ಬಿರಿಯಾನಿ ಕೊಟ್ಟ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಗರಂ; ದರ್ಶನ್​ಗೆ ಈಗೇನಿದ್ರು ಅನ್ನ-‌ ಸಾಂಬಾರ್

ಬೆಂಗಳೂರು, ಜೂನ್‌ 13: ರಾಜ್ಯಾದ್ಯಂತ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿದಂತೆ 17 ಕ್ಕೂ ಹೆಚ್ಚು ಆರೋಪಿಗಳು ಜೈಲು ಸೇರಿದ್ದು, ಆರೋಪಿಗಳಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ ಊಟ ತಂದುಕೊಟ್ಟಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇನ್ನು, ಕೊಲೆ ಆರೋಪ ಹೊತ್ತ ನಟ ದರ್ಶನ್‌ ಹಾಗೂ ಅವರ ಗ್ಯಾಂಗ್‌ ಗೆ ವಿಐಪಿ ಟ್ರೀಟ್​ಮೆಂಟ್ ಸಿಕ್ಕಿದ್ದಕ್ಕೆ ಪೊಲೀಸರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಲಾಗಿತ್ತು.ದರ್ಶನ್‌ ಹಾಗೂ ಗ್ಯಾಂಗ್‌ ಗೆ ಪೊಲೀಸ್ರು ಚಿಕ್ಕಪೇಟೆ ಬಿರಿಯಾನಿ ನೀಡಿದ್ದಾರೆ ಎಂದು ಪೊಲೀಸರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಲಾಗಿತ್ತು. ಈ ಬೆನ್ನಲ್ಲೇ ಪೊಲೀಸರ ಹಿರಿಯ ಅಧಿಕಾರಿಗಳು ಗರಂ ಆಗಿದ್ದು, ಎಚ್ಚೆತ್ತುಕೊಂಡಿರುವ ಪೊಲೀಸ್ರು ದರ್ಶನ್ ಹಾಗೂ ಗ್ಯಾಂಗ್​ಗೆ ಅನ್ನ-ಸಾರು ನೀಡಲಾಡಿದೆ ಎಂದು ತಿಳಿದು ಬಂದಿದೆ.

Police Gets A Trouble After Serve Biryani To Darshan Thoogudeepa

ದರ್ಶನ್ ಅವರು ಜೂನ್ 11ರಂದು ಅರೆಸ್ಟ್ ಆದರು. ಅಂದು ರಾತ್ರಿ ದರ್ಶನ್ ಹಾಗೂ ಅವರ ಗ್ಯಾಂಗ್​ಗೆ ಬಿರಿಯಾನಿ ನೀಡಲಾಗಿತ್ತು. ಜೈಲಿನ ಹೊರ ಭಾಗದಲ್ಲಿ 10 ಕ್ಕೂ ಹೆಚ್ಚು ಬಿರಿಯಾನಿ ಬಾಕ್ಸ್ ಕಾಣಿಸಿತ್ತು. ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗುವಾಗ ಚಿಕ್ಕಪೇಟೆ ಬಿರಿಯಾನಿ ವಿಡಿಯೋ ಹಾಗೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದ ಪೊಲೀಸರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿಡೋಧ ಕೇಳಿ ಬಂದಿದ್ದು, ಪೊಲೀಸರು ಸಂಕಷ್ಟ ಅನುಭವಿಸಿದ್ದಾರೆ. ಈ ಘಟನೆಯಿಂದ ಪೊಲೀಸರು ಎಚ್ಚೆತ್ತುಕೊಂಡು, ಅನ್ನ ಸಂಬಾರ್‌ ನೀಡುತ್ತಿದ್ದಾರೆ ಎನ್ನಲಾಗಿದೆ.

ಜೈಲಿಗೆ ತಪ್ಪು ಮಾಡಿ ಸಾಮಾನ್ಯ ವ್ಯಕ್ತಿ ಹೋಗಿದ್ದರೆ ಅವರಿಗೆ ಬಿರಿಯಾನಿ ನೀಡುತ್ತಿದ್ದರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಕೆಲವರು ಪ್ರಶ್ನೆ ಮಾಡಿದ್ದಾರೆ. ನಟ ದರ್ಶನ್ ಹಾಗೂ ಗ್ಯಾಂಗ್​​ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದಿದೆ. ಈ ಪ್ರಕರಣದಲ್ಲಿ ಸ್ಥಳ ಮಹಜರು ಮಾಡಲಾಗಿದೆ.

‌ಇನ್ನೂ ಪೊಲೀಸರು ಬುಧವಾರ (ಜೂನ್ 12) ರಾತ್ರಿ ಆರೋಪಿಗಳಿಗೆ ಅನ್ನ ಸಾರು ನೀಡಿದ್ದರು. ಊಟದ ಬಳಿಕ ತಡರಾತ್ರಿವರೆಗೂ ಪೊಲೀಸರಿಂದ ವಿಚಾರಣೆ ನಡೆದಿದೆ. ವಿಚಾರಣೆ ನಡೆಸಿ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕಲಾಗಿದ್ದು, ಎಲ್ಲಾ ಪ್ರಶ್ನೆಗಳಿಗೂ ನಟ ದರ್ಶನ . 'ನನಗೇನು‌‌ ಗೊತ್ತಿಲ್ಲ' ಎಂದಷ್ಟೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+