ಸಾಮಾಜಿಕ ಸಮಾನತೆಯ ಹರಿಕಾರ ದೇವರಾಜ್ ಅರಸ್
ಬೆಂಗಳೂರು, ಮಾರ್ಚ್ 30 : ಶ್ರೀಮಂತರ ಬಡವರ ಮನೆಗಳ ನಿರ್ಮಾಣದಲ್ಲಿ ಇರುವ ಅಸಮಾನತೆ ಸಮಾಜದಲ್ಲೂ ಇದೆ. ಆದರೆ, ದೇಶ ಕಟ್ಟುವಿಕೆಯು ಸಮಾನತೆ ಆಧಾರದ ಮೇಲೆ ನಡೆಯಬೇಕು ಎನ್ನುವ ಆಲೋಚನೆ 1972 ರಿಂದ 1979ರ ಎಂಟು ವರ್ಷಗಳ ದೀರ್ಘಕಾಲ ಕನ್ನಡ ನಾಡಿನ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದ ಡಿ.ದೇವರಾಜ್ ಅರಸ್ ಅವರದ್ದಾಗಿತ್ತು.
ಈ ಹಿನ್ನೆಲೆಯಲ್ಲಿ 1972ರಲ್ಲಿ ಅಧಿಕಾರಕ್ಕೆ ಬಂದ ದೇವರಾಜ್ ಅರಸ್ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಒಂದು ಹೊಸ ದಿಕ್ಕನ್ನು ನೀಡಲು ಯೋಜನೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಕ್ಕೆ ತಂದರು. ಅವುಗಳಲ್ಲಿ ಬಡತನ ನಿರ್ಮೂಲನಾ ಯೋಜನೆ, ಕಿರು ಮತ್ತು ಮಧ್ಯಮ ಗಾತ್ರದ ನೀರಾವರಿ ಯೋಜನೆಗಳು, ಒಣಭೂಮಿ ಬೇಸಾಯಕ್ಕೆ ಪ್ರೋತ್ಸಾಹ, ಗೃಹ ಕೈಗಾರಿಕೆ, ಸಣ್ಣ ಕೈಗಾರಿಕೆಗಳ ಸ್ಥಾಪನೆ, ಇಪ್ಪತ್ತು ಅಂಶಗಳ ಕಾರ್ಯಕ್ರಮ ಮತ್ತು ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಯೋಜನೆಗಳು ಮುಖ್ಯವಾಗಿವೆ.[ಮೈಸೂರಲ್ಲಿ ಅರಸು ಜನ್ಮಶತಮಾನೋತ್ಸವಕ್ಕೆ ಚಾಲನೆ]

ಕೇವಲ ವ್ಯವಸಾಯದಿಂದಲೇ ರಾಜ್ಯ ಹಾಗೂ ದೇಶ ಅಬಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದ ಅರಸ್, ಕೃಷಿ ಜೊತೆಯಲ್ಲಿ ಕೈಗಾರಿಕೆ ಬೆಳವಣಿಗೆಯಾಗಬೇಕು ಎಂದು ಒತ್ತಿ ಹೇಳಿದರು. ಆಲೋಚನೆಗೆ ತಕ್ಕಂತೆ ಬಹು ವರ್ಗಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಹಾವನೂರು ಆಯೋಗ ಹಾಗೂ ಶತಮಾನಗಳಿಂದ ಅಜ್ಞಾನ, ದಾಸ್ಯದಲ್ಲಿ ಕಾಲ ಕಳೆಯುತ್ತಿದ್ದ ಗೇಣಿದಾರರಿಗೆ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದದ್ದು ಅವರ ದಿಟ್ಟ ನಿಲುವಿಗೆ ಹಾಗೂ ಕಾರ್ಯಕ್ಷಮತೆಯ ಉತ್ತುಂಗದ ನಿದರ್ಶನಗಳಾಗಿವೆ. [ಅರಸು ಹುಟ್ಟೂರು ದತ್ತು ಪಡೆದ ಸರ್ಕಾರ]
ಹುಣಸೂರಿನಲ್ಲಿ ಜನನ : ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಳ್ಳಿಯಲ್ಲಿ 1915ರ ಅಗಸ್ಟ 20 ರಂದು ಜನಿಸಿದ ದೇವರಾಜ್ ಅರಸ್ ಅವರದ್ದು ಕೃಷಿಕರ ಬದುಕು. ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು. ಚಲೇ ಜಾವೋ ಚಳವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಾರಾಗೃಹವಾಸ ಅನುಭವಿಸಿದರು.
1972 ಹಾಗೂ 78ರ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿದ ಅವರು ರಾಜ್ಯದ ದೀರ್ಘಕಾಲ ಆಳಿದ ಮುಖ್ಯಮಂತ್ರಿಯೂ ಹೌದು. ಸಾಮಾಜಿಕ ಕಾಳಜಿ, ದಕ್ಷತೆ ಹಾಗೂ ಬದ್ಧತೆ ಇನ್ನೊಂದು ಹೆಸರೇ ದೇವರಾಜ್ ಅರಸ್ ಅವರು ಸಮಾಜವಾದವನ್ನು ಅನುಷ್ಠಾನಗೊಳಿಸಿದವರು.

ಉಳುವವನಿಗೆ ಭೂಮಿ, ಜೀತ ವಿಮುಕ್ತಿ, ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ, ಅಲ್ಪಸಂಖ್ಯಾತರಿಗೆ ಸಾಲದಿಂದ ಮುಕ್ತಿ, ಹಾವನೂರು ಆಯೋಗದ ಶಿಫಾರಸಿನ ಹಿಂದುಳಿದ ವರ್ಗದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವೃದ್ಧಾಪ್ಯ ವೇತನ ಪದವೀಧರರಿಗೆ ಸ್ಟೈಫಂಡರಿ ಯೋಜನೆ, ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಯೋಜನೆ, ಭಾಗ್ಯ ಜ್ಯೋತಿ, ಶಿಷ್ಯವೇತನ ಕಡಿಮೆ ವೆಚ್ಚದ ಗೃಹ ನಿರ್ಮಾಣ ಮುಂತಾದ ಅಸಾಧ್ಯ ಸಾಧನೆಗಳ ಸಾಧಿಸಿದ ದೇವರಾಜ್ ಅರಸ್ ಸಾಮಾಜಿಕ ಪರಿವರ್ತನೆಯ ಮೌನ ಹರಿಕಾರ.
ಈ ನಾಡು ಕಂಡ ಮಹಾನ್ ಚೇತನ ದೇವರಾಜ್ ಅರಸ್ ಅವರಲ್ಲಿ ರೈತನ ಆತ್ಮಾಭಿಮಾನ, ಶತ್ರುವನ್ನು ಪ್ರೇಮಿಸುವ ಮಾನವೀಯ ಪ್ರೀತಿ, ಹಿಡಿದ ಕಾರ್ಯ ಬಿಡದೇ ಪೂರ್ಣಗೊಳಿಸುವ ಛಲ, ದನಿಯಿಲ್ಲದವರ ದನಿಯಾಗಿ ಸಮಾಜವನ್ನು ಎದುರಿಸಿ ಪರಿವರ್ತನೆಗೆ ಪ್ರಯತ್ನಿಸಿ ಯಶಸ್ಸು ಕಂಡವರು.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications