ಅವಶ್ಯಕತೆ ಬಿದ್ದರೆ ಸಮ್ಮಿಶ್ರ ಸರಕಾರಕ್ಕೆ ನಾವು ಸೈ ಎಂದ ರೆಡ್ಡಿ; ಯಾವ ಪಕ್ಷದತ್ತ ಗಾಲಿ ಜನಾರ್ಧನ ರೆಡ್ಡಿ ಒಲವು!?

ಬೆಳಗಾವಿ, ಏಪ್ರಿಲ್‌4: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಚುನಾವಣೆಯಲ್ಲಿ ಗೆಲುವಿಗಾಗಿ ಸಾಕಷ್ಟು ತಂತ್ರಗಾರಿಕೆ ನಡೆಸಿರುವ ರಾಜಕೀಯ ಪಕ್ಷಗಳಿಗೆ ಹಲವು ಸಮೀಕ್ಷಗಳಿಂದ ಶಾಕ್‌ ಉಂಟಾಗಿದ್ದು, ಚುನಾವಣಾ ಫಲಿತಾಂಶಕ್ಕೂ ಮೊದಲೆ ಮೈತ್ರಿ ಸರ್ಕಾರ ರಚನೆಯ ಚರ್ಚೆ ನಡೆಯುತ್ತಿದೆ.

ಈ ಕುರಿತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ರಣಾಳಿಕೆಯನ್ನು ಯಾರು ಒಪ್ಪಿಕೊಳ್ಳುತ್ತಾರೆ ಆ ಪಕ್ಷಕ್ಕೆ ನಾವು ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಬಿಜೆಪಿ ನಾಯಕರಿಗೆ ಬೆಂಬಲ ನೀಡುವುದಾಗಿ ಜನಾರ್ಧನ ರೆಡ್ಡಡಿಇ ಹೇಳಿದ್ದಾರೆ ಎನ್ನಲಾಗಿದೆ.

No Party Can Come To Power Without My Support Says Janardhana Reddy

ರಾಜ್ಯದಲ್ಲಿ ಬಹುಮತ ಯಾವುದೇ ಪಕ್ಷಕ್ಕೆ ಬರದಿದ್ದರೆ ನಮ್ಮ ಪಕ್ಷದ ಅನಿವಾರ್ಯ ಅವರಿಗೆ ಬಿದ್ದರೆ ನಮ್ಮ ಪಕ್ಷದ ಜನಪರ ಪ್ರಣಾಳಿಕೆಯನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಒಪ್ಪಿದರೆ ನಾವು ಬೆಂಬಲವನ್ನು ನೀಡುತ್ತೇವೆ. ನಾನು ಸ್ವಂತ ಬಲದಿಂದ ಅಧಿಕಾರ ಮಾಡುವುದಕ್ಕೆ ಸಾಧ್ಯವಿಲ್ಲ, ರಾಜ್ಯದಲ್ಲಿ ನಾವು ಕನಿಷ್ಠ 25 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ನಮ್ಮ ಪಕ್ಷವನ್ನು ನಿರ್ಮಾಣ ಮಾಡಿಲ್ಲ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಅಥಣಿ , ಕುಡಚಿ ಯಾವ ಪಕ್ಷದ ಶಾಸಕರು ಇದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು. ನಾವು ಸದ್ಯ ರಾಜ್ಯಾದ್ಯಂತ 35 ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ.

ರಾಜ್ಯದಲ್ಲಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿಸಲು ಪೂರ್ವ ತಯಾರಿ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಕುಡಚಿ, ರಾಯಭಾಗ, ಅಥಣಿ, ಖಾನಾಪುರ ಇನ್ನೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಚುನಾವಣೆ ಕಣಕ್ಕೆ ಇಳಿಯುತ್ತಾರೆ. ಆ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದು ಜನಾರ್ದನ ರೆಡ್ಡಿ ಹೇಳಿದರು.

No Party Can Come To Power Without My Support Says Janardhana Reddy

ನನ್ನ ಬಗ್ಗೆ ನಮ್ಮ ರಾಜಕೀಯ ನಾಯಕರು ಅಪಪ್ರಚಾರ ಮಾಡಿದ್ದಾರೆ. ನನ್ನ ಜೊತೆಯಲ್ಲಿದ್ದ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ಅವತ್ತಿನ‌ ಸಂದರ್ಭ ಹಾಗಿತ್ತು. ಆದರೆ, ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದರು.

ನನ್ನ ಶ್ರೀಮಂತಿಕೆ ನನ್ನ ಜನಪರ ಕೆಲಸಗಳನ್ನು ನೋಡಿ, ನನಗೆ ಮೀನಿನ ರೀತಿಯಲ್ಲಿ ಬಲೆಗೆ ಹಾಕಿದರು. ಕಳೆದ 2 ವರ್ಷಗಳಿಂದ ಬಳ್ಳಾರಿಗೆ ಹೋಗುತ್ತಿದ್ದೆ ಆರಾಮವಾಗಿ ಇದ್ದೆ. ಆದರೆ ಚುನಾವಣೆಗೆ ಮುನ್ನ ಮತ್ತೆ ನನ್ನ ಬಳ್ಳಾರಿಯಿಂದ ಹೊರ ಹಾಕುವ ಕೆಲಸ ಮಾಡಿದ್ದಾರೆ. ಮಣ್ಣು ಮಾರಿ ದೊಡ್ಡವನಾಗಿದ್ದೇಯಾನೆ, ರ ಜೇಬು ಲೂಟಿ ಮಾಡಿ ನಾನು ದೊಡ್ಡವನಾಗಿಲ್ಲ. ನನ್ನ ಜೈಲಿನಲ್ಲಿ ಇಟ್ಟು ಒಂದು ರೂಪಾಯಿ ಕೂಡ ನನ್ನಿಂದ ವಾಪಸ್ ತೆಗೆದುಕೊಳ್ಳಲು ಆಗಲಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

ಸುಷ್ಮಾ ಸ್ವರಾಜ್ ಅವರು ನನಗೆ ರಾಜಕೀಯಕ್ಕೆ ಬರಬೇಕು ಎಂದು ಕೇಳಿಕೊಂಡಿದ್ದರು. ಇದರಿಂದ ನಾನು ರಾಜಕೀಯಕ್ಕೆ ಬಂದೆ. ಬೈ ಎಲೆಕ್ಷನ್‌ನಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್ ಸೋತಿದ್ದರೂ ಸಹ ಬಿಜೆಪಿ ಕರ್ನಾಟಕದಲ್ಲಿ ನೆಲೆಯೂರುವಂತಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಮುಂದೆ ಅವರು, ಬಿಜೆಪಿ ಪಕ್ಷ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಸಾಧ್ಯ ಆಗಿದ್ದು, ಗಾಲಿ ಜನಾರ್ದನ ರೆಡ್ಡಿ ಅವರ ಪರಿಶ್ರಮದಿಂದ‌‌ ಎಂದು ನನ್ನ ಬೆನ್ನು ತಟ್ಟಿ ಹೇಳಿದ್ದರು. ಆದರೆ, ಇವತ್ತು ಆಗಿರುವುದೇ ಬೇರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+