ಭದ್ರಾ ಜಲಾಶಯದ ಬಳಿ ಕೆಆರ್‌ಎಸ್ ಮಾದರಿಯಲ್ಲಿ ಬೃಂದಾವನ

ಚಿಕ್ಕಮಗಳೂರು, ಜುಲೈ 20 : ಕೆಆರ್‌ಎಸ್ ಮಾದರಿಯಲ್ಲಿ ಭದ್ರಾ ಜಲಾಶಯದ ಮುಂಭಾಗದಲ್ಲಿ ಬೃಂದಾವನ ನಿರ್ಮಾಣ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. 186 ಎಕರೆ ಪ್ರದೇಶವನ್ನು ಸುಮಾರು 87 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಭದ್ರಾ ಜಲಾಶಯದ ಮುಂಭಾಗದಲ್ಲಿ ಬೃಂದಾವನ ನಿರ್ಮಾಣ ಮಾಡುವ ಯೋಜನಾ ವರದಿ ತಯಾರಿಸಲು ಒಪ್ಪಿಗೆ ನೀಡಲಾಗಿದೆ. ಮೆ.ಇನ್‌ಪ್ರಾಸ್ಟ್ರಕ್ಚರ್ ಡೆವಲಪ್ ಕಾರ್ಪೊರೇಷನ್ ಯೋಜನಾ ವರದಿಯನ್ನು ತಯಾರಿಸಲಿದೆ. [ಮಲೆನಾಡಿನಲ್ಲಿ ಮಳೆಯ ಆರ್ಭಟ]

chikkamagaluru

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಸರ್ಕಾರ ಬೃಂದಾವನ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಯೋಜನವಾ ವರದಿ ಸಿದ್ಧಗೊಂಡ ಬಳಿಕ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ ಎಂದು ಹೇಳಿದ್ದಾರೆ. [ಕಬಿನಿ ಡ್ಯಾಂ ಬಳಿ 50 ಎಕರೆಯಲ್ಲಿ ಉದ್ಯಾನವನ]

186 ಎಕೆರೆ ಜಾಗ, 87 ಕೋಟಿ ವೆಚ್ಚ : ಭದ್ರಾ ಜಲಾಶಯದ ಮುಂಭಾಗದಲ್ಲಿರುವ 186 ಎಕರೆ ಪ್ರದೇಶವನ್ನು ಸುಮಾರು 87.3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಬೃಂದಾವನ, ರೆಸಾರ್ಟ್, ರೆಸ್ಟೋರೆಂಟ್ ಮುಂತಾದವುಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ.

105 ಎಕರೆ ಪ್ರದೇಶದಲ್ಲಿ ಅಡ್ವೆಂಚರ್ ಥೀಂ ಪಾರ್ಕ್, ಲೈಟ್‌ ಶೋ ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡಲು ನಿರ್ಧರಿಸಲಾಗಿದ್ದು, ಯೋಜನ ವರದಿ ಸಿದ್ಧವಾದ ಬಳಿಕ ಯೋಜನೆಗೆಳ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಇದರಿಂದ ತರೀಕೆರೆ ತಾಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ.

ಅಂದಹಾಗೆ, 186 ಅಡಿ ಎತ್ತರದ ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 159 ಅಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+