3 ಉಪ ಮುಖ್ಯಮಂತ್ರಿಗಳಿಗೆ ಹೈಕಮಾಂಡ್‌ ಖಡಕ್ ಸಂದೇಶ!

Recommended Video

      ಅಮಿತ್ ಶಾ ಆದೇಶದಿಂದ ನಿರಾಸೆಗೊಂಡ 3 ಉಪ-ಮುಖ್ಯಮಂತ್ರಿಗಳು..? | Oneindia Kannada

      ಬೆಂಗಳೂರು, ಆಗಸ್ಟ್ 27 : 'ಝೀರೋ ಟ್ರಾಫಿಕ್' ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಬಹಳ ಚರ್ಚೆಗೆ ಒಳಗಾಗಿದ್ದ ಪದ. ಅನರ್ಹ ಶಾಸಕರಿಗೆ ಈ ವ್ಯವಸ್ಥೆ ನೀಡಿದ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆದಿತ್ತು. ಸ್ಪೀಕರ್ ಕೋಪಕ್ಕೆ ಗೃಹಮಂತ್ರಿಗಳು ಗುರಿಯಾಗಿದ್ದರು.

      ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 17 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಮೂರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಈಗ ಪುನಃ 'ಝೀರೋ ಟ್ರಾಫಿಕ್' ಚರ್ಚೆ ಆರಂಭವಾಗಿದೆ.

      ಉಪ ಮುಖ್ಯಮಂತ್ರಿಗಳು 'ಝೀರೋ ಟ್ರಾಫಿಕ್'ನಲ್ಲಿ ಸಂಚಾರ ನಡೆಸಲು ಅವಕಾಶವಿದೆ. ಮೈತ್ರಿ ಸರ್ಕಾರವಿದ್ದಾಗ ಒಬ್ಬ ಉಪ ಮುಖ್ಯಮಂತ್ರಿಗಳು ಇದ್ದು 'ಝೀರೋ ಟ್ರಾಫಿಕ್' ವಿಚಾರ ಜಟಾಪಟಿಗೆ ಕಾರಣವಾಗಿತ್ತು.

      ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವ ಈಗಿನ ಬಿಜೆಪಿ ಹೈಕಮಾಂಡ್ 'ಝೀರೋ ಟ್ರಾಫಿಕ್' ವಿಚಾರದಲ್ಲಿ ಅವರಿಗೆ ಖಡಕ್ ಸಂದೇಶ ನೀಡಿದೆ. ಇದರಿಂದಾಗಿ ಸಾಮಾನ್ಯ ಜನರು ನಿಟ್ಟುಸಿರು ಬಿಡುವಂತಾಗಿದೆ....

      ಹೈಕಮಾಂಡ್ ಸಂದೇಶವೇನು?

      ಹೈಕಮಾಂಡ್ ಸಂದೇಶವೇನು?

      ಮೂವರು ಉಪ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್ ವ್ಯವಸ್ಥೆ ಪಡೆದುಕೊಳ್ಳಬಾರದು ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾದ ಸಂದೇಶ ನೀಡಿದೆ. ಉಪ ಮುಖ್ಯಮಂತ್ರಿಗಳು ಸಂಚಾರ ನಡೆಸುವಾಗ ಆಗುವ ಸಂಚಾರ ದಟ್ಟಣೆಗೆ ಇದರಿಂದಾಗಿ ತಡೆ ಬಿದ್ದಿದೆ. 'ಝೀರೋ ಟ್ರಾಫಿಕ್‌ನಲ್ಲಿ ಸಂಚರಿಸುವ ನಾಯಕರ ನಿರೀಕ್ಷೆ ನಿರಾಸೆಯಾಗಿದೆ.

      ಮೂವರು ಡಿಸಿಎಂಗಳ ನೇಮಕ

      ಮೂವರು ಡಿಸಿಎಂಗಳ ನೇಮಕ

      ಗೋವಿಂದ ಕಾರಜೋಳ, ಡಾ. ಅಶ್ವತ್ಥ್ ನಾರಾಯಣ್ ಮತ್ತು ಲಕ್ಷ್ಮಣ ಸವದಿ ಕರ್ನಾಟಕದ ಉಪ ಮುಖ್ಯಮಂತ್ರಿಗಳಾಗಿ ನೇಮಕವಾಗಿದ್ದಾರೆ. ಮೂವರು ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಸಂಚಾರ ನಡೆಸಲು ಆರಂಭಿಸಿದರೆ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ. ಆದರೆ, ಉಪ ಮುಖ್ಯಮಂತ್ರಿಗಳಿಗೆ ಎಸ್ಕಾರ್ಟ್ ಸೌಲಭ್ಯ ಎಂದಿನಂತೆ ಇರಲಿದೆ.

      ಯಾರು-ಯಾರಿಗೆ ಝೀರೋ ಟ್ರಾಫಿಕ್?

      ಯಾರು-ಯಾರಿಗೆ ಝೀರೋ ಟ್ರಾಫಿಕ್?

      ಕಾನೂನಿನ ಪ್ರಕಾರ ರಾಜ್ಯದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು (ಅಗತ್ಯ ಸಂದರ್ಭದಲ್ಲಿ) ಝೀರೋ ಟ್ರಾಫಿಕ್ ವ್ಯವಸ್ಥೆ ಇರುತ್ತದೆ. ಉಪ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್ ವ್ಯವಸ್ಥೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

      ಡಿಸಿಎಂ ಝೀರೋ ಟ್ರಾಫಿಕ್ ವಿವಾದ

      ಡಿಸಿಎಂ ಝೀರೋ ಟ್ರಾಫಿಕ್ ವಿವಾದ

      ಕರ್ನಾಟಕದಲ್ಲಿ ಮೈತ್ರಿ ಸರ್ಕಾರವಿದ್ದಾಗ ಡಾ. ಜಿ. ಪರಮೇಶ್ವರ ಉಪ ಮುಖ್ಯಮಂತ್ರಿಯಾಗಿದ್ದರು. ಬೆಂಗಳೂರು ನಗರಾಭಿವೃದ್ಧಿ ಖಾತೆಯೂ ಅವರ ಬಳಿ ಇತ್ತು. ಆದ್ದರಿಂದ, ನಗರದಲ್ಲಿ ಸಂಚಾರ ಮಾಡುವಾಗ ಝೀರೋ ಟ್ರಾಫಿಕ್ ಬಳಕೆ ಮಾಡುತ್ತಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಹಲವು ಬಾರಿ ಜನರು ಉಪ ಮುಖ್ಯಮಂತ್ರಿಗಳ ಸಂಚಾರದ ವೇಳೆ ತೊಂದರೆ ಅನುಭವಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+