ಚಾಮರಾಜನಗರದಲ್ಲಿ ಜೆಎಸ್‍ಎಸ್ ಆಸ್ಪತ್ರೆ ಆರಂಭ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 09 : ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ ಎಂಬ ಕೊರಗನ್ನು ಜೆಎಸ್‍ಎಸ್ ಸಂಸ್ಥೆಯು ನಿವಾರಿಸಿದೆ. ಸುಮಾರು 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಬಸವ ಜಯಂತಿದಿನದಂದು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗಿದೆ.

ಚಾಮರಾಜನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಪಕ್ಕದಲ್ಲೇ ಮೂರೂವರೆ ಎಕರೆ ಪ್ರದೇಶದಲ್ಲಿ 54 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆಸ್ಪತ್ರೆ ನಿರ್ಮಾಣ ವಾಗಿದೆ. ಈ ಆಸ್ಪತ್ರೆಯು ಚಾಮರಾಜನಗರದಲ್ಲೇ ಅತೀ ದೊಡ್ಡ ಖಾಸಗಿ ಆಸ್ಪತ್ರೆಯಾಗಿದೆ. [ಮೂರು ವೈದ್ಯಕೀಯ ಕಾಲೇಜು ಆರಂಭಕ್ಕೆ ಒಪ್ಪಿಗೆ ಸಿಕ್ಕಿತು]

chamarajanagar

ಆಸ್ಪತ್ರೆಯಲ್ಲಿ 15 ಹಾಸಿಗಳ ತುರ್ತು ಮತ್ತು ತೀವ್ರ ನಿಗಾ ಘಟಕವಿದೆ. 14 ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಆಸ್ಪತ್ರೆ ಹೊಂದಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಾರ್ಡ್‍ಗಳು, ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ತುರ್ತು ಚಿಕಿತ್ಸಾ ಘಟಕ, ನುರಿತ ತಜ್ಞ ವೈದ್ಯರ ತಂಡದಿಂದ ಹೃದಯ, ನೇತ್ರ, ದಂತ, ಹೀಗೆ ವಿವಿಧ ಮಾದರಿಯ ಆರೋಗ್ಯ ಸೇವೆ ದೊರೆಯಲಿದೆ. [ಕರ್ನಾಟಕದ ಮೊದಲ ಚರ್ಮ ಬ್ಯಾಂಕ್ ಉದ್ಘಾಟನೆ]

ಡಯಾಲಿಸಿಸ್ ಸೇವೆಯೂ ಲಭ್ಯವಿದೆ. ಮೂತ್ರಪಿಂಡ ರೋಗ ಹೊಂದಿರುವ ರೋಗಿಗಳು ಚಿಕಿತ್ಸೆಗಾಗಿ ಇದುವರೆಗೆ ಮೈಸೂರಿಗೆ ತೆರಳಬೇಕಾಗಿತ್ತು. ಇನ್ನು ಮುಂದೆ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಫಲಾನುಭವಿಗಳು ಇಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

hospital

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Please Wait while comments are loading...