Rahul Gandhi: ರಾಹುಲ್ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸ್ವಾಮೀಜಿಗಳು: ಸಮುದಾಯಕ್ಕೆ ಪರೋಕ್ಷ ಸಂದೇಶ ರವಾನೆ? ಇನ್‌ಸೈಡ್ ಸ್ಟೋರಿ
ಬಸವಣ್ಣನವರ ನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇದು ಬಿಜೆಪಿ ಮತ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯದ ಪ್ರಬಲ ಪಂಚಮಸಾಲಿ ಸಮುದಾಯವನ್ನು ಆಕರ್ಷಿಸುವ ಗುರಿಯನ್ನು ಹೊಂದಿತ್ತು ಹೇಳಲಾಗುತ್ತಿದೆ.
ಕೂಡಲಸಂಗಮದಲ್ಲಿ ನಡೆದ ಬೃಹತ್ ಬಸವ ಜಯಂತಿ ಆಚರಣೆ ವೇಳೆ ಪ್ರಬಲ ಪಂಚಮಸಾಲಿ ಶ್ರೀಗಳು ಭಾಗವಹಿಸಿದ್ದರು. ಇದು ಪಂಚಮಸಾಲಿ ಸಮುದಾಯಕ್ಕೆ ಪರೋಕ್ಷ ಸಂದೇಶವನ್ನು ರವಾನಿಸಿದಂತಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಭಾನುವಾರ (ಏಪ್ರಿಲ್ 23) ಬಸವೇಶ್ವರರ ಜನ್ಮಸ್ಥಳ ವಿಜಯಪುರದ ಬಸವನ ಬಾಗೇವಾಡಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಭಾಗವಹಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿರುವ ಐಕ್ಯಸ್ಥಳಕ್ಕೆ ರಾಹುಲ್ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಆ ನಂತರ ಅವರು ವಿಜಯಪುರ ನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ, ಅಪಾರ ಜನಸಮುದಾಯ ಸೇರಿದ್ದು, ಈ ಭಾಗದಲ್ಲಿ ಕಾಂಗ್ರೆಸ್‌ಗೆ ಉತ್ಸಾಹ ತಂದಿದೆ ಎಂದು ಹೇಳಲಾಗುತ್ತಿದೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕೂಡಲ ಸಂಗಮದ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಹುಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದೆ. ಅವರು ಕಾರ್ಯಕ್ರಮದಲ್ಲಿ ರಾಹುಲ್ ಅವರೊಂದಿಗೆ ಸಾರ್ವಜನಿಕ ವೇದಿಕೆ ಹಂಚಿಕೊಂಡಿರುವ ಬಗ್ಗೆ ಹಲವು ತರ್ಕಗಳು ಮುನ್ನೆಲೆಗೆ ಬಂದಿವೆ.
ಬಸವಣ್ಣನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ರಾಹುಲ್ ಕೂಡಲ ಸಂಗಮದಲ್ಲಿ ಹಲವು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ಈ ಸಮಯದಲ್ಲಿ ಜಯ ಮೃತ್ಯುಂಜಯ ಮಠಾಧೀಶರು ಮಾತ್ರವಲ್ಲದೆ ಕ್ಷೇತ್ರದ ಇತರ ಮಠಾಧೀಶರು, ಪ್ರಮುಖವಾಗಿ ಪಂಚಮಸಾಲಿ ಮಠದ ಶ್ರೀಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವಿಚಾರವೀಗ ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದೆ.

ಕಾಂಗ್ರೆಸ್ ಜೊತೆಗಿನ ಈ ಒಗ್ಗಟ್ಟಿನ ಪ್ರದರ್ಶನವು ಪಂಚಮಸಾಲಿ ಸಮುದಾಯಕ್ಕೆ ಪರೋಕ್ಷ ಸಂದೇಶವನ್ನು ರವಾನಿಸಿದೆ. ಇದು ಮುಂಬರುವ ಚುನಾವಣೆಯಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಣಾಯಕ ಅಂಶವಾಗಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಬಸವ ಜಯಂತಿ ವೇಳೆ ರಾಹುಲ್ ರೋಡ್ ಶೋನಲ್ಲಿ ಭಾಗವಹಿಸಿರುವುದು ಈ ಭಾಗದ ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಪಂಚಮಸಾಲಿ ಶ್ರೀಗಳು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಸಮುದಾಯಕ್ಕೆ ಪರೋಕ್ಷ ಸಂದೇಶ ರವಾನೆಯಾಗಿದೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಕೆ.ಕೊಡವೂರು 'ದಿ ಫೆಡರಲ್'ಗೆ ನ್ಯೂಸ್ ಔಟ್‌ಲೆಟ್‌ಗೆ ತಿಳಿಸಿದ್ದಾರೆ.
ಬಿಜೆಪಿಯ ಪಂಚಮಸಾಲಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತವರು ಹಾಗೂ ಅವರು ಪ್ರತಿನಿಧಿಸುವ ಕ್ಷೇತ್ರವಾದ ವಿಜಯಪುರ ಜಿಲ್ಲೆಯಲ್ಲಿ ರಾಹುಲ್ ರೋಡ್ ಶೋಗೆ ಭಾರೀ ಜನಸ್ತೋಮ ಕಂಡು ಬಂದಿರುವುದು ಕುತೂಹಲ ಮೂಡಿಸಿದೆ. ಜಿಲ್ಲೆಯಲ್ಲಿ ಸುಮಾರು 1 ಲಕ್ಷದಷ್ಟು ಮುಸ್ಲಿಂ ಜನಸಂಖ್ಯೆಯೂ ಇದೆ. ಈ ಭಾಗದ ಮುಸ್ಲಿಂ ಸಮುದಾಯದವರು ಬಸವಣ್ಣ ಚಳವಳಿಯನ್ನು ಗೌರವಿಸಿ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು ಎಂದೂ ಹೇಳಲಾಗುತ್ತಿದೆ.
ರೋಡ್ ಶೋ ಸಂದರ್ಭದಲ್ಲಿ ಕೂಡಲ ಸಂಗಮ ಮಠಾಧೀಶರು ಹಾಗೂ ಇತರೆ ಲಿಂಗಾಯತ ಧರ್ಮೀಯರು ಭಾಗವಹಿಸುತ್ತಿರುವುದು ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ವರದಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಮತ್ತೊಬ್ಬ ಪದಾಧಿಕಾರಿ ರಘುನಾಥ ಪಾಟೀಲ ತಿಳಿಸಿದ್ದಾರೆ.












Click it and Unblock the Notifications