ದೇವೇಗೌಡರ ಕುಲದೇವರ ದೇವಾಲಯ ಅರ್ಚಕರ ಮೇಲೆ ಐಟಿ ದಾಳಿ: ಸತ್ಯವೇನು?
ಬೆಂಗಳೂರು, ಏಪ್ರಿಲ್ 12: ದೇವೇಗೌಡ ಅವರ ಕುಲದೇವರ ದೇವಸ್ಥಾನದ ಅರ್ಚಕರ ಮೇಲೆ ಐಟಿ ದಾಳಿ ನಡೆಸಲಾಗಿದೆ ಎಂಬ ವದಂತಿ ಹಬ್ಬಿತ್ತು, ಆದರೆ ಇದನ್ನು ಐಟಿ ಇಲಾಖೆ ತಳ್ಳಿ ಹಾಕಿದೆ.
ದೇವೇಗೌಡ ಮನೆ ದೇವರಾದ ಹರದನ ಹಳ್ಳಿಯ ಈಶ್ವರ ದೇವಾಲಯ ಹಾಗೂ ದೇವಾಲಯ ಅರ್ಚಕ ಪ್ರಕಾಶ್ ಭಟ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಸುದ್ದಿ ಬೆಳಗಿನಿಂದ ಹರಿದಾಡುತ್ತಿತ್ತು.

ಆದರೆ ಈ ಸುದ್ದಿಯನ್ನು ಸಂಜೆ ವೇಳೆಗೆ ಅಲ್ಲಗಳೆದ ಐಟಿ ಇಲಾಖೆ ಆ ರೀತಿಯ ಯಾವುದೇ ದಾಳಿಯನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ. ರೇವಣ್ಣ ಹಾಗೂ ಕುಮಾರಸ್ವಾಮಿ ಅವರ ಆಪ್ತರ ಮನೆ ಮೇಲೆ ಕೆಲವು ದಿನಗಳ ಹಿಂದೆ ದಾಳಿ ನಡೆದಿದ್ದು ಈ ಸುದ್ದಿಗೆ ಇಂಬು ನೀಡಿತ್ತು.
ದೇವಾಲಯದ ಅರ್ಚಕರ ಮನೆ ಮೇಲೆ ದಾಳಿ ಆಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ, ಅರ್ಚಕರ ಮನೆಯಲ್ಲಿ ಒಣ ದ್ರಾಕ್ಷಿ, ಗೋಡಂಬಿ ಸಿಕ್ಕಿರಬೇಕು ಐಟಿ ಅಧಿಕಾರಿಗಳಿಗೆ ಎಂದು ವ್ಯಂಗ್ಯ ಮಾಡಿದ್ದರು.












Click it and Unblock the Notifications