲವೆಡೆ ಸಾಧಾರಣ ಪ್ರಮಾಣದ ಮಳೆ ನಿರೀಕ್ಷಿಸಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+