• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು

By Madhusoodhan
|

ಬೆಂಗಳೂರು, ಜೂನ್, 01: ರಾಜ್ಯ ಸರ್ಕಾರದ ನಿದ್ದೆಯನ್ನು ಪೊಲೀಸರೇ ಕೆಡಿಸಿದ್ದಾರೆ. 31 ಬೇಡಿಕೆಗಳನ್ನು ಮುಂದಿಟ್ಟು ಜೂನ್ 4 ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಪೊಲೀಸರು ತಮ್ಮ 31 ಬೇಡಿಕೆಗಳ ಪಟ್ಟಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರಿಗೆ ಸಲ್ಲಿಕೆ ಮಾಡಿದ್ದಾರೆ. ಹಾಗಾದರೆ ಯಾಕೆ ಪೊಲೀಸರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ? ಅವರ ಬೇಡಿಕೆಗಳ ಏನು ಎಂಬುದರ ಪೂರ್ಣ ವಿವರ ಮುಂದಿದೆ.[ಪೊಲೀಸರ ಪ್ರತಿಭಟನೆ, ಎಚ್ಚರಿಕೆ ನೀಡಿದ ಸಿದ್ದರಾಮಯ್ಯ]

ಪೊಲೀಸರ 31 ಬೇಡಿಕೆಗಳು

1. 25 ಸಾವಿರ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಹಾಗಾಗಿ ನೀಡುತ್ತಿರುವ ಭತ್ಯೆ ಹೆಚ್ಚಿಸಿ ಸೌಲಭ್ಯ ಕಲ್ಪಿಸಬೇಕು.

2. ಪೊಲೀಸ್ ವಸತಿ ಗೃಹಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಿಬ್ಬಂದಿ ನೇಮಕ ಮಾಡಬೇಕು

3. ಜನವರಿ ಒಂದು ಮತ್ತು ಜೂನ್ ಒಂದಕ್ಕೆ ಪದೋನ್ನತಿ ನಿಗದಿ ಮಾಡಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಬೇಕು

4. ಇತರೆ ಇಲಾಖೆಗಳ ವೇತನಕ್ಕೆ ತಕ್ಕಂತೆ ಮೂಲ ಸೌಕರ್ಯವನ್ನು ನಿಗದಿ ಮಾಡಬೇಕು.[ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ]

5. ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ನೀಡುತ್ತಿರುವ ಪರಿಹಾರವನ್ನು 5 ರಿಂದ 30 ಲಕ್ಷಕ್ಕೆ ಏರಿಕೆ ಮಾಡಬೇಕು.

6. ನೀಡುತ್ತಿರುವ ಅಕ್ಕಿ, ಗೋಧಿ ಬದಲು ಹಣ ನೀಡಿದರೆ ಉತ್ತಮ

7. ಆರೋಗ್ಯ ಸೇವೆ ಮತ್ತು ರೀ ಎಂಬರ್ಸ್ ಮೆಂಟ್ ನೀಡಬೇಕು

8 ಸಮವಸ್ತ್ರ, ಶೂ, ಸಾಕ್ಸ್ ಬದಲಿಗೆ ಹಣ ನೀಡಬೇಕು

9.ವೇತನ ತಾರತಮ್ಯ ನಿವಾರಣೆಯಾಗಬೇಕು. [ಪೊಲೀಸ್ ಸಾಮೂಹಿಕ ರಜೆ: ನಾನ್ ಬೇಲ್ ಪ್ರಕರಣ, ಎಚ್ಚರಿಕೆ]

10. ಕ್ಲಿಷ್ಟಕರ ಸನ್ನಿವೇಶದಲ್ಲಿ ಕೆಲಸ ನಿರ್ವಹಣೆ ಮಾಡುವ ಪೊಲೀಸರ ಭತ್ಯೆ ಹೆಚ್ಚಳ ಮಾಡಬೇಕು

11. ತನಿಖೆಗೆ ಬೇರೆ ಜಿಲ್ಲಗೆ ತೆರಳಿದಾಗ ಅತಿಥಿ ಗೃಹ ಬಳಕೆಗೆ ಅವಕಾಶ ನೀಡಬೇಕು

12. ವಾರದ ರಜೆಯ ದಿನಾಂಕವನ್ನು ಜನವರಿಯಲ್ಲೆ ಪ್ರಕಟ ಮಾಡಬೇಕು. ರಜೆ ದಿನ ಕರ್ತವ್ಯ ಇದ್ದರೆ 3 ದಿನ ಮೊದಲಾಗಿ ತಿಳಿಸಬೇಕು

13. ಸಿಎಲ್ ರಜೆ ಎರಡು ದಿನ ಇದ್ದರೆ ಯಾವ ತಕರಾರು ಇಲ್ಲದೇ ನೀಡಬೇಕು

14. ಠಾಣೆ ಸ್ಚಚ್ಛತೆ ಮತ್ತು ಇತರೆ ಕೆಲಸಕ್ಕೆ ಡಿ ದರ್ಜೆ ನೌಕರರ ನೇಮಕ ಮಾಡಬೇಕು

15. ಸಿಬ್ಬಂದಿಯಿಂದ ಆಡರ್ಲಿ ಪದ್ಧ ತಿ ರದ್ದು ಮಾಡಬೇಕು

16. ವಾಹನ ಚಾಲನೆಗೆ ಹೊಸ ಚಾಲಕರ ನೇಮಕ ಮಾಡಿಕೊಳ್ಳಬೇಕು

17. ಜನಸಂಖ್ಯೆಗೆ ಅನುಗುಣವಾಗಿ ಠಾಣೆಯಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು

18. ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ

19. ಕಮಿಷನರೇಟ್ ವಿಭಾಗದಲ್ಲಿ ಡೇ ಕೇರೆ ತೆಗೆದು ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ ಹೊರೆ ಕಡಿಮೆ ಮಾಡಬೇಕು

20. ರಾಷ್ಟ್ರಮಟ್ಟದ ವೇತನ ಆಯೋಗದ ಶಿಫಾರಸು ಜಾರಿ

21. ಎಎಸ್ ಐ ಮತ್ತು ಪಿಎಸ್ ಐ ಗಳಿಗೂ ರಜಾ ದಿನದ ಕರ್ತವ್ಯ ನಿರ್ವಹಣೆ ಕಾರಣಕ್ಕೆ ಒಂದು ತಿಂಗಳ ಹೆಚ್ಚುವರಿ ವೇತನ ನೀಡಬೇಕು

22. ಪೊಲೀಸ್ ಇಲಾಖೆಗೆ ಪ್ರತ್ಯೇಕ ಆಯೋಗ ರಚನೆಯಾಗಬೇಕು

23. ರಾಜ್ಯ ಪೊಲೀಸ್ ಸಂಘಕ್ಕೆ ಸುಸಜ್ಜಿತ ಕಟ್ಟಡದ ವ್ಯವಸ್ಥೆ ಆಗಬೇಕು.

24. ಪ್ರಥಮ ದರ್ಜೆ ಸಹಾಯಕ ಶ್ರೇಣಿಗೆ ಮುಖ್ಯ ಪೇದೆ ವೇತನ, ಸೆಕ್ಷನ್ ಸೂಪರಿಟೆಂಡೆಂಟ್ ಶ್ರೇಣಿಗೆ ಎಎಸ್ ಐ ವೇತನ ನೀಡಬೇಕು

25. ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ನೀಡಬೇಕು

26. ಪೊಲೀಸ್ ಇಲಾಖೆ ಸೇರುವ ಹೊಸ ಸಿಬ್ಬಂದಿಯ ಮೂಲ ವೇತನ ಏರಿಕೆ ಮಾಡಬೇಕು

27.ವರ್ಗಾವಣೆ ಸಮಯದಲ್ಲಿ ಕೌನ್ಸಲಿಂಗ್ ಗೆ ಅವಕಾಶ ನೀಡಬೇಕು

28. ಠಾಣೆಗಳಿಗೆ ಸೂಕ್ತ ಪೀಠೋಪಕರಣ ಒದಗಿಸಬೇಕು

29. ಎಲ್ಲಾ ವಿಭಾಗದಲ್ಲೂ ಸಂಘದ ಶಾಖೆ ತೆರೆಯಲು ಅವಕಾಶ ನೀಡಬೇಕು

30. ಹುದ್ದೆಗಳ ಕುರಿತಾಗಿ ಇರುವ ಗೊಂದಲಗಳನ್ನು ಮೊದಲು ನಿವಾರಣೆ ಮಾಡಬೇಕು

31. ಕೆಲಸದ ರೀತಿ ಮತ್ತು ಮಾರ್ಗದರ್ಶನವನ್ನು ಮೊದಲೇ ತಿಳಿಸಬೇಕು.

English summary
Karnataka Police constables going on mass leave to stamp protest against harassment by senior officers. Akhila Karnataka Police Maha Sangha (AKPMS) claims that over 50,000 cops would go on leave on June 4 to mark protest against harassment to constables by the senior police officers. Here is the full list of Karnataka Police constables 31 demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X