ಜೂನ್ 13ರಂದು ಕರ್ನಾಟಕದಲ್ಲಿ ಎಲ್ಲೆಲ್ಲಿ ಪೆಟ್ರೋಲ್ ಬೆಲೆ 100 ರು
ಬೆಂಗಳೂರು, ಜೂನ್ 13: ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಜೂನ್ 13ರಂದು ಇಂಧನ ದರ ಪರಿಷ್ಕರಣೆ ಮಾಡಿಲ್ಲ. ಮೇ 4ರಿಂದ ಇಲ್ಲಿ ತನಕ 24ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಮೇ ತಿಂಗಳಲ್ಲಿ 2021ರಲ್ಲಿ ದೇಶದೆಲ್ಲೆಡೆ ಪೆಟ್ರೋಲ್ 16ರು ಹಾಗೂ ಡೀಸೆಲ್ 18 ರು ಏರಿಕೆಯಾಗಿತ್ತು. ಜೂನ್ 11ರಂದು ಪೆಟ್ರೋಲ್ ಬೆಲೆ 31 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ 28 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿತ್ತು.
ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 102.30ರು ಪ್ರತಿ ಲೀಟರ್, ಡೀಸೆಲ್ 94.39ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ಕರ್ನಾಟಕದ ಕೆಲ ಪಟ್ಟಣಗಳಲ್ಲಿ ಸತತವಾಗಿ ಪೆಟ್ರೋಲ್ ದರ 100ರು ಗಡಿ ದಾಟಿದೆ.
ಮೇ 2020ರಿಂದ ಇಂದಿನ ತನಕ ಪೆಟ್ರೋಲ್ ದರ 25 ರು ಹೆಚ್ಚಾಗಿದೆ. ಮೇ ತಿಂಗಳಲ್ಲಿ ದೆಹಲಿಯಲ್ಲಿ ಪೆಟ್ರೋಲ್ 3.94 ರು ಹಾಗೂ ಡೀಸೆಲ್ 4.47 ರು ಏರಿಕೆ ಕಂಡಿದೆ. ಕಚ್ಚಾತೈಲ ಬೆಲೆ ಮೇ 2020ರಲ್ಲಿ 31 ಯುಎಸ್ ಡಾಲರ್ ಇದ್ದಿದ್ದು ಈಗ ಸರಾಸರಿ 70ಡಾಲರ್ ಆಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರ ಕೂಡಾ ಪೆಟ್ರೋಲ್ ಮೇಲೆ 13 ರು, ಡೀಸೆಲ್ ಮೇಲೆ 16 ರು ಅಬಕಾರಿ ಸುಂಕ ಹೆಚ್ಚಳ ಮಾಡಿದೆ.

ಮೇ 1, 2020ರಂದು ದೆಹಲಿಯಲ್ಲಿ ಪೆಟ್ರೋಲ್ ದರ 69.59ರು ಇತ್ತು, ಡೀಸೆಲ್ ರೀಟೈಲ್ ದರ 62.29 ರು ಇತ್ತು. ಜೊತೆಗೆ ತೆರಿಗೆ ರಹಿತ ದರ 27.95 ಪ್ರತಿ ಲೀಟರ್, ಡೀಸೆಲ್ 24.85ಪ್ರತಿ ಲೀಟರ್ ನಷ್ಟಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡು 72.69ಯುಎಸ್ ಡಾಲರ್(1 USD=72.23ರು) ಪ್ರತಿ ಬ್ಯಾರೆಲ್‌ನಷ್ಟಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಅಲ್ಲದೇ ಮಹಾರಾಷ್ಟ್ರದ ಕೆಲ ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 107.48ರು ನಷ್ಟಿದೆ, ಡೀಸೆಲ್ ಬೆಲೆ 100.29ರು ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 99.05ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 92.21ರೂಪಾಯಿಗೆ ಮುಟ್ಟಿದೆ. ಕರ್ನಾಟಕದ ಇತರೆ ಪಟ್ಟಣಗಳಿಗೆ ಹೋಲಿಸಿದರೆ ಬಳ್ಳಾರಿಯಲ್ಲಿ ಇಂಧನ ದರ ಏರಿಳಿತ ಸಾಮಾನ್ಯವಾಗಿದೆ.
ಚಿಕ್ಕಮಗಳೂರು, ಬಳ್ಳಾರಿ, ಕೊಡಗು, ದಾವಣಗೆರೆ, ಯಾದಗಿರಿ, ತುಮಕೂರು, ಕೊಪ್ಪಳ, ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ 100 ರು ಪ್ರತಿ ಲೀಟರ್ ದಾಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ. ಬೆಳಗಾವಿಯಿಂದ ಕೋಲಾರ ತನಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ಜೂನ್ 13ರಂತೆ) ಪಟ್ಟಿ ಇಲ್ಲಿದೆ.
Recommended Video
ನಗರಗಳು -ಪೆಟ್ರೋಲ್ -ಡಿಸೇಲ್
ಬಾಗಲಕೋಟೆ- 99.82- 92.69
ಬೆಂಗಳೂರು ನಗರ- 99.33- 92.21
ಬೆಂಗಳೂರು ಗ್ರಾಮಾಂತರ- 99.38- 92.26
ಬೆಳಗಾವಿ- 99.97- 92.82
ಬಳ್ಳಾರಿ -100.29 -93.14
ಬೀದರ್- 99.85- 92.71
ಬಿಜಾಪುರ- 99.46- 92.36
ಚಾಮರಾಜನಗರ- 99.30 -92.19
ಚಿಕ್ಕಬಳ್ಳಾಪುರ- 99.77 -92.62
ಚಿಕ್ಕಮಗಳೂರು- 100.68- 93.32
ಚಿತ್ರದುರ್ಗ- 101.19- 93.80
ದಕ್ಷಿಣ ಕನ್ನಡ- 98.85 -91.74
ದಾವಣಗೆರೆ- 101.01- 93.64
ಧಾರವಾಡ -99.14 -92.06
ಗದಗ- 99.65 -92.53
ಕಲುಬುರಗಿ- 99.63- 92.52
ಹಾಸನ -99.56- 92.31
ಹಾವೇರಿ -99.70 -92.57
ಕೊಡಗು -100.42 -93.10
ಕೋಲಾರ 99.54 92.41
ಕೊಪ್ಪಳ -100.23- 93.06
ಮಂಡ್ಯ -99.42 -92.29
ಮೈಸೂರು -99.11 -92.01
ರಾಯಚೂರು- 99.95- 92.82
ರಾಮನಗರ -99.66 -92.51
ಶಿವಮೊಗ್ಗ- 100.77 -93.46
ತುಮಕೂರು -100.31 -93.11
ಉಡುಪಿ -99.19- 92.05
ಉತ್ತರ ಕನ್ನಡ- 99.39 -92.30
ಯಾದಗಿರಿ -100.10 -92.95












Click it and Unblock the Notifications