ಕರ್ನಾಟಕದಲ್ಲಿ ‘ಕೋಟಿ ವೃಕ್ಷ ಆಂದೋಲನ' ಜುಲೈ 2 ರಿಂದ

Written By:
Subscribe to Oneindia Kannada

ಬೆಂಗಳೂರು, ಜೂನ್ 16: 'ಕೋಟಿ ವೃಕ್ಷ ಆಂದೋಲನ' ಅಭಿಯಾನದ ಅಡಿ ಜುಲೈ 2ರಿಂದ 10ರ ವರೆಗೆ ರಾಜ್ಯದೆಲ್ಲೆಡೆ ಒಂದು ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಅರಣ್ಯ ಇಲಾಖೆ ಆಶ್ರಯದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಎಲ್ಲ ಜಿಲ್ಲೆಗಳಲ್ಲೂ ಚಾಲನೆ ನೀಡಲಾಗುತ್ತದೆ. ಸ್ಥಳೀಯ ಸಸ್ಯಗಳನ್ನೇ ನೆಡಲು ಅರಣ್ಯ ಇಲಾಖೆ ಮುಂದಾಗಿದ್ದು ಎನ್ ಜಿಒ ಗಳು, ಸಂಘ ಸಂಸ್ಥೆಗಳು, ವ್ಯಕ್ತಿಗಳು ಬೆಂಬಲ ನೀಡಬಹುದು.[ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ]

karnataka

ಕರ್ನಾಟಕಲ್ಲಿ ಇದೇ ಮೊದಲು
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂಥ ಆಂದೋಲನ ನಡೆಯುತ್ತಿದೆ. ಅರಣ್ಯ ಕಾಪಾಡುವಿಕೆ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಇದು ನೆರವು ನೀಡುವುದರಲ್ಲಿ ಅನುಮಾನವಿಲ್ಲ ಎಂದು ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಎಂ ಪರಮೇಶ್ವರ ತಿಳಿಸಿದ್ದಾರೆ.[ಬಿಸಿಲ ನಾಡಲ್ಲಿ ಅರಳಿದ ಜರ್ಬೆರಾ ಹೂವುಗಳು]

ರಾಜ್ಯವನ್ನು 40 ವಿಭಾಗ ಮಾಡಿ 13 ಘಟಕಗಳ ಮುಖೇನ ಕಾರ್ಯನಿರ್ವಹಣೆ ಮಾಡಲಾಗುವುದು. ಮೈಸೂರು ಘಟಕವೊಂದರಲ್ಲೇ 15 ಲಕ್ಷ ಸಸಿ ನೆಡುವ ಯೋಜನೆಯಿದೆ ಎಂದು ತಿಳಿಸಿದರು.[ಅನಂತ್ ಕುಮಾರ್ ಅವರ ಕನಸಿನ ಹಸಿರು ಬೆಂಗಳೂರು 1:1]

forest

ಅಭಿಯಾನದಡಿ ರೈತರು ಸಸಿಗಳನ್ನು ಪಡೆದುಕೊಳ್ಳಬಹುದಾಗಿದೆ. ಒಂದು ಸಸಿಗೆ 10 ರು. ಪ್ರೋತ್ಸಾಹ ಧನವನ್ನು ರೈತರು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಒಂದು ವರ್ಷ ಸಸಿ ಸಂರಕ್ಷಣೆ ಮಾಡಿದರೆ 15 ರು, ಎರಡನೇ ವರ್ಷ ಮತ್ತು ಮೂರನೇ ವರ್ಷವೂ ಸಂರಕ್ಷಣೆ ಮಾಡಿದರೆ 20 ರು. ಪ್ರೋತ್ಸಾಹ ಧನ ಪಡೆದುಕೊಳ್ಳಲು ಸಾಧ್ಯವಿದೆ. ರಾಜ್ಯದಲ್ಲಿ ಶೇ. 22 ರಷ್ಟು ಅರಣ್ಯ ಪ್ರದೇಶ ಇದ್ದು ಅದನ್ನು ಶೇ. 33 ಕ್ಕೆ ಏರಿಕೆ ಮಾಡುವ ಗುರಿಯೊಂದಿಗೆ ಸರ್ಕಾರ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ.

forest

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka: The Karnataka State government will plant 1 crore saplings from July 2 to 10 under the Koti Vraksha Abhiyan to increase green cover across state. This move is being spearheaded by the Forest Department through other government departments, NGOs, and individuals are welcome to participate.
Please Wait while comments are loading...