ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸು; ಪೊಲೀಸರ ಮಹತ್ವದ ಆದೇಶ

ಬೆಂಗಳೂರು, ಮೇ 06 : ಅಂತರ ಜಿಲ್ಲಾ ಪ್ರಯಾಣಕ್ಕೆ ಕರ್ನಾಟಕದ ಪೊಲೀಸರು ಪಾಸುಗಳನ್ನು ನೀಡುತ್ತಾರೆ. ಖಾಸಗಿ ವಾಹನದಲ್ಲಿ ಸಂಚಾರ ನಡೆಸುವವರು ಪಾಸು ಪಡೆಯುವುದು ಕಡ್ಡಾಯವಾಗಿದೆ.

ಕರ್ನಾಟಕ ಸರ್ಕಾರ ಲಾಕ್ ಡೌನ್ ನಿಯಮದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದರೂ ಅಂತರ ಜಿಲ್ಲೆ, ರಾಜ್ಯಗಳ ಸಂಚಾರಕ್ಕೆ ಷರತ್ತುಗಳನ್ನು ಹಾಕಲಾಗಿದೆ. ಅಂತರ ಜಿಲ್ಲೆಗೆ ಪ್ರಯಾಣ ನಡೆಸುವವರಿಗೆ ಪೊಲೀಸರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಇನ್ನು ಮುಂದೆ ಅಂತರ ಜಿಲ್ಲಾ ಪ್ರಯಾಣಕ್ಕೆ ಹೋಗುವ, ವಾಪಸ್ ಬರುವ ಎರಡೂ ಕಡೆಯ ಪಾಸು ನೀಡಲಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಟ್ವೀಟ್ ಮಾಡಿದ್ದಾರೆ. ಇಷ್ಟು ದಿನ ಒಂದು ಕಡೆಯ ಪಾಸ್ ಮಾತ್ರ ನೀಡಲಾಗುತ್ತಿತ್ತು.

Now Get Inter District Movement Pass For Onward And Return Journey

ರಾಜ್ಯದ ಜನರ ಬೇಡಿಕೆ ಹಿನ್ನಲೆಯಲ್ಲಿ ಎರಡೂ ಕಡೆಯ ಪಾಸು ನೀಡಲು ತೀರ್ಮಾನಿಸಲಾಗಿದೆ. ಇಷ್ಟು ದಿನ ಬೇರೆ ಜಿಲ್ಲೆಗೆ ಹೋಗಲು ಪಾಸು ನೀಡಲಾಗುತ್ತಿತ್ತು. ಆದರೆ, ವಾಪಸ್ ಬರಲು ಮತ್ತೆ ಅರ್ಜಿ ಸಲ್ಲಿಸಿ ಪಾಸು ಪಡೆಯಬೇಕಿತ್ತು.

ಇಷ್ಟು ದಿನ ನೀಡುತ್ತಿದ್ದ ಪಾಸು ಒಂದು ದಿನದ, ಒಂದು ಕಡೆಯ ಮತ್ತು ಒಂದು ಅವಧಿಯ ಪಾಸ್ ಮಾತ್ರ ಆಗಿತ್ತು. ಈಗ ಹೋಗುವ ಮತ್ತು ವಾಪಸ್ ಬರುವ ಪಾಸುಗಳನ್ನು ಪಡೆಯಬಹುದಾಗಿದೆ.

ಕರ್ನಾಟಕ ಪೊಲೀಸರು ನೀಡುವ ಪಾಸುಗಳನ್ನು ಪಡೆಯಲು ವೆಬ್ ಸೈಟ್ ಅಥವ ಮೊಬೈಲ್ ಮೂಲಕ ಲಾಗಿನ್ ಆಗಬೇಕು. ಮೊಬೈಲ್ ನಂಬರ್, ಓಟಿಪಿ ಮೂಲಕ ಪಾಸುಗಳನ್ನು ಪಡೆಯಬಹುದಾಗಿದೆ.

ಕೇಂದ್ರ ಗೃಹ ಇಲಾಖೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯತ್ರಾರ್ಥಿಗಳು, ಪ್ರವಾಸಿಗರ ಅಂತರರಾಜ್ಯ ಸಂಚಾರಕ್ಕೆ ಅವಕಾಶ ನೀಡಿದೆ. ತುರ್ತು ಸಂದರ್ಭದಲ್ಲಿ ಅಂತರ ಜಿಲ್ಲೆ, ರಾಜ್ಯದ ಪ್ರವಾಸಕ್ಕೆ ಪಾಸು ಪಡೆಯುವುದು ಕಡ್ಡಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+