PM Kisan 24ನೇ ಕಂತಿನ ಹಣ ರಿಲೀಸ್: ರಾಜ್ಯದ 42 ಲಕ್ಷ ರೈತರಿಗೆ ₹848.10 ಕೋಟಿ ಜಮೆ, ₹2000 ಬಾರದಿದ್ರೆ ಮುಂದೇನು?

PM Kissan 24th Installment: ರಾಜ್ಯ ರೈತರಿಗೆ ಆರ್ಥಿಕವಾಗಿ ನೆರವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ (ಅ.30) 'ಪಿಎಂ ಕಿಸಾನ್ ಯೋಜನೆ' ಅಡಿಯಲ್ಲಿ ಅರ್ಹ ರೈತರಿಗೆ ತಲಾ 2,000 ರೂಪಾಯಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಬೆಳಗಾವಿ, ಚಿಕ್ಕಬಳ್ಳಾಪುರದ ಸೇರಿದಂತೆ ಒಟ್ಟು ಕರ್ನಾಟಕ 42 ಲಕ್ಷಕ್ಕೂ ಅಧಿಕ ರೈತರಿಗೆ ₹848.10 ಕೋಟಿ ಹಣ ಜಮೆ ಆಗಿದೆ. ಹಣ ಬಾರದಿದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ..

ಹೌದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 24ನೇ ಕಂತಿನ ಹಣವನ್ನು ಪ್ರಧಾನಿ ಂಮೋದಿಯವರು ಬಿಡುಗಡೆ ಮಾಡಿದರು. ಅದರಲ್ಲಿ ಚಿಕ್ಕಬಳ್ಳಾಪುರ, ಬೆಳಗಾವಿ, ಹಾವೇರಿ, ಮಂಡ್ಯ ಸೇರಿದಂತೆ ಅರ್ಹ ಲಕ್ಷಾಂತರ ರೈತರು ಹಣ ಪಡೆದ್ದಾರೆ. ಇನ್ನೂ ದೇಶ 9.34 ಕೋಟಿ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಒಟ್ಟು 18,680 ಕೋಟಿ ರೂಪಾಯಿ ಬಿಡುಗಡೆ ಮಾಡಲಾಯಿತು.

PM Kisan 24th Installment

ಅರ್ಹರಿಗೆ ಹಣ ಜಮೆ ಲೆಕ್ಕ ಕೊಟ್ಟ ಸುಧಾಕರ್

ಈ ಕುರಿತು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರು ಎಕ್ಸ್ ಮೂಲಕ ಮಾಹಿತಿ ನೀಡಿದ್ದು, ಕರ್ನಾಟಕದ 42 ಲಕ್ಷಕ್ಕೂ ಹೆಚ್ಚು ಅರ್ಹ ರೈತರು ಕೇಂದ್ರದಿಂದ ಆರ್ಥಿಕ ನೆರವು ಪಡೆದಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 89,257 ಫಲಾನುಭವಿ ರೈತರ ಖಾತೆಗೆ ಬರೋಬ್ಬರಿ 17.85 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ಇನ್ನೂ ಬೆಂಗಳೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 58,149 ಅರ್ಹ ರೈತರಿಗೆ ಒಟ್ಟು 11.63 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಅವರು ಅಂಕಿ ಸಂಖ್ಯೆ ನೀಡಿದ್ದಾರೆ.

ಮುಂದುವರಿದು, ಅನ್ನದಾತರ ಆರ್ಥಿಕ ಸಬಲೀಕರಣ, ಕೃಷಿ ಚಟುವಟಿಕೆಗಳಿಗೆ ನೆರವು ಹಾಗೂ ರೈತರ ಬದುಕಿನಲ್ಲಿ ಭದ್ರತೆ ಮತ್ತು ಸಮೃದ್ಧಿ ತರುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ರೈತರ ಹಿತವೇ ದೇಶದ ಹಿತ ಎಂಬ ಸಂಕಲ್ಪದೊಂದಿಗೆ ಅನ್ನದಾತರ ಕಲ್ಯಾಣಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಾತೆ ಹಣ ಬಾರದಿದ್ದರೆ ಏನು ಮಾಡಬೇಕು?

ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ಒಂದು ವೇಳೆ ಹಣ ಬಾರದಿದ್ದರೆ ನೀವು ಆತಂಕ ಪಡುವ ಅಗತ್ಯವಿಲ್ಲ. ನಿಮಗೆಂದೇ ಕೇಂದ್ರ ಸರ್ಹಾಕರ ಸಹಾಯವಾಣಿ ವ್ಯವಸ್ಥೆ ಮಾಡಿದೆ. ನೀವು ಅರ್ಹರಾಗಿದ್ದು, ನಿಮಗೆ ಹಣ ಬಾರದಿದ್ದರೆ ಟೋಲ್ ಫ್ರೀ ಸಹಾಯವಾಣಿ-155261 ಮತ್ತು ಪಿಎಂ ಕಿಸಾನ್ ಸಹಾಯವಾಣಿ 011-24300606 ಸಂಖ್ಯೆಗೆ ಕರೆ ಮಾಡುವಂತೆ ಕೋರಲಾಗಿದೆ. ಇಲ್ಲಿ ಅಧಿಕಾರಿಗಳು ನಿಮಗೆ ಸಂಪೂರ್ಣವಾಗಿ ಉಚಿತವಾಗಿ ಸಹಾಯ ಮಾಡಲಿದ್ದಾರೆ.

ಪ್ರತಿ ವರ್ಷ ರೈತರಿಗೆ ಇ-ಕೆವೈಸಿ ಕಡ್ಡಾಯ

ಪಿಎಂ ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಶಾಕಿಂಗ್ ವಿಷಯವೇನೆಂದರೆ ನೀವು ಪ್ರತಿ ವರ್ಷವು ಇ-ಕೆವೈಸಿ ಮಾಡಿಸಬೇಕು. ಫೇಸ್ ಅಥೆಂಟಿಕೇಷನ್, ಬಯೋಮೆಟ್ರೀಕ್, ಆಧಾರ್, ಒಟಿಪಿ ಸೇರಿದಂತೆ ಅಗತ್ಯ ವಿವರ ಅಪ್ಟೇಡ್ ಮಾಡಬೇಕು. ಅದಕ್ಕಾಗಿ ನೀವು ಪಿಎಂ ಕಿಸಾನ್ ಆಪ್ ಇಲ್ಲವೇ, ಹತ್ತಿರ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮೀಣ ಒನ್, ಸೇವಾ ಕೇಂದ್ರ, ಕಂಪ್ಯೂಟರ್ ಸೆಂಟರ್‍‌ಗಳನ್ನು ಸಂಪರ್ಕಿಸಿ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+