ತುಮಕೂರು ಕೈತಪ್ಪಿದ್ದಕ್ಕೆ ಪರಮೇಶ್ವರ್ ಗರಂ, ಸಭೆಯಿಂದ ದೂರ
Recommended Video

ಬೆಂಗಳೂರು, ಮಾರ್ಚ್ 19: ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಇಂದು ಮೈತ್ರಿ ಪಕ್ಷದ ಮುಖಂಡರು ಸಭೆ ನಡೆಸಿದರು, ಅದರ ನಂತರ ಜಂಟಿ ಸುದ್ದಿಗೋಷ್ಠಿ ಸಹ ನಡೆಸಿದರು ಆದರೆ ಇದಕ್ಕೆ ಪರಮೇಶ್ವರ್ ಗೈರಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಾಲಿ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾರಣ ಪರಮೇಶ್ವರ್ ಮೈತ್ರಿ ನಾಯಕರ ಮೇಲೆ ತೀವ್ರ ಅಸಮಾಧಾನಗೊಂಡಿದ್ದು, ಇಂದು ನಡೆದ ಮಹತ್ವದ ಸಭೆಗೆ ಗೈರಾಗುವ ಮೂಲಕ ಅದನ್ನು ಹೊರಹಾಕಿದ್ದಾರೆ.
ತುಮಕೂರನ್ನು ಕಾಂಗ್ರೆಸ್‌ಗೆ ವಾಪಸ್ ಬಿಟ್ಟುಕೊಡುವ ಬಗ್ಗೆ ಪರಮೇಶ್ವರ್ ಅವರು ದೇವೇಗೌಡ ಅವರಿಗೆ ಮನವಿ ಮಾಡಿದ್ದರು ಆದರೆ ಅವರು ಸಹ ಅದಕ್ಕೆ ಒಪ್ಪಿಗೆ ನೀಡಲಿಲ್ಲ, ಕಾಂಗ್ರೆಸ್ ಹೈಕಮಾಂಡ್‌ಗೂ ಇದರ ಬಗ್ಗೆ ದೂರು ನೀಡಲಾಗಿದೆ, ಅಲ್ಲಿಂದಲೂ ಸೂಕ್ತವಾದ ಪ್ರತಿಕ್ರಿಯೆ ಪರಮೇಶ್ವರ್‌ಗೆ ಸಿಕ್ಕಿಲ್ಲ ಹಾಗಾಗಿ ಪರಮೇಶ್ವರ್ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಪರಮೇಶ್ವರ್ ಅವರ ಅನುಪಸ್ಥಿತಿ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ಗಂಟೆಯೂ ಆಗಲಿದೆ. ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿ ಅಸಮಾಧಾನಗೊಂಡಿರುವ ಪರಮೇಶ್ವರ್ ಅವರು ಅವರ ವಿರುದ್ಧ ಕೆಲಸ ಮಾಡಿದರೆ ಜೆಡಿಎಸ್‌ಗೆ ಗೆಲುವು ಕಷ್ಟವಾಗಲಿದೆ.
ಸಂಸದ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದ ಪಕ್ಷದಲ್ಲಿ ಪಕ್ಷೇತರವಾಗಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಇದು ಜೆಡಿಎಸ್‌ಗೆ ಬಹಳ ಆತಂಕ ತಂದೊಡ್ಡಲಿದೆ.
ಸಭೆಗೆ ಗೈರಾಗಿದ್ದಕ್ಕೆ ಪೂರ್ವ ನಿಯೋಜಿತ ಕಾರ್ಯಕ್ರಮ ಕಾರಣ ಎಂದು ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದಾರಾದರೂ, ಅದು ಕೇವಲ ಕಣ್ಣೊರೆಸುವ ತಂತ್ರವೆಂದು ಹೇಳಲಾಗುತ್ತಿದೆ.












Click it and Unblock the Notifications