ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ : ನಾಗಾ ಸಾಧುಗಳಿಂದ ಮಠಕ್ಕೆ ಬೇಡಿಕೆ

|
Google Oneindia Kannada News

ಬೀದರ್‌, ನ.7 : ಬಸವ ಕಲ್ಯಾಣದ ಐತಿಹಾಸಿಕ ಸದ್ಗುರು ಸದಾನಂದ ಸ್ವಾಮಿ ಮಠ ನಮಗೆ ಸೇರಿದ್ದು, ನಮ್ಮನ್ನು ಪೀಠಾಧಿಕಾರಿಯಾಗಿ ಮಾಡಿ ಎಂದು ಒತ್ತಾಯಿಸಿ ಮಠದಲ್ಲಿ ವಾಸ್ತವ್ಯ ಹೂಡಿದ್ದ ನಾಗಾ ಸಾಧುಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಬಸವ ಕಲ್ಯಾಣ ಪಟ್ಟಣದ ಸದ್ಗುರು ಸದಾನಂದ ಸ್ವಾಮಿ ಮಠಕ್ಕೆ ಒಂದು ತಿಂಗಳ ಹಿಂದೆ ಆಗಮಿಸಿದ್ದ 40ಕ್ಕೂ ಹೆಚ್ಚು ನಾಗಾ ಸಾಧುಗಳು ಈ ಮಠ ನಮಗೆ ಸೇರಿದ್ದು ಎಂದು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಗುರುವಾರ ಅವರು ಪೀಠಾಧಿಕಾರಿ ಆಯ್ಕೆಯ ಸಮಾರಂಭವನ್ನು ಹಮ್ಮಿಕೊಂಡಿದ್ದರು.

Naga sadhus

ಮಠ ಪ್ರಬಂಧಕ ಸಮಿತಿ ನಾಗಾ ಸಾಧುಗಳ ಬಗ್ಗೆ ಬಸವ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಸಾಧುಗಳನ್ನು ಮಠದಿಂದ ತೆರವುಗೊಳಿಸುವಂತೆ ಮನವಿ ಮಾಡಿತ್ತು. ದೂರಿನ ಅನ್ವಯ ಗುರುವಾರ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ನಾಗಾ ಸಾಧುಗಳನ್ನು ಮಠದಿಂದ ತೆರವುಗೊಳಿಸಿದ್ದಾರೆ. ನಾಗಾ ಸಾಧುಗಳ ಮಠದಿಂದ ತೆರಳಲು ವಿರೋಧ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಘಟನೆ ವಿವರ : ಸದ್ಗುರು ಸದಾನಂದ ಸ್ವಾಮಿ ಮಠ ನಾಗಾ ಸಾಧುಗಳಿಗೆ ಸೇರಿದ್ದು ಎಂಬುದು ಇಲ್ಲಿ ನೆಲೆಸಿದ್ದ ಸಾಧುಗಳ ವಾದ. ಆದರೆ, ಮಠದ ಟ್ರಸ್ಟಿಗಳು ಹಾಗೂ ಬ್ರಾಹ್ಮಣರು ಇದು ಅನಂತ ಮಠವಾಗಿದ್ದು ಇದು ತಮಗೆ ಸೇರಿದ್ದು ಎನ್ನುವ ವಾದ ಮಂಡಿಸಿದ್ದರು.

ಗುರುವಾರ ಬೆಳಗ್ಗೆ ನಾಗಾ ಸಾಧುಗಳು ಮಹಾಂತ ದಯಾ ಶಂಕರ ಸ್ವಾಮೀಜಿಯನ್ನು ಸದಾನಂದ ಮಠದ ಪೀಠಾಧಿಪತಿಯಾಗಿ ಘೋಷಣೆ ಮಾಡಿದ್ದು, ಅವರ ಪಟ್ಟಾಭೀಷೇಕ ಸಮಾರಂಭವನ್ನು ಆಯೋಜಿಸಿದ್ದರು. ಇದರ ಸುದ್ದಿ ತಿಳಿದ ಮತ್ತೊಂದು ಗುಂಪು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾಧುಗಳನ್ನು ತೆರವುಗೊಳಿಸಿದ್ದಾರೆ.

English summary
Police dispersed hundreds of Naga sadhus from Sri Sadguru Sadanand Swami Mutt in Basavakalyan town of Bidar district of Karnataka. On Thursday sadhus conducting a programme to elect one of them as the mutt seer. Basavakalyan town police resorted to mild lathicharge to disperse the crowd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X