ಮತ ಎಣಿಕೆಯ ಕ್ಷಣ-ಕ್ಷಣದ ಮಾಹಿತಿ ನಿಮ್ಮ 'ಒನ್‌ಇಂಡಿಯಾ ಕನ್ನಡ'ದಲ್ಲಿ

ನಾಳೆ ಕರ್ನಾಟಕ ಮತ್ತು ಭಾರತದ ರಾಜಕೀಯದ ಪಾಲಿಗೆ ಅತ್ಯಂತ ಮಹತ್ವದ ದಿನ. ನಾಳೆ ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಹೊರಬೀಳುವ ದಿನ. ನಮ್ಮನ್ನು ಇನ್ನು 5 ವರ್ಷಗಳ ಆಳುವರಾರು ಎಂದು ನಮಗೆ ತಿಳಿಯುವ ದಿನ. ಇಂತಹಾ ಮಹತ್ವದ ದಿನದ ಕ್ಷಣ ಕ್ಷಣದ ಮಾಹಿತಿಯನ್ನು ಒದಗಿಸುತ್ತಿದೆ 'ಒನ್ ಇಂಡಿಯಾ ಕನ್ನಡ'.

'ಒನ್ ಇಂಡಿಯಾ ಕನ್ನಡ'ವು ಫಲಿತಾಂಶ ದಿನದ ಕ್ಷಣ-ಕ್ಷಣದ ಮಾಹಿತಿಯನ್ನು ಫಲಿತಾಂಶದ 'ಲೈವ್ ಪೇಜ್‌' ಮೂಲಕ ಮಿಂಚಿನ ವೇಗದಲ್ಲಿ ಓದುಗರಿಗೆ ತಲುಪಿಸಲಿದೆ. ಜೊತೆಗೆ ಕ್ಷೇತ್ರವಾರು ಮುನ್ನಡೆ, ಗೆಲುವು-ಸೋಲು, ಮತಗಳ ಅಂತರ ಸೇರಿದಂತೆ ಹಲವು ಮಾಹಿತಿಗಳ ಜೊತೆಗೆ ಕ್ಷೇತ್ರವಾರು ಫಲಿತಾಂಶದ ವಿಶ್ಲೇಷಣೆಯನ್ನು ಓದುಗರ ಮುಂದಿಡಲಿದೆ.

ಕೇವಲ ಅಕ್ಷರ ರೂಪ ಮಾಹಿತಿಯನ್ನು ಮಾತ್ರ ನಿಡದೆ, ಚಿತ್ರ, ವಿಡಿಯೋ ಸಹಿತ ದೃಶ್ಯ ಸುದ್ದಿಯನ್ನು 'ಒನ್ಇಂಡಿಯಾ ಕನ್ನಡ' ಒದಗಿಸುತ್ತಿರುವುದು ವಿಶೇಷ. ಜೊತೆಗೆ 'ಲೈವ್‌ ವಿಡಿಯೋ' ಮೂಲಕ ಚುನಾವಣಾ ತಜ್ಞರು ಜನಾಭಿಪ್ರಾಯದ ವಿಷಯ ವಿಶ್ಲೇಷಣೆ ಮಾಡಲಿದ್ದಾರೆ.

One India Kannada giving full report about election result

ಒನ್‌ಇಂಡಿಯಾ ವರದಿಗಾರರು ನೀಡುವ ಗ್ರೌಂಡ್ ರಿಪೋರ್ಟ್‌, ತಕ್ಷಣದ ಫಲಿತಾಂಶದ ವಿವರ, ಗೆದ್ದ ಅಭ್ಯರ್ಥಿಗಳ ಅಬ್ಬರ, ಸೋತವರ ನಿರಾಶೆ. ಫಲಿತಾಂಶದ ನಂತರ ರಾಜ್ಯದ ಭವಿಷ್ಯ, ಸರ್ಕಾರ ರಚಿಸುವರಾರು?, ಮುಖ್ಯಮಂತ್ರಿ ಯಾರಾಗಬಹುದು? ಎಂಬೆಲ್ಲಾ ಕುತೂಹಲದ ಪ್ರಶ್ನೆಗಗಳನ್ನು ತಣಿಸಲಿವೆ ನಮ್ಮ ವಿಶ್ಲೇಷಣೆಗಳು.

ಸಾಮಾಜಿಕ ಜಾಲತಾಣದ ಮೂಲಕವೂ ಓದುಗರು ನಮ್ಮನ್ನು ತಲುಪಹುದು. ಒನ್‌ಇಂಡಿಯಾ ಕನ್ನಡವು ಫೇಸ್‌ಬುಕ್, ಟ್ವಿಟ್ಟರ್‌, ಗೂಗಲ್ ಪ್ಲಸ್‌ಗಳಂತಹಾ ಇನ್ನೂ ಕೆಲವು ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಯನ್ನು ತ್ವರಿತ ಗತಿಯಲ್ಲಿ ತಲುಪಿಸುತ್ತಿದೆ.

ಕರ್ನಾಟಕ ಭವಿಷ್ಯ ನಿರ್ಧಾರದ ದಿನದ 360 ಡಿಗ್ರಿ ಸುದ್ದಿ, ವಿಶ್ಲೇಷಣೆ, ಚಿತ್ರ, ವಿಡಿಯೋಗಳಿಗಾಗಿ ನಾಳೆ ಬೆಳಿಗ್ಗಿನಿಂದಲೇ 'ಒನ್‌ಇಂಡಿಯಾ ಕನ್ನಡ'ದ ಜೊತೆಗಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+