ಕರ್ನಾಟಕದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧವಾಗಬೇಕೆ?

ಬೆಂಗಳೂರು, ಸೆ. 3: ವೇಶ್ಯಾವಾಟಿಕೆಯನ್ನು ಕಾನೂನು ಬದ್ಧ ಮಾಡಲು ಒತ್ತಾಯಿಸಿ ಪ್ರಗತಿಪರ ಚಿಂತಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಬರಹಗಾರರು ಮತ್ತು ಅನೇಕ ದಲಿತ ಮುಖಂಡರು ಮನವಿ ಸಲ್ಲಿಕೆ ವೇಳೆ ಹಾಜರಿದ್ದರು. ಅಗ್ನಿ ಶ್ರೀಧರ್‌, ಇಂದುಧರ ಹೊನ್ನಾಪುರ, ಲೀಲಾ ಸಂಪಿಗೆ, ಮಾವಳ್ಳಿ ಶಂಕರ್‌ ಮತ್ತು ಎನ್‌ .ವಿ.ನರಸಿಂಹಪ್ಪ ಮುಖ್ಯಮಂತ್ರಿ ಜನತಾ ದರ್ಶನದ ವೇಳೆ ಮನವಿ ಸಲ್ಲಿಸಿದರು.(ಮತ್ತೆ ಜನರ ದುಃಖದುಮ್ಮಾನ ಆಲಿಸಲು ಆರಂಭಿಸಿದ ಸಿದ್ದು)

agni

ರಾಜ್ಯಗಳಲ್ಲಿನ ಲೈಂಗಿಕ ಕಾರ್ಯಕರ್ತರ ಸ್ಥಿತಿ ಗತಿ ಹೇಗಿದೆ ಎಂದು ವರದಿ ನೀಡಲು ಸುಪ್ರೀಂ ಕೋರ್ಟ್‌ 2012ರಲ್ಲೇ ಕೇಳಿತ್ತು. ಆದರೆ ಇಲ್ಲಿಯವರೆಗೆ ಯಾವ ಸರ್ಕಾರಗಳು ವರದಿ ನೀಡಿಲ್ಲ ಎಂದು ಇಂದುಧರ ಹೊನ್ನಾಪುರ ಆರೋಪಿಸಿದರು.

ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಭಾರತ ಒಂದು ಸಾಂಪ್ರದಾಯಿಕ ರಾಷ್ಟ್ರವಾಗಿದ್ದು, ವೇಶ್ಯಾವಾಟಿಕೆ ಕಾನೂನುಬದ್ಧ ಮಾಡಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರೋಷನ್‌ ಬೇಗ್‌ ಪ್ರತಿಕ್ರಿಯೆ ನೀಡಿದ್ದಾರೆ.

ಹೇಳಿಕೆ ಸಮರ್ಥಿಸಿಕೊಂಡಿದ್ದ ನಿಸಾರ್‌ ಅಹಮದ್‌
ವೇಶ್ಯಾವಟಿಕೆ ಕಾನೂನು ಬದ್ಧಗೊಳಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ನಾಡೋಜ ಕೆ.ಎಸ್.ನಿಸಾರ್ ಅಹಮದ್ ಸಮರ್ಥಿಸಿಕೊಂಡಿದ್ದರು.
ವೇಶ್ಯಾವಟಿಕೆ ಕಾನೂನು ಬದ್ಧವಾದರೆ ಅತ್ಯಾಚಾರ ಕಡಿಮೆಯಾಗುತ್ತದೆ. ಪುರುಷರ ಕಾಮಾಂಧತೆಗೆ ಕಡಿವಾಣ ಹಾಕಲು ಇದು ನೆರವಾಗುತ್ತದೆ ಎಂದು ಹೇಳಿದ್ದರು.

ರಾಜ, ಮಹಾರಾಜರ ಕಾಲದಿಂದಲೂ ಈ ಪದ್ಧತಿ ಇತ್ತು. ವಿವಾದ ಸೃಷ್ಟಿಸಲು ನಾನು ಈ ಹೇಳಿಕೆ ನೀಡಿಲ್ಲ. ಸಂಪ್ರದಾಯವಾದಿಗಳು ಇದನ್ನು ನಿರಾಕರಿಸಿದರೆ ಅದು ಅವರ ಮೂರ್ಖತನ ಎಂದು ನಿಸಾರ್ ಅಹಮದ್ ಪ್ರತಿಕ್ರಿಯೆ ನೀಡಿದ್ದರು.

ಬೆಂಬಲ ವ್ಯಕ್ತಪಡಿಸಿದ್ದ ಅಗ್ನಿ ಶ್ರೀಧರ್‌
'ವೇಶ್ಯಾವಾಟಿಕೆ ಕಾನೂನು ಬದ್ಧಗೊಳಿಸಿ' ಎಂಬ ನಾಡೋಜ ನಿಸಾರ್ ಅಹಮದ್ ಹೇಳಿಕೆಗೆ ಪತ್ರಕರ್ತ ಹಾಗೂ ನ್ಯಾಯಕ್ಕಾಗಿ ನಾವು ಸಂಘಟನೆಯ ಅಗ್ನಿ ಶ್ರೀಧರ್ ಬೆಂಬಲ ವ್ಯಕ್ತಪಡಿಸಿದ್ದರು.

ಸಚಿವ ರೋಷನ್ ಬೇಗ ಪ್ರಾಮುಖ್ಯತೆ ನೀಡದಿರುವುದು ಬೇಸರ ತಂದಿದೆ. ಈ ಬಗ್ಗೆ ನಾನು ಮತ್ತು ನಮ್ಮ ಸಂಘಟನೆ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಮನವಿ ನೀಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಯಾವ ಯಾವ ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧ
ಯುರೋಪಿನ ಸ್ವೀಟನ್‌, ನಾರ್ವೆ ಜರ್ಮನಿಯಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧವಾಗಿದೆ. ಇಂಗ್ಲೆಂಡ್‌, ನೆದರ್‌ಲ್ಯಾಂಡ್‌ ಮತ್ತು ಬೆಲ್ಜಿಯಂಗಳಲ್ಲಿ ಕೆಲ ನಿರ್ಬಂಧ ವಿಧಿಸಲಾಗಿದ್ದು, ಸಹೋದರ-ಸಹೋದರಿಯರು ಸಂಬಂಧ ಬೆಳೆಸುವಂತಿಲ್ಲ ಎಂದು ವಿವರಿಸಲಾಗಿದೆ.

ಇನ್ನು ಏಷ್ಯಾ ಖಂಡದ ಥೈಲಾಂಡ್‌ ಮತ್ತು ಜಪಾನ್‌ನಲ್ಲಿ ವೇಶ್ಯಾವಾಟಿಕೆ ಮುಕ್ತವಾಗಿದ್ದರೂ ಕೆಲ ಕಟ್ಟಳೆಗಳನ್ನು ಹೇರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+