ಭಿನ್ನಮತ ಸಹಿಸಲ್ಲ, ಬೆಂಗಳೂರಲ್ಲಿ ದೇವೇಗೌಡ ಘರ್ಜನೆ
ಬೆಂಗಳೂರು, ನ.11 : 'ನನಗೆ ದೇವರ ಕೃಪೆ ಇದೆ, ದೇವೇಗೌಡರು ಜೀವಂತವಾಗಿರುವ ತನಕ ಜೆಡಿಎಸ್ ಪಕ್ಷವನ್ನು ಒಡೆಯಲು ಬಿಡುವುದಿಲ್ಲ. ನಾನು ಇರುವ ತನಕ ಭಿನ್ನಮತಕ್ಕೆ ಅವಕಾಶವಿಲ್ಲ' ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಜೆಡಿಎಸ್ ಪಕ್ಷದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, 'ಜೆಡಿಎಸ್ ಸ್ಫೋಟ ಮಾಡುವುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ, ನಾನು ಜೀವಂತವಾಗಿರುವ ತನಕ ಇದು ಸಾಧ್ಯವಿಲ್ಲ' ಎಂದು ಘೋಷಿಸಿದರು.

ಎಚ್.ಡಿ.ಕುಮಾರಸ್ವಾಮಿ ಮತ್ತು ತಮ್ಮ ವಿರುದ್ಧ ಆರೋಪ ಮಾಡಿದ್ದ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ ದೇವೇಗೌಡರು, ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಟ ಮಾಡಿದ್ದಾರೆ. ಪಕ್ಷ ಯಾರನ್ನೂ, ಯಾವ ನಾಯಕರನ್ನೂ ಕಡೆಗಣಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. [ಜೆಡಿಎಸ್ ನಾಯಕತ್ವ, ಹುಬ್ಬಳ್ಳಿಯಲ್ಲೂ ಅಪಸ್ವರ]
'ದೇವೇಗೌಡರು ಇರುವ ತನಕ ಪಕ್ಷದಲ್ಲಿ ಭಿನ್ನಮತಕ್ಕೆ ಅವಕಾಶವಿಲ್ಲ, ಶೀಘ್ರವೇ ತಾವು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇನೆ, ಪಕ್ಷವನ್ನು ಒಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ' ಎಂದು ಘಂಟಾಘೋಷವಾಗಿ ಸಾರಿದರು. [ಪಕ್ಷದ ಮೇಲೆ ನಿಷ್ಠೆ, ಲೀಡರ್ ಬಗ್ಗೆ ಅಷ್ಟಕಷ್ಟೆ!]
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಒಂದೇ ಏಟಿಗೆ ಉತ್ತರ ಕೊಡಲು ದೇವೇಗೌಡರು ಇಂದು ಪತ್ರಿಕಾಗೋಷ್ಠಿ ಕರೆದಿದ್ದರು.












Click it and Unblock the Notifications