ವಿದೇಶದಲ್ಲಿರುವವರಿಗೆ ಇ-ಮೇಲ್ ಮತದಾನಕ್ಕೆ ಅವಕಾಶ ಕೋರಿ ಪಿಐಎಲ್

ಬೆಂಗಳೂರು, ಮೇ.2: ಹೊರ ಊರುಗಳು ಅಥವಾ ವಿದೇಶಗಳಲ್ಲಿರುವ ಮತದಾರರಿಗೆ ಇ-ಮೇಲ್ ಮೂಲಕ ಮತ ಚಲಾಯಿಸಲು ಅನುಮತಿ ನೀಡಲು ನಿರ್ದೇಶಿಸುವಂತೆ ಕೋರಿ ವಕೀಲ ಮಿಟ್ಟಿ ನರಸಿಂಹ ಮೂರ್ತಿ ಅವರಿಂದ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿಯನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಬುಧವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಜಾಕಾಲದ ಪೀಠ, ಕೇಂದ್ರ ಚುನಾವಣಾ ಆಯೋಗದ ಪರ ವಕೀಲರಿಗೆ ಅರ್ಜಿ ಪ್ರತಿ ನೀಡುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಮೇ 4 ಕ್ಕೆ ಮುಂದೂಡಿದೆ.

ಅರ್ಜಿದಾರರ ಮನವಿ ಏನು?: ಬಹಳಷ್ಟು ಮತದಾರರು ಉದ್ಯೋಗ, ವಿದ್ಯಾಭ್ಯಾಸ ಮತ್ತು ಆರೋಗ್ಯದ ಕಾರಣಕ್ಕಾಗಿ ತಮ್ಮ ಮತಕ್ಷೇತ್ರಗಳಿಂದ ಹೊರಗೆ ಇರುವ ಸಂದರ್ಭಗಳಿರುತ್ತವೆ. ಹೀಗಾಗಿ ಅವರು ತಮ್ಮ ಮತ ಚಲಾಯಿಸುವ ಇರಾದೆ ಹೊಂದಿದ್ದರೂ ಸಾಧ್ಯವಾಗುವುದಿಲ್ಲ‌.

PIL seeks email voting facility for out station voters

ಈಗಿರುವ ಸ್ಥಿತಿಯಲ್ಲಿ ಕೆಲವೇ ವರ್ಗದ ಜನರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ಇದೆ. ಆದ್ದರಿಂದ ಮುಂಬರುವ ಚುನಾಚಣೆಯಲ್ಲಿ ತಮ್ಮ ಮತಗಟ್ಟೆಗಳಿಂದ ಹೊರಗೆ ಇರುವ ಮತದಾರರು ಇ-ಮೇಲ್ ಮೂಲಕ ಮತ ಚಲಾಯಿಸಲು ಅವಕಾಶ ನೀಡುವಂತೆ ಚುನಾಚಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು.

ಇಂತಹ ಮತದಾರರಿಗೆ ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿ ನೀಡುವಂತಹ ಒ.ಟಿ.ಪಿ (ಒನ್ ಟೈಮ್ ಪಾಸ್ ವರ್ಡ್) ನೀಡಬೇಕು. ಇದರಿಂದ ಮತ ಚಲಾವಣೆ ಪ್ರಮಾಣವೂ ಏರಿಕೆಯಾಗುತ್ತದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+