ನಟ ದರ್ಶನ್ ರಾಜಾತಿಥ್ಯಕ್ಕೆ ಸಿದ್ಧವಾಗಿದೆಯಾ ಬಳ್ಳಾರಿ? ಗಡಿ ಜಿಲ್ಲೆಗೆ ಶಿಫ್ಟ್ ಆಗಿದ್ದರ ಹಿಂದೆ ಇದೆಯಾ ರಾಜಕೀಯ?
ಬೆಂಗಳೂರು, ಆಗಸ್ಟ್ 28: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಆದರೆ ಜೈಲಿನಲ್ಲಿನ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದು, ನಟನಿಗೆ ಕಂಠಕವಾಗಿದೆ. ಇಂದು ನಟ ದರ್ಶನ್ ಅನ್ನು ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಈ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ನಟ ದರ್ಶನ್ ಅವರನ್ನು ಬಚಾವ್ ಮಾಡಲು ರಾಜಕಾರಣಿಗಳು ಒತ್ತಡ ಹೇರುತ್ತಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಒತ್ತಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಪ್ಪು ಹಾಕಿರಲಿಲ್ಲ. ಆದರೆ ವೈರಲ್ ಆದ ಜೈಲಿನಲ್ಲಿದ್ದ ದರ್ಶನ್ ಮತ್ತು ಸಹಚರರ ಫೋಟೋ ವಿಡಿಯೋ ಇದೀಗ ದರ್ಶನ್ ಬೆನ್ನಗೆ ನಿಂತ ರಾಜಕಾರಣಿಗಳಿಗೇ ವರವಾದಂತೆ ಕಾಣುತ್ತಿದೆ.

ದರ್ಶನ್ ಕೇಸ್: ಆರಂಭದಿಂದಲೇ ರಾಜಕೀಯ ಪ್ರಭಾವ
ರೇಣುಕಾಸ್ವಾಮಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಪ್ರೂವರ್ ಆದವರನ್ನು ಹಿಡಿದು ವಿಚಾರಿಸಿದ ಮೇಲೆ ಡಿ.ಬಾಸ್ ಹೆಸರು ಹೊರ ಬಂದಿದ್ದೇ ತಡ, ಪೊಲೀಸರು ಮೈಸೂರಿಗೆ ಬಂಧನಕ್ಕೆ ತೆರಳಿದರು. ಈ ವೇಳೆಯು ಸಹ ತನ್ನ ಪ್ರಭಾವ ಬಳಸಲು ನಟ ದರ್ಶನ್ ಮುಂದಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.
ಇದಕ್ಕೂ ಮೊದಲು ವಿಚಾರ ಪೊಲೀಸ್ ಹಿರಿಯ ಅಧಿಕಾರಿಗಳ ಮಟ್ಟದ್ದಲ್ಲಿದ್ದಾಗಲೇ ಬಂಧಿಸದಂತೆ ಕೆಲವು ಪ್ರಭಾವಿ ರಾಜಕಾರಣಿಗಳು 100ಕ್ಕೂ ಹೆಚ್ಚು ಭಾರಿ ಪೊಲೀಸ್ ಅಧಿಕಾರಿಗಳೀಗೆ ಕರೆ ಮಾಡಿದ್ದರು. ಅಂದಿನಿಂದ ನಟ ದರ್ಶನ್ ಜೈಲಿಗೆ ಕಳುಹಿಸದಂತೆ ಒಂದಷ್ಟು ರಾಜಕೀಯ ನಡೆಯುತ್ತಲೇ ಇತ್ತು. ಇದೀಗ ಬಳ್ಳಾರಿಗೆ ದರ್ಶನ್‌ನನ್ನು ಶಿಫ್ಟ್ ಮಾಡುವ ಮುಖೇನ ಮತ್ತೆ ಅದಕ್ಕೆಲ್ಲ ಅವಕಾಶ ಸಿಕ್ಕಂತಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಟ ದರ್ಶನ್ ಗೆ ಪ್ರಭಾವಿಗಳೇ ಬೆಂಗಾವಲು?
ಸಿಎಂ ಸಿದ್ದರಾಮಯ್ಯ ಅವರು ನಟ ದರ್ಶನ್ ಬಂಧನ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡದೇ ಪೊಲೀಸರಿಗೆ ಎಲ್ಲ ಸ್ವಾತಂತ್ರ್ಯ ನೀಡಲಾಗಿತ್ತು. ಆದರೆ ತೆರೆಮರೆಯಲ್ಲಿ ಕೆಲವರಿಂದ ರಾಜಕೀಯ ನಡೆಯುತ್ತಲೇ ಇತ್ತು. ಅಲ್ಲದೇ ಹತ್ಯೆ ಬಳಿಕ ಪೊಲೀಸ್ ಬಂಧನ ಮೊದಲೇ ನಟ ದರ್ಶನ್ ಹಲವು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಪ್ರಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಾಡಿದ್ದರು.
ಈ ಮೂಲಕ ಪ್ರಕರಣದ ಪ್ರತಿ ಹಂತದಲ್ಲಿ ರಾಜಕೀಯ ಪ್ರಭಾವಿಗಳ ಒತ್ತಾಡ ಕಂಡು ಬಂತು. ಅಲ್ಲದೇ ಸಚಿವ ಸಂಪುಟ ಸಭೆಯಲ್ಲೂ ಸಹ ಯಾರೊಬ್ಬ ಸದಸ್ಯರು ನಟ ದರ್ಶನ್ ಪ್ರಕರಣ ಬಗ್ಗೆ ಮಾತನಾಡದಂತೆ ಸ್ವತಃ ಸಿಎಂ ಸಿದ್ದರಾಮಯ್ಯವನರೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಏನೇ ಪ್ರಭಾವ ಬೀರಿದ್ದರೂ ಪೊಲೀಸರು ಸೊಪ್ಪು ಹಾಕಿರಲಿಲ್ಲ. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಆರಾಮಾಗಿ ಕೂತು, ಕೈಲಿ ಟೀ ಸಿಗರೇಟು ಹಿಡಿದ ಫೋಟೋಗಳು, ವಾಟ್ಸಾಪ್ ವಿಡಿಯೋ ಕಾಲ್‌ಗಳ ವಿಡಿಯೋ ಹೊರ ಬಂದ ಬಳಿಕ ಸರ್ಕಾರ ಮುಜಗರ ಎದುರಿಸಿದೆ. ವಿಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ರಾಜ್ಯ ಗೃಹ ಇಲಾಖೆ ಸ್ಪಷ್ಟನೆ ಕೊಡಲು ಸಹ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಬಳ್ಳಾರಿ ಜೈಲಿಗೆ ಶಿಫ್ಟ್ ಹಿಂದೆ ರಾಜಕೀಯ?
ಇದರ ಬೆನ್ನಲ್ಲೆ ದರ್ಶನ್ ಹಿಂದಿರುವ ಕೆಲ ರಾಜಕೀಯ ಶಕ್ತಿಗಳಿಗೆ ಮತ್ತೆ ಉತ್ಸಾಹ ಬಂದಂತಾಗಿದೆ. ಜೈಲಿನ ರಾಜಾತಿಥ್ಯ ಆರೋಪ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ನಟ ದರ್ಶನ್ ಅನ್ನು ಶಿಫ್ಟ್ ಮಾಡಲಾಗುತ್ತಿದೆ. ಇದಕ್ಕೆ ಬಳ್ಳಾರಿ ಉಸ್ತುವಾರಿಯಾಗಿರುವ ಪ್ರಭಾವಿ ನಾಯಕನಿಗೂ ಸಂಬಂಧ ಇದೆ. ಈ ಜೈಲಿನಲ್ಲಿ ಎಲ್ಲವು ಸುಲಲಿತ. ಇಲ್ಲಿ ಸಹ ರಾಜತಿಥ್ಯ ನೀಡಲು ವೇದಿಕೆ ಸಿದ್ಧವಾಗಿದೆ. ಹೀಗಾಗಿ ದರ್ಶನ್ ಯಾವ ಜೈಲಿನಲ್ಲಿದ್ದರೂ ಆರಾಮಾಗಿ ಇರುತ್ತಾರೆ. ಕಾರಣ ಅವರ ಹಿಂದಿರುವ ರಾಜಕೀಯ ಶಕ್ತಿಗಳು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿವೆ.
ಕಾರಣ, ಬೆಂಗಳೂರಿನಲ್ಲಿ ದರ್ಶನ್ ಬೆಂಬಲಿಸಿದವರೇ, ಇದೀಗ ಬಳ್ಳಾರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಲ್ಲದೇ, ಬಳ್ಳಾರಿ ಜೈಲಿನಲ್ಲಿ ಎಲ್ಲವು ಸಿಗುತ್ತಿದೆ ಎಂದು ಅಲ್ಲಿಂದ ಹೊರ ಬಂದಿರುವ ಮಾಜಿ ಖೈದಿಗಳು ವಿವರಣೆ ನೀಡಿದ್ದಾರೆ. ಇದೀಗ ಫೇಸ್ ವ್ಯಾಲ್ಯೂ, ಅಪಾರ ಅಭಿಮಾನಿ ಬಳಗ ಹಾಗೂ ಅನೇಕ ಪ್ರಭಾವಿಗಳ ಬೆಂಬಲ ಇರುವ ವ್ಯಕ್ತಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಇರುತ್ತಾರೆಯೇ? ಅಲ್ಲಿಯ ಅವರಿಗೆ ವಿಶೇಷ ಸೌಲಭ್ಯ ನೀಡದೇ ನೋಡಿಕೊಳ್ಳುವುದು ಅನುಮಾನವೇ ಸೇರಿ ಎನ್ನಲಾಗಿದೆ.












Click it and Unblock the Notifications