ನಮ್ಮ ಪಕ್ಷದವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕ್ತೀವಿ, ಶಿಕ್ಷೆ ಆಗುತ್ತೆ: ಆರ್ ಅಶೋಕ್

ಮತ್ತೆ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ, ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದು ಆರ್ ಅಶೋಕ್ ಹೇಳಿದರು.

ಬೆಂಗಳೂರು,ಮಾರ್ಚ್6: ಚುನಾವಣಾ ಹೊತ್ತಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಇದನ್ನೇ ಅಸ್ತ್ರವನ್ನ ಮಾಡಿಕೊಂಡು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ರೆ, ಇತ್ತ ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿ ನಾಯಕರು ತಿರುಗೇಟು ನೀಡದ್ದಾರೆ.

ಈ ಕುರಿತು ಸೋಮವಾರ ನಗರದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸೋಲುವ ಭಯ ಕಾಡುತ್ತಿದೆ. ಸಿದ್ದರಾಮಯ್ಯ ಓಡಿ ಹೋಗುವ ಹಂತದಲ್ಲಿದ್ದಾರೆ ಎಸಿಬಿ ರಚಿಸಿ ಎಲ್ಲಾ ಕೇಸ್ ಮುಚ್ಚಿ ಹಾಕಿದರು. ಕಾಂಗ್ರೆಸ್ ಅವಧಿಯಲ್ಲಿ ಒಂದು ಕೇಸ್ ನಲ್ಲಿ ಬಂದನವಾಗಿಲ್ಲ ನಾವು ಪಾರದರ್ಶಕವಾಗಿದ್ದೇವೆ. ಬಿಜೆಪಿಗರೇ ತಪ್ಪು ಮಾಡಿದ್ರೆ ಜೈಲಿಗೆ ಹಾಕ್ತೇವೆ. ಶಿಕ್ಷೆ ಕೊಡುತ್ತೇವೆ ಎಂದು ಹೇಳಿದರು.

Our Party Members Committed A Mistake And We Will Put Them In Jail Says Minister R Ashok

ಸಚಿವ ವಿ ಸೋಮಣ್ಣ ಚಾಮರಾಜನಗರ ನಗರ ಯಾತ್ರೆಗೆ ಗೈರಾದ ವಿಚಾರ ವಿಚಾರವಾಗಿ ಮಾತನಾಡಿ, ವಿ ಸೋಮಣ್ಣ ಇಡೀ ಕರ್ನಾಟಕದ ಫಿಗರ್. ಅವರನ್ನ ಚಾಮರಾಜನಗರಕ್ಕೋ ಅಥವಾ ವಿಜಯನಗರಕ್ಕೋ ಸೀಮಿತ ಮಾಡಬೇಡಿ. ಯಾವುದೇ ಮಠ ಇದರೂ ಬಾಗಿಲು ತೆಗೆಸಿ‌ ಹೋಗುವ ಶಕ್ತಿ ಇರೋ ಪ್ರಭಾವಿ ನಾಯಕ ಸೋಮಣ್ಣ. ಸೋಮಣ್ಣಗೆ ಯಾವುದೇ ಅಸಮಧಾನ ಇಲ್ಲ, ನಾನು ಸೋಮಣ್ಣ ಅವರ ಸಂಪರ್ಕದಲ್ಲಿದ್ದೇನೆ. ಅವರಿಗೆ ನನ್ನ ಜೊತೆ ಮಾತಾಡಿಲ್ಲ ಅಂದೆ ಊಟ ಸೇರಲ್ಲ, ನನಗೆ ಅವರ ಜೊತೆ ಮಾತಾಡಿಲ್ಲ ಅಂದರೆ ಊಟ ಸೇರಲ್ಲ. ಕಾಂಗ್ರೆಸ್‌ಗೆ ಹೋಗ್ತಾರೆ ಅಂತ ಇಲ್ಲ ಸಲ್ಲದ ಆರೋಪ ಮಾಡ್ತಿದಾರೆ, ನಮ್ಮಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಹೆಚ್.ಡಿ ಕುಮಾರಸ್ವಾಮಿ ಗೆ ಅಧಿಕಾರ ಕೊಟ್ಟಾಗ ಸರಿಯಾಗಿ ಆಡಳಿತ ನಡೆಸದೇ ಬಿಟ್ಟು ಹೋದ್ರು. ಹೆಚ್ಡಿಕೆ ಕುದುರೇ ಏರದೇ ಬಿಟ್ಟು ಹೋಗಿದ್ದಾರೆ. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದರೇ ಜನರು ನಂಬಲ್ಲ. ಈ ರಾಜ್ಯದಲ್ಲಿ ಮತದಾರನೇ ದೊಡ್ಡವನು. ಇಲ್ಲಿ ಯಾರ ಪಾಳೇಗಾರಿಕೆ ನಡೆಯಲ್ಲ. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದ್ರೆ ಹೆಚ್.ಡಿ ಕುಮಾರಸ್ವಾಮಿಯನ್ನ ಜನರು ನಂಬಲ್ಲ. ಕಾಂಗ್ರೆಸ್ ಜೆಡಿಎಸ್ ನವರದ್ದು ಯಾವಾಗಲೂ ಕಳ್ಳರ ಆಟ ಬಿಟಿಮ್ ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್ ಎಂದು ಟೀಕಿಸಿದರು.

Our Party Members Committed A Mistake And We Will Put Them In Jail Says Minister R Ashok


ಕರ್ನಾಟಕ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು. ಕರ್ನಾಟಕವನ್ನು ಗೆಲ್ಲಿಸುತ್ತೇವೆ, ನಮ್ಮ ವರಿಷ್ಠರು ಬರ್ತಿದಾರೆ, ಮತ್ತೆ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ, ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+