ಪ್ರಧಾನಿ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ಹೆಮ್ಮೆ ವ್ಯಕ್ತಪಡಿಸಿದ್ದು ಏಕೆ? ಇದು ಕನ್ನಡ ನಾಡು ಖುಷಿಪಡುವ ಸುದ್ದಿ!

ಕನ್ನಡಿಗರ ಗತ್ತು ಏನು ಎಂಬುದು ಮತ್ತೊಮ್ಮೆ ಜಗತ್ತಿಗೇ ಗೊತ್ತಾಗಿದ್ದು, ನಿನ್ನೆ ಕನ್ನಡಿಗರು ಸಂಭ್ರಮಿಸುವ ಸುದ್ದಿ ಸಿಕ್ಕಿತ್ತು. ಕನ್ನಡ ನಾಡನ್ನು ನೂರಾರು ವರ್ಷ ಆಳಿದ್ದ ಹೊಯ್ಸಳರ ರಾಜ ಮನೆತನ ಕಟ್ಟಿಸಿದ್ದ ದೇಗುಲಗಳಿಗೆ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಸಿಕ್ಕಿತ್ತು. ಈ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ಪಿಎಂ ಮಾಡಿರುವ ಕನ್ನಡ ಟ್ವೀಟ್ ವೈರಲ್ ಆಗುತ್ತಿದೆ.

ಅಷ್ಟಕ್ಕು ಪಿಎಂ ನರೇಂದ್ರ ಮೋದಿ ಕನ್ನಡಿಗರಿಗೆ ಈ ಬಗ್ಗೆ ಶುಭ ಕೋರುವಾಗ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. 'ಭಾರತಕ್ಕೆ ಮತ್ತಷ್ಟು ಹೆಮ್ಮೆ!' ಎಂದು ಹೆಡ್‌ಲೈನ್ ಕೊಟ್ಟಿರುವ ಪ್ರಧಾನಿ ಮೋದಿ ಅವರು, 'ಹೊಯ್ಸಳರ ಭವ್ಯ ಮತ್ತು ಪವಿತ್ರ ಶಿಲ್ಪ ಸಂಕೀರ್ಣಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸೂಕ್ಷ್ಮ ಕುಸುರಿ ಕೆಲಸಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಿಕರ ಅಸಾಧಾರಣ ಶಿಲ್ಪ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.' ಎಂದು ಹೆಮ್ಮೆ ವ್ಯಕ್ತಪಡಿಸಿ ಕನ್ನಡಿಗರಿಗೆ ಶುಭ ಕೋರಿದ್ದಾರೆ.

hoysala-temples-joined-unesco-world-heritage

ಭಾರತದ 42ನೇ ಪಾರಂಪರಿಕ ತಾಣ

ನಿನ್ನೆ ಗೌರಿ & ಗಣೇಶ ಹಬ್ಬದ ಸಂದರ್ಭದಲ್ಲೇ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿತ್ತು. ಹೊಯ್ಸಳರ ರಾಜರು ಕಟ್ಟಿಸಿದ್ದ ದೇಗುಲಗಳನ್ನು ಯುನೆಸ್ಕೋದ ವಿಶ್ವ ಪರಂಪರೆ ತಾಣಕ್ಕೆ ಸೇರಿಸಲಾಗಿತ್ತು, ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣವಾಗಿ ಕನ್ನಡ ನಾಡಿನ ಹೆಮ್ಮೆಯ ದೇಗುಲಗಳು ಸೇರ್ಪಡೆ ಆಗಿವೆ. ಈ ಹಿನ್ನೆಲೆ ಪಿಎಂ ಮೋದಿ ಅವರು ಇಂದು ಸ್ಪೆಷಲ್ ಟ್ವೀಟ್ ಮೂಲಕ ಕನ್ನಡಿಗರಿಗೆ ಶುಭಶಾಯ ಕೋರಿದ್ದಾರೆ. ಅದರಲ್ಲೂ ಕನ್ನಡದಲ್ಲೇ ಪ್ರಧಾನಿ ಟ್ವೀಟ್ ಮಾಡಿ ಮತ್ತೊಮ್ಮೆ ಕನ್ನಡ ನಾಡಿನ ಗಮನ ಸೆಳೆದಿದ್ದಾರೆ.

ಕನ್ನಡಿಗರಿಗೆ ಕನ್ನಡದಷ್ಟೇ ಹೆಮ್ಮೆ ತಂದಿದ್ದು ಹೊಯ್ಸಳ ಸಾಮ್ರಾಜ್ಯ. ಹೊಯ್ಸಳ ಸಾಮ್ರಾಜ್ಯ ಕನ್ನಡ ನಾಡಿಗೆ ಮಾಡಿದ್ದ ಉಪಕಾರವು ಒಂದೆರಡಲ್ಲ. ಇಂತಿಪ್ಪ ಹೊಯ್ಸಳರ ರಾಜರು ಕನ್ನಡ ನಾಡು ಸೇರಿ ಅಕ್ಕಪಕ್ಕ ರಾಜ್ಯಗಳಲ್ಲು ಸಾವಿರಾರು ದೇಗುಲ ಕಟ್ಟಿಸಿ ಧಾರ್ಮಿಕ ಶ್ರದ್ಧೆ ಮೆರೆದರು. ಈ ಪೈಕಿ ಹಲವು ದೇಗುಲ ಅಪಾಯಕ್ಕೆ ಸಿಲುಕಿದ್ದವು. ಹೀಗಾಗಿ ದೇಗುಲಗಳ ರಕ್ಷಣೆಗೆ ಒತ್ತಾಯ ಕೇಳಿಬರುವಾಗಲೇ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ಕಟ್ಟಿಸಿದ್ದ ದೇಗುಲಗಳಿಗೆ ಉನ್ನತ ಸ್ಥಾನ ಸಿಕ್ಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ & ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಶುಭಾಶಯ

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಟ್ವೀಟ್ ಮಾಡಿದ್ದು, ರಾಜ್ಯದ ಹೊಯ್ಸಳ ದೇವಾಲಯಗಳು ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ನಮ್ಮ ಭವ್ಯ ಇತಿಹಾಸಕ್ಕೆ ಸಿಕ್ಕಿರುವ ಮಹತ್ವದ ಗರಿ. ಬೇಲೂರು, ಹಳೇಬೀಡು, ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳ ಸುಂದರ ಕೆತ್ತನೆ ಎಂಥವರನ್ನೂ ಮೂಕ ವಿಸ್ಮಿತರಾಗಿಸಬಲ್ಲದು. ಶ್ರೀಮಂತ ಇತಿಹಾಸವಿರುವ ಕರುನಾಡಿಗೆ ತಮಗೆಲ್ಲಾ ಆತ್ಮೀಯ ಸ್ವಾಗತ ಎಂದು ಪೋಸ್ಟ್ ಹಾಕಿದ್ದಾರೆ.

ಸಾವಿರ ವರ್ಷಗಳ ಇತಿಹಾಸ ಇದೆ

ಇನ್ನು ಕನ್ನಡಿಗರ ಹೆಮ್ಮೆಯನ್ನು ಭಾರತದ ಮೂಲೆ ಮೂಲೆಗೂ ಹಬ್ಬಿಸಿ, ಜಗತ್ತಿನಾದ್ಯಂತ ಕನ್ನಡಿಗರ ಶಕ್ತಿ ಪಸರಿಸಿದ ಕೀರ್ತಿ ಹೊಯ್ಸಳ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. 10 ಮತ್ತು 14ನೇ ಶತಮಾನದ ಮಧ್ಯೆ ಪ್ರವರ್ಧಮಾನಕ್ಕೆ ಬಂದ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದದಲ್ಲಿನ ಕಲೆ, ವಾಸ್ತುಶಿಲ್ಪ & ಸಂಸ್ಕೃತಿಗೆ ನೀಡಿದ ಕೊಡುಗೆಯನ್ನ ಮನುಷ್ಯ ಎಂದೆಂದೂ ಮರೆಯಲು ಆಗಲ್ಲ. ಕನ್ನಡಿಗರು ಮಾತ್ರವಲ್ಲದೆ ಮಾನವರ ನಾಗರಿಕತೆಗೂ ಹೊಯ್ಸಳ ಸಾಮ್ರಾಜ್ಯದ ಈ ಶಿಲ್ಪಕಲೆಯ ಕೊಡುಗೆ ಎಂದೂ ಮರೆಯಲಾಗದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+