NWKRTC: ಇಲ್ಲಿಂದ ಮುರಡೇಶ್ವರಕ್ಕೆ ವೇಗಧೂತ ಬಸ್ ಸಾರಿಗೆ ಸೌಲಭ್ಯ: ಮಾರ್ಗಗಳು, ವೇಳಾಪಟ್ಟಿ ಇಲ್ಲಿದೆ
ಮಳೆಗಾಲದ ಮಧ್ಯ ಭಾಗದಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ದಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಇದೀಗ ಮುರಡೇಶ್ವರಕ್ಕೆ ವಿಶೇಷ ಸಾರಿಗೆ ಸೇವೆ ಒದಗಿಸಲಿದೆ. ಇತ್ತೀಚೆಗೆ ಧುಮ್ಮಿಕ್ಕುವ ಜೋಗ ಜಲಪಾತ, ಗೋಕಾಕ್ ಜಲಪಾತ, ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದ ಸಾರಿಗೆ ನಿಗಮ ಇದೀಗ ಮತ್ತೊಂದು ಪ್ರವಾಸಿ ಸ್ಥಳಕ್ಕೆ ಸೇವೆ ನೀಡುತ್ತಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಾಗಲಕೋಟೆ ಜಿಲ್ಲೆಯ ಇಳಕಲ್‌ನಿಂದ ಮುರಡೇಶ್ವರಕ್ಕೆ ವೇಗದೂತ ಸಾರಿಗೆ ವ್ಯವಸ್ಥೆ ಮಾಡಿದೆ. ಇದು ತಾತ್ಕಾಲಿಕ ಸಾರಿಗೆ ಅಲ್ಲ. ಈ ಮಾರ್ಗದಲ್ಲಿ ನಿರಂತರವಾಗಿ ಸೇವೆ ಮುಂದುವರಿಸಲಿದೆ. ಇದರಿಂದಾಗಿ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಇಳಕಲ್- ಮುರಡೇಶ್ವರ ಎಕ್ಸಪ್ರೆಸ್ ಸಾರಿಗೆ ಬಸ್ ನರಗುಂದ, ಹುಬ್ಬಳ್ಳಿ, ಕಲಘಟಗಿ, ಅಂಕೋಲಾ ಮಾರ್ಗವಾಗಿ ಮುರಡೇಶ್ವರಕ್ಕೆ ಬಂದು ತಲುಪುತ್ತದೆ. ವೇಳಾಪಟ್ಟಿ ನೋಡುವುದಾದರೆ, ಇಳಕಲ್ ಅನ್ನು ನಿತ್ಯ ಬೆಳಗ್ಗೆ 9.30ಕ್ಕೆ ಬಿಡುತ್ತದೆ. ಅದೇ ದಿನ ಸಂಜೆ 18 (06) ಗಂಟೆಗೆ ಮುರಡೇಶ್ವರ ತಲುಪುತ್ತದೆ. ಮಾರನೇ ದಿನ ಬೆಳಗ್ಗೆ 06 ಗಂಟೆಗೆ ಮುರಡೇಶ್ವರದಿಂದ ಹೊರಟು ಸಂಜೆ 18.30ಕ್ಕೆ ಇಳಕಲ್‌ಗೆ ಬರುತ್ತದೆ. ನೀವು ಹೆಚ್ಚಿನ ಮಾಹಿತಿಗೆ ಇಲ್ಲಿ ನೀಡಲಾದ 77609 93876 ಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಪಲ್ಲಕ್ಕಿ, ರಾಜಹಂಸ ಸಾರಿಗೆಗೆ ಬೇಡಿಕೆ
ಇಳಕಲ್- ಮುರಡೇಶ್ವರ ಹೊಸ ಮಾರ್ಗದಲ್ಲಿ ಬಸ್ ಬಿಟ್ಟ ಬೆನ್ನಲ್ಲೆ ಈ ಭಾಗದ ಹಲವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತೊಂದು ಮನವಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಇಳಕಲ್ -ಕಾರವಾರ ಮತ್ತು ಇಳಕಲ್-ದಾಂಡೇಲಿ-ಉಳವಿ ಬಸ್ ಗೆ ಬೇಡಿಕೆ ಸಲ್ಲಿಸಿದ್ದೇವು. ಈಗ ಮಂಜೂರಾದ ಸಾರಿಗೆ ಸೇವೆ ಇಳಕಲ್ ಮತ್ತು ಮಾರ್ಗದ ಜನರಿಗೆ ಅನುಕೂಲ ಆಗಲಿದೆ. ದಯಮಾಡಿ ಮುಂದಿನ ದಿನಗಳಲ್ಲಿ ಈ ಮಾರ್ಗಗಳಲ್ಲಿಯೂ ಪಲ್ಲಕ್ಕಿ, ರಾಜಹಂಸ ಸಾರಿಗೆ ಸೌಲಭ್ಯ ಕಲ್ಪಿಸಬೇಕೆಂದು ಅವರು ಕೋರಿದ್ದಾರೆ.
ಇದರೊಂದಿಗೆ ಇಳಕಲ್-ಮುರಡೇಶ್ವರ ಮಾರ್ಗದಲ್ಲಿ ರಾತ್ರಿ ಪಾಳಿಯ ಒಂದು ಬಸ್ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ. ಮತ್ತೊಬ್ಬರು ಈ ಮಾರ್ಗ ಸೇವೆಯನ್ನು ಮುಂದುವರಿಸಬೇಕು. ಪ್ರಯಾಣಿಕರಿಗೆ ಅನುಕೂಲವಾಗುವ ಇಂತಹ ಸೇವೆ, ಹೊಸ ಮಾರ್ಗಗಳಲ್ಲಿ ಸಿಗುವಂತಾಗಬೇಕು. ಹೆಚ್ಚಿನ ಸೇವೆ ಪರಿಚಯವಾಗಬೇಕು. ಇಳಕಲ್-ಮುರಡೇಶ್ವರ ಹೊಸ ಮಾರ್ಗದಲ್ಲಿ ಸಾರಿಗೆ ಸೇವೆಯು ರಿಸರ್ವೆಷನ್ ಇಲ್ಲ. ಗಡಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅದನ್ನು ಟಿಕೆಟ್ ರಿಸವೇರ್ಷನ್ (ಟಿಕೆಟ್ ಕಾಯ್ದಿರಿಸುವಿಕೆ) ವ್ಯವಸ್ಥೆಯ ಅಡಿಯಲ್ಲಿ ತರುವಂತೆ ಮತ್ತೊಬ್ಬರು ಮನವಿ ಮಾಡಿದ್ದಾರೆ.












Click it and Unblock the Notifications