ಎಸ್‌ಎಸ್‌ಎಲ್‌ಸಿ ರಿಸಲ್ಟ್ ನೆನಪು: ಆಗೆಲ್ಲಾ 10 ನೇ ಕ್ಲಾಸ್ ರಿಸಲ್ಟ್ ಅಂದ್ರೆ ಪೇಪರ್‌ಗಳಿಗೆ ಭಾರೀ ಡಿಮ್ಯಾಂಡ್

ನಾನು ಸುಮಾರು 60 ವರ್ಷಗಳಿಂದಲೂ 'ಪ್ರಜಾವಾಣಿ' ಪತ್ರಿಕೆಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ನನ್ನ ಊರು. ನನಗೆ ನೆನಪಿರುವಂತೆ 1973 ರವರೆಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಜೀವನದಲ್ಲಿ ಒಮ್ಮೆಯೂ ಪತ್ರಿಕೆ ತಿರುವಿ ಹಾಕದವರು ತಮ್ಮ ಮಕ್ಕಳ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನ ಪತ್ರಿಕೆಗಳನ್ನು ಖರೀದಿಸಲು ಹಾತೊರೆಯುತ್ತಿದ್ದರು.

ನಾವು ಏಜೆಂಟರು ಮುಂಚಿತವಾಗಿಯೇ ಹೆಚ್ಚಿನ ಪ್ರತಿಗಳಿಗೆ ಆರ್ಡರ್ ಹಾಕಿರುತ್ತಿದ್ದೆವು. ಕೆಲ ಅಪ್ಪಂದಿರಂತೂ ಹಿಂದಿನ ದಿನ ರಾತ್ರಿಯೇ ತೋವಿನಕೆರೆ ಬಸ್‌ಸ್ಟ್ಯಾಂಡ್‌ಗೆ ಬಂದು ಮಲಗಿರುತ್ತಿದ್ದರು. ಬೆಳಿಗ್ಗೆ ಕಾರಿನಲ್ಲಿ ಪೇಪರ್ ಇಳಿಸಿದ ತಕ್ಷಣ ಮಕ್ಕಳ ರಿಸಲ್ಟ್ ನೋಡಿಬಿಡಬೇಕೆನ್ನುವ ಕಾತರ ಅವರದು. 'ಪ್ರಜಾವಾಣಿ' ಪತ್ರಿಕೆಯು ಸುದೀರ್ಘ ಅವಧಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಿದೆ.

SSLC Results
SSLC ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿಯ ಬಸ್ ಕಂಡಕ್ಟರ್‌ ಪುತ್ರ ಪ್ರೀತಂ
SSLC ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿಯ ಬಸ್ ಕಂಡಕ್ಟರ್‌ ಪುತ್ರ ಪ್ರೀತಂ

ಆಗೆಲ್ಲಾ ಅಪ್ಪಂದಿರು ಮಕ್ಕಳನ್ನು ಬೈಯ್ಯುವಾಗಲೂ, 'ಅಳಿಯನು ಕುರುಡು ಬೆಳಿಗ್ಗೆ ಆದ್ರೆ ಗೊತ್ತಾಗುತ್ತೆ. ಪೇಪರ್‌ನಲ್ಲಿ ರಿಸಲ್ಟ್ ಬಂದಾಗ ನಿನ್ನ ಹಣೆಬರಹ ತಿಳಿಯುತ್ತೆ' ಎಂದು ಹೇಳುತ್ತಿದ್ದರು. 1973 ಕ್ಕೆ ಹಿಂದೆ 10 ನೇ ತರಗತಿ ಫಲಿತಾಂಶಗಳು ಪ್ರತಿವರ್ಷ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶದ ಹಿಂದಿನ ರಾತ್ರಿಯೇ ಬಂದು ತೋವಿನಕೆರೆ ಗ್ರಾಮದ ಪರಿಚಯಸ್ಥರ ಅಥವಾ ಶಾಲೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದರು.

ಶಾಲೆಗಳಿಗೆ ಅಗ ಫಲಿತಾಂಶ ಅಂಚೆ ಮೂಲಕ ಬರುತ್ತಿತ್ತು. ಕೆಲವು ಶಾಲೆಯವರು ಜಿಲ್ಲಾ ಕೇಂದ್ರದ ಕಚೇರಿಗೆ ಹೋಗಿ ತರತ್ತಿದ್ದರು. ಶಾಲೆಗಳಲ್ಲಿ ಫಲಿತಾಂಶ ನೋಡಲು ಮಧ್ಯಾಹ್ನವಾಗುತ್ತಿತ್ತು. ದಿನಪತ್ರಿಕೆಯವರಿಗೆ ಹಿಂದಿನ ರಾತ್ರಿಯೇ ಕೆಲವು ನಿಬಂಧನೆಗಳ ಮೂಲಕ ಉತ್ತೀರ್ಣವಾದವರ ನಂಬರ್ ಕೊಡುತ್ತಿದ್ದರು. ಇಡೀ ರಾತ್ರಿ ಮೊಳೆ ಜೊಡಿಸಿ ಫಲಿತಾಂಶಗಳ ಪುಟ ಸಿದ್ಧ ಮಾಡುತ್ತಿದ್ದರು. ನಗರ ಪ್ರದೇಶಗಳಿಗೆ ಬೆಳಗಿನ ಜಾವ ಫಲಿತಾಂಶ ಬಂದಿರುವ ಪುಟಗಳು ಸಿಗುತ್ತಿದ್ದವು.

ಬದುಕು ಬದಲಿಸಿಕೊಳ್ಳುವ ರಿಸೆಟ್ ಬಟನ್ ನಮ್ಮ ಕೈಲಿದೆ: ಫಲಿತಾಂಶ ನೋಡಿದವರಿಗೆ ರಂಗಣ್ಣನ ಪತ್ರ
ಬದುಕು ಬದಲಿಸಿಕೊಳ್ಳುವ ರಿಸೆಟ್ ಬಟನ್ ನಮ್ಮ ಕೈಲಿದೆ: ಫಲಿತಾಂಶ ನೋಡಿದವರಿಗೆ ರಂಗಣ್ಣನ ಪತ್ರ

ಗ್ರಾಮೀಣ ಪ್ರದೇಶಗಳಿಗೆ ಬಸ್ ಮೂಲಕ ಪತ್ರಿಕೆ ತಲುಪಬೇಕಾಗಿತ್ತು. ಫಲಿತಾಂಶವನ್ನು ಪತ್ರಿಕೆಯಲ್ಲಿ ನೋಡಿದ ಪೋಷಕರು ಮಕ್ಕಳಿಗೆ ಪೆಪರ್‌ಮೆಂಟ್ ಕೊಡಿಸಿ, ಅಕ್ಕಪಕ್ಕದ ಮನೆಗಳಿಗೆ ಹಂಚಲೆಂದು ಒಂದಿಷ್ಟನ್ನು ಪೊಟ್ಟಣ ಕಟ್ಟಿಸಿಕೊಂಡು ಹಿಂದಿರುಗುತ್ತಿದ್ದರು. ಕೆಲ ಪೋಷಕರು ಪಾಸಾಗಿದ್ದ ಮಕ್ಕಳಿಗೆ ಹೊಟೆಲ್‌ಗಳಲ್ಲಿ ಇಡ್ಲಿ-ಬೋಂಡಾ ಕೂಡ ಕೊಡಿಸುತ್ತಿದ್ದರು.

"ನಮ್ ಕಾಲದ ಎಸ್‌ಎಸ್‌ಎಲ್‌ಸಿ ಅಂದ್ರೆ ಈಗಿನ ಡಿಗ್ರಿಗಿಂತಲೂ ಜಾಸ್ತಿ" ಎನ್ನುವ ಮಾತನ್ನು ಈಗಲೂ ಕೆಲ ಹಿರಿಯರು ಹೇಳುತ್ತಿರುತ್ತಾರೆ.

- ಬರಹ: ಪದ್ಮರಾಜು, ಪತ್ರಿಕಾ ಏಜೆಂಟರು, ತೋವಿನಕೆರೆ, ತುಮಕೂರು ಜಿಲ್ಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+