ರಾಜ್ಯದಲ್ಲಿ ₹1,000 ಕೋಟಿ ಹೂಡಿಕೆಯ ಬೃಹತ್ ಘಟಕಕ್ಕೆ ಚಾಲನೆ; 3,000 ಜನರಿಗೆ ಉದ್ಯೋಗಾವಕಾಶ!

ಕೋಲಾರ: ಐಟಿ ಕೇಂದ್ರ ಬೆಂಗಳೂರಿನ ಸಮೀಪ ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ (ವೆಮೆಗಲ್) ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ಸ್ ಉದ್ಯಮ‌ ಸಮೂಹವು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಪರಿಸರ ಸ್ನೇಹಿ ಕಾರ್ಖಾನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಶನಿವಾರ ಉದ್ಘಾಟಿಸಿದರು. ಈ ಘಟಕದಲ್ಲಿ ಶೇ.60ರಷ್ಟು ಸ್ಥಳೀಯರ ಉದ್ಯೋಗ ನೇಮಕ ಮಾಡಿಕೊಳ್ಳಬೇಕೆಂದು ಸರ್ಕಾರ ನಿರ್ದೇಶಿಸಿದೆ.

ಉದ್ಘಾಟನೆ ಬಳಿಕ ಮಾತನಾಡಿದ ಸಚಿವರು, "ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪೊದ್ದಾರ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. 2025ರ ಫೆಬ್ರವರಿ 24ರಂದು 33 ಎಕರೆ ವಿಸ್ತೀರ್ಣದ ಜಾಗ ಹಂಚಿಕೆ ಮಾಡಿದೆವು. ಅದೇ ವರ್ಷದ ಏಪ್ರಿಲ್ ನಲ್ಲಿ ನಿವೇಶನ ಹಸ್ತಾಂತರ, ಜುಲೈನಲ್ಲಿ ಶಂಕುಸ್ಥಾಪನೆ ಮಾಡಿದೆವು. ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಅಂದರೆ ಒಂದು ವರ್ಷದಲ್ಲೇ ಈ ಸಂಕೀರ್ಣ ಕಾರ್ಯಾರಂಭ ಮಾಡಿದೆ. ಇದು ನಮ್ಮ ಕೈಗಾರಿಕಾ ಸ್ನೇಹಿ ನೀತಿಗೆ ಉದಾಹರಣೆಯಾಗಿದೆ/ ಇಲ್ಲಿ ಮೂರು ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

Poddar Plumbing Systems Opens

ಉತ್ಪಾದನೆ ಇತ್ತೀಚೆಗೆ ಆರಂಭ, ಆಗಲೇ ವಿದೇಶಕ್ಕೆ ರಫ್ತು

ಕಳೆದ ಒಂದೆರಡು ವರ್ಷಗಳಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕ್ರೋನ್ಸ್ ಬಾಟ್ಲಿಂಗ್ ಘಟಕ, ಎಚ್-125 ಮಾದರಿಯ ಹೆಲಿಕಾಪ್ಟರ್ ತಯಾರಿಸುವ ಏರ್ ಬಸ್ ಘಟಕ, ಪೋಲೆಂಡ್ ಮೂಲದ ಟಿಜೆಡ್ಎಂಒ ಉದ್ಯಮ, ಎಮ್ ಝೀರೋ ಕಂಪನಿ ಮುಂತಾದವು ತಮ್ಮ‌ ತಯಾರಿಕಾ ಚಟುವಟಿಕೆ ಆರಂಭಿಸಿವೆ. ಪೊದ್ದಾರ್ ಸಮೂಹದ ಸ್ಥಾವರದಲ್ಲಿ ತಯಾರಿಸುವಂತಹ ಪೈಪ್ವಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುವುದು. ಇದು ನಮ್ಮ ನೂತನ ಕೈಗಾರಿಕಾ ನೀತಿಗೆ ಪೂರಕವಾಗಿದೆ ಎಂದು ಅವರು ಹೇಳಿದ್ದಾರೆ.

ಶೇ.60ರಷ್ಟು ಸ್ಥಳೀಯರ ಉದ್ಯೋಗ ನೇಮಕ

ಈ ಘಟಕದಲ್ಲಿ ಕೌಶಲ್ಯ ತರಬೇತಿ ಕೇಂದ್ರವೂ ಇರಲಿದೆ. ಕಂಪನಿಯ ಮಾಲೀಕರು ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಆದ್ಯತೆಯ ಮೇಲೆ ಉದ್ಯೋಗ ಕೊಡಬೇಕು. ಒಟ್ಟಾರೆಯಾಗಿ ಕನಿಷ್ಠ ಶೇ.60ರಷ್ಟು ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲಿ ಉದ್ಯೋಗಿಗಳಿಗೆ ಕಂಪನಿಯು 150 ಮನೆಗಳನ್ನು ನಿರ್ಮಿಸಲಿದೆ. ಇದರ ಜತೆಗೆ ಡಾರ್ಮೆಟರಿ ನಿರ್ಮಿಸಬೇಕು ಎಂದು ಹೇಳಿದ್ದೇನೆ. ಕೈಗಾರಿಕಾ ಪ್ರದೇಶಗಳಲ್ಲಿ ಉಗ್ರಾಣ ನಿರ್ಮಾಣಕ್ಕೆ ಜಾಗ ಕೊಡುತ್ತಿಲ್ಲ. ಬದಲಿಗೆ ನಿಜವಾದ ಔದ್ಯಮಿಕ ಮತ್ತು ಉದ್ಯೋಗಿ-ಕೇಂದ್ರಿತ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಕೊಡಲು ಆದ್ಯತೆ ನೀಡುತ್ತಿರುವುದಾಗಿ ಹೇಳಿದರು.

ಪೊದ್ದಾರ್ ಕಂಪನಿಯು ಪ್ಲಂಬಿಂಗ್ ಮತ್ತಿತರ ಚಟುವಟಿಕೆಗಳಿಗೆ ಬೇಕಾದ ಗುಣಮಟ್ಟದ ಪೈಪುಗಳನ್ನು ತಯಾರಿಸಲಿದೆ. ಪೊದ್ದಾರ್ ಕುಟುಂಬಸ್ಥರು ಆಶೀರ್ವಾದ್ ಪೈಪ್ ಸ್ಥಾಪಕರು ಕೂಡ. ಸದ್ಯ ಆಶೀರ್ವಾದ್ ನಿಂದ ಹೊರ ಬಂದಿರುವ ಅವರು ಎಂಟು ವರ್ಷಗಳ ಬಳಿಕ ತಮ್ಮ ಕುಟುಂಬವಾಗಿರುವ ಪೊದ್ದಾರ್ ಹೆಸರಿನಲ್ಲೇ ಹೊಸ ಬ್ರ್ಯಾಂಡ್ ಆರಂಭಿಸಿದ್ದು, ಕರ್ನಾಟಕದಲ್ಲಿರುವ ಅತ್ಯುತ್ತಮ ಕೈಗಾರಿಕಾ ಕಾರ್ಯ ಪರಿಸರವನ್ನು ಪರಿಗಣಿಸಿ ವೇಮಗಲ್ ನಲ್ಲಿ ಬಂಡವಾಳ ಹೂಡಿಕೆ ಮಾಡಿದೆ ಎಂದು ಅವರು ನುಡಿದಿದ್ದಾರೆ.

ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಮಾತನಾಡಿದರು. ಪೊದ್ದಾರ್ ಸಮೂಹದ ಮಾಲೀಕರಾಗಿರುವ ಅಧ್ಯಕ್ಷ ದೀಪಕ್ ಪೊದ್ದಾರ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ವರುಣ್ ಪೊದ್ದಾರ್ ಮತ್ತು ತಯಾರಿಕೆ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು. ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನುಷಾ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+