Get Updates
Get notified of breaking news, exclusive insights, and must-see stories!

ಹೊಡೆದು ಸಾಯಿಸುವ ಹುನ್ನಾರ; ನೀರೂ ಕೊಡಲಿಲ್ಲ, ಮೂತ್ರಕ್ಕೂ ಅವಕಾಶ ಇಲ್ಲ: ರಾತ್ರಿ ನಡೆದ ಘಟನೆ ಬಿಚ್ಚಿಟ್ಟ ಸಿ ಟಿ ರವಿ

ಬೆಂಗಳೂರು, ಡಿಸೆಂಬರ್‌ 21: ಇದೇ 19ರ ರಾತ್ರಿ ನನ್ನ ಮೇಲಿನ ಹಲ್ಲೆ ಕುರಿತ ದೂರು ಕೊಟ್ಟೆ, ಎಫ್‍ಐಆರ್ ಬುಕ್ ಮಾಡಲೇ ಇಲ್ಲ. ಹೋಗಿ ಬಂದು ಫೋನಿನಲ್ಲಿ ಮಾತನಾಡುತ್ತಿದ್ದರು. ನನ್ನನ್ನು ಐಸೋಲೇಟ್ ಮಾಡಿದರು. ಹೊರಗಡೆ ಸೇಫಾಗಿ ಕರೆದುಕೊಂಡು ಹೋಗುವುದಾಗಿ ಹೇಳಿ ಎತ್ತಿಕೊಂಡು ಪೊಲೀಸ್ ಸ್ಕಾರ್ಪಿಯೊದಲ್ಲಿ ತುಂಬಿದರು. ಆಗ ಲಾಠಿಯಿಂದ ಹೊಡೆತ ಬಿತ್ತೋ ಹೇಗಾಯಿತೋ ಗೊತ್ತಿಲ್ಲ. ರಕ್ತ ಬರಲಾರಂಭಿಸಿತ್ತು. ಆಗ ರಾತ್ರಿ 11.45 ಸಮಯ ಇರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ರಾತ್ರಿ ನಡೆದ ಘಟನೆ ಕುರಿತು ಬಿಚ್ಚಿಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಲ್ಲಿಂದ ನಂದಗಡ, ಕಿತ್ತೂರಿಗೆ ಕರೆದೊಯ್ದರು. ಕುಡಿಯಲು ನೀರು ಕೊಡಿ ಎಂದರೆ, ವಾಂತಿ ಆಗುವಂತಿದೆ ಎಂದು ತಿಳಿಸಿದರೆ ವಾಹನದಲ್ಲಿ ನೀರೇ ಇರಲಿಲ್ಲ. ಫೋನ್ ಮೂಲಕ ನಿರ್ದೇಶನದಂತೆ ಕಿತ್ತೂರು, ಒಳಗೆ ಗಲ್ಲಿ ರಸ್ತೆಗೆ ಒಯ್ದರು. ಹಿಂದೆ ಬರುತ್ತಿದ್ದ ಮಾಧ್ಯಮಗಳ ವಾಹನ, ನನ್ನ ಪಿ.ಎ. ವಾಹನವನ್ನು ಬ್ಯಾರಿಕೇಡ್ ಹಾಕಿ ತಡೆದಿದ್ದರು. ವಾಹನ ಬ್ಲಾಕ್ ಮಾಡಲು ಹೇಳುತ್ತಿದ್ದರು. ಬಳಿಕ ಕೇಳಿದರೆ ಬೆಳಗಾವಿ ಕಡೆಗೆ ಎಂದರು. ಆಗ ಧಾರವಾಡ ಹೈಕೋರ್ಟ್ ಕಟ್ಟಡ ಕಾಣಿಸಿತ್ತು. ಕೇಳಿದರೆ ಉತ್ತರ ಸಿಗಲಿಲ್ಲ.

No FIR has been filed regarding my complaint Says MLC CT Ravi

ಅರೆಸ್ಟ್ ಕಾರಣ ಕೇಳಿ ಡೋರ್ ತೆಗೆಯಲೆತ್ನಿಸಿದೆ. ಬಲವಂತ ಮಾಡಿದ ಗುರುತುಗಳಿವೆ. ನಾನು ಆಗ ಪತ್ನಿಗೆ ಲೈವ್ ಲೊಕೇಶನ್ ಹಾಕಿದೆ. ಫೋನ್ ಮಾಡಿದರು. ಗಾಬರಿ ಪಡದಂತೆ ಸಮಾಧಾನ ಮಾಡಿದೆ. ಸವದತ್ತಿ, ರಾಮದುರ್ಗ, ಯಾದವಾಡ, ಕಬ್ಬಿನ ಗದ್ದೆಗಳ ನಡುವೆ ನಿಲ್ಲಿಸಿದ್ದರು. ಹಿಂದೆ, ಮುಂದೆ ಪೊಲೀಸ್ ಜೀಪಿತ್ತು. ಆರರಿಂದ 8 ಜನ ಪೊಲೀಸರಿದ್ದರು. ಇಳಿದುಹೋಗಿ ಫೋನಿನಲ್ಲಿ ಮಾತನಾಡಿದರು. ಮಾಧ್ಯಮದವರು ಬಂದಾಗ ತಡೆದರು. ನಡೆ ನಿಗೂಢ ಎಂದು ಮಾಧ್ಯಮದವರಿಗೆ ತಿಳಿಸಿದೆ. ಇನ್ನೆಲ್ಲಿಗೋ ಕರೆದೊಯ್ದರು. ಮೂತ್ರಕ್ಕೂ ಅವಕಾಶ ಕೊಡಲಿಲ್ಲ. ಡಿವೈಎಸ್ಪಿ ಕಚೇರಿಗೆ ಕರೆದೊಯ್ದಾಗ ಅಲ್ಲಿಗೆ ಕೇಶವ ಪ್ರಸಾದ್ ಸೇರಿಕೊಂಡರು ಎಂದರು.

ಅವರು ಜೋರು ಮಾಡಿದರು. ವಾಶ್ ರೂಂ ಕೆಟ್ಟದಾಗಿತ್ತು. ಕನ್ನಡಿ ನೋಡಿದಾಗ ರಕ್ತ ಗಡ್ಡ, ಮೀಸೆಯಲ್ಲಿ ಅಂಟಿಕೊಂಡಿತ್ತು. ಪೊಲೀಸರು ಸ್ಥಳೀಯ ನರ್ಸ್ ಕರೆಸಿ ಫಸ್ಟ್ ಏಯ್ಡ್ ಮಾಡಿಸಿದರು. 11.45ರಿಂದ 3ರವರೆಗೂ ಚಿಕಿತ್ಸೆ ಕೊಡಲಿಲ್ಲ. ಕುಡಿಯಲು ನೀರಿಲ್ಲ; ವಾಶ್ ರೂಮಿಗೆ ಜಾಗ ಇಲ್ಲ. ಹಳ್ಳಿ ರಸ್ತೆ, ಗದ್ದೆ, ಕಾಡಿನ ರಸ್ತೆಯಲ್ಲಿ ಓಡಾಡಿಸುತ್ತಿದ್ದರು ಎಂದು ತಿಳಿಸಿದರು.

ಮಾಧ್ಯಮ ವಾಹನಕ್ಕೆ ಪೊಲೀಸ್ ವಾಹನದಿಂದ ಗುದ್ದಿಸಿ ಬ್ಲಾಕ್ ಮಾಡಿದ್ದರು. ಹಳ್ಳ, ದಿಬ್ಬವಿರುವ ನಿಗೂಢ ದಾರಿಯಲ್ಲಿ ವಾಹನ ಒಯ್ದರು. ಕೊನೆಗೆ ಅದು ನಿಂತಿದ್ದು ಸ್ಟೋನ್ ಕ್ರಷರ್ ಇದ್ದ ಜಾಗದಲ್ಲಿ. ನಾನು ಆಗ ನೀವು ನನ್ನನ್ನು ಏನೋ ಮಾಡಹೊರಟಿದ್ದೀರಿ ಎಂದು ಚೀರಾಡಿದೆ. ಮಾಧ್ಯಮದವರು ಅಲ್ಲಿಗೂ ಬೈಕ್, ಕಾರಿನಲ್ಲಿ ಬಂದರು ಎಂದು ಮಾಹಿತಿ ಕೊಟ್ಟರು.

ಕೇಶವ ಪ್ರಸಾದ್ ಒತ್ತಡಪೂರ್ವಕ ಬಂದು ನಮ್ಮ ವಾಹನ ಏರಿದರು. ಆಗಾಗ ಟೆಲಿಫೋನ್ ಕರೆ ಬರುತ್ತಿತ್ತು. ಲೆಫ್ಟ್, ರೈಟ್, ಯೂ ಟರ್ನ್ ಎಂದು ಸೂಚನೆ ಕೊಡುತ್ತಿದ್ದರು. 20ಕ್ಕೂ ಹೆಚ್ಚು ಬಾರಿ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದರು. ತಳ್ಳಾಟ, ನೂಕಾಟ ನಡೆಯಿತು. ನನ್ನ ಕುತ್ತಿಗೆ ಹಿಡಿದು ಒತ್ತಾಯದಿಂದ ಫೋನ್ ಕಿತ್ತುಕೊಳ್ಳಲೆತ್ನಿಸಿದರು. ನಾನು ಜರ್ಕಿನ್ ಜಿಪ್ ಹಾಕಿ ಫೋನ್ ಕೊಡಲಿಲ್ಲ ಎಂದರು. ಫೋನ್ ಕಿತ್ತುಕೊಳ್ಳಲಾಗೋದಿಲ್ವೇ ಎಂದು ಫೋನ್‍ನಲ್ಲಿ ಮಾತನಾಡಿದವರು ಗದರಿಸುವುದು ಕೇಳಿಸಿತ್ತು ಎಂದರು. ಯಾರೆಂದು ಕೇಳಿದರೆ ತಿಳಿಸಲಿಲ್ಲ ಎಂದು ಹೇಳಿದರು.

ರಾಮದುರ್ಗದ ಡಿವೈಎಸ್ಪಿ ಚಿದಂಬರಂ, ಬೆಳಗಾವಿ ಮಾರ್ಕೆಟ್‍ನ ಎಸಿಪಿ ಗಂಗಾಧರ್, ಕಿತ್ತೂರು ಪಿಎಸ್‍ಐ ಪ್ರವೀಣ್ ನಿರ್ದೇಶನ ಬರುತ್ತಿತ್ತು. ಹಿಂದೆ ಮುಂದೆ ಯಾರಿದ್ದರೋ ಗೊತ್ತಿಲ್ಲ ಎಂದು ತಿಳಿಸಿದರು. ಮತ್ತೆ ಕೇಶವಪ್ರಸಾದರನ್ನು ಬಲವಂತವಾಗಿ ಎಳೆದು ಹಾಕಿ, ಮಾಧ್ಯಮಗಳನ್ನು ಬ್ಯಾರಿಕೇಡ್ ಹಾಕಿ ದೂರವಿಟ್ಟು ನನ್ನೊಬ್ಬನನ್ನೇ ಕರೆದೊಯ್ದರು ಎಂದರು.

ಲೋಕಾಪುರ, ಮುಧೋಳಕ್ಕೆ ಒಯ್ಯಲಾಯಿತು. ಕುಡಿದಿದ್ದ ಧಡೂತಿ ವ್ಯಕ್ತಿ ಫೋನ್ ಕಿತ್ತುಕೊಳ್ಳಲು ಮುಂದಾದ; ಆಗ ತಲೆ ಚಚ್ಚಿಕೊಂಡು ಡೋರ್ ಒದ್ದೆ. ನೆಗೆಯುವುದಾಗಿ ತಿಳಿಸಿದೆ. ಆಗ ಮತ್ತೆ ರಕ್ತ ಬರುವ ಕಾರಣ ಫೋನ್ ಕಿತ್ತುಕೊಳ್ಳಲಿಲ್ಲ ಎಂದು ಕಾರಣ ತಿಳಿಸಿದರು. ಗದ್ದೆಯೊಳಗೆ ನಿಲ್ಲಿಸಿ ಫೋನ್ ಕೇಳಿದರು. ಕಾಲು ಹಿಡಿಯಲು ಬಂದರು. ಫೋನ್ ವಿಷಯ ಎತ್ತಿದರೆ ಹುಷಾರ್, ಅರೆಸ್ಟ್ ಮಾಡಿದ್ದೀರಾ? ಕಾರಣ ಹೇಳಿ ಎಂದೆ. ರೌದ್ರಾವತಾರ ತಾಳಿ ಹಲ್ಲು ಕಡಿದಾಗ ಭಯಗೊಂಡರು ಎಂದರು.

ಮುಧೋಳದ ಬಳಿ ಗ್ರಾಮಾಂತರ ಎಸ್ಪಿ ಭೀಮಾಶಂಕರ ಗುಳೇದ ಬಂದರು. ಪೊಲೀಸ್ ವರ್ತನೆ ಬಗ್ಗೆ ವಿವರಿಸಿದೆ. ಧಡೂತಿ ಮತ್ತೆ ಫೋನ್ ಕಿತ್ತುಕೊಳ್ಳಲು ಬಂದ. ತಳ್ಳಾಟ ನೂಕಾಟ ನಡೆಯಿತು. ಎಸ್ಪಿಗೂ ನಿರ್ದೇಶನ ಬರುತ್ತಿತ್ತು. ಮಾಧ್ಯಮ, ಇತರ ವಾಹನಗಳನ್ನು ತಪ್ಪಿಸಿ ನಿಗೂಢ ಜಾಗಕ್ಕೆ ಮುಂದೊಯ್ದರು. ಫೋಟೊ, ಟ್ವೀಟ್ ಬಗ್ಗೆ ಆಕ್ಷೇಪಿಸಿದರು. ಬಳಿಕ ಅಂಕಲಗಿ ಠಾಣೆಗೆ ಹೋದಾಗ ಬೆಳಕು ಹರಿದಿತ್ತು. ಅಲ್ಲಿ ಟಾಯ್ಲೆಟ್‍ಗೆ ಹೋದೆ. ರಾತ್ರಿ ಊಟವೂ ಇರಲಿಲ್ಲ. ಹೊಟ್ಟೆ ನೋವು ಬರುತ್ತಿತ್ತು. ಆಗ ಏನಾದರೂ ತಿನ್ನಿ ಎಂದರು. ನಾನು ನಿರಾಕರಿಸಿದೆ ಎಂದು ಹೇಳಿದರು.

ಸೀಬೆಹಣ್ಣು ತರಿಸಿ ತಿಂದೆ. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರು. ಬಿಪಿ ಜಾಸ್ತಿ ಇತ್ತು. ಸ್ಕ್ಯಾನಿಂಗ್, ಎಕ್ಸ್‍ರೇ ಮಾಡಿಸಿದರು. ಎಲ್ಲ ಕಡೆ ನಿಗೂಢವಾಗಿ ಯಾಕೆ ನಡೆಸಿಕೊಂಡರು. ಕಬ್ಬಿನ ಗದ್ದೆಯಲ್ಲಿ ಯಾರನ್ನೋ ಕರೆಸಿ ಸಾಯಿಸುವ, ಗುಂಪು ಹೊಡೆದು ಸಾಯಿಸಿದೆ ಎಂದು ತಿಳಿಸುವ ಹುನ್ನಾರ ಇದರ ಹಿಂದಿತ್ತೇ ಎಂದು ಅನುಮಾನ ವ್ಯಕ್ತಪಡಿಸಿದರು. ಕೋರ್ಟಿನಲ್ಲಿ ಎಲ್ಲವನ್ನೂ ಸಂಕ್ಷಿಪ್ತವಾಗಿ ನ್ಯಾಯಾಧೀಶರ ಮುಂದಿಟ್ಟೆ ಎಂದು ತಿಳಿಸಿದರು.

ನನ್ನ ಮೇಲಿನ ಹಲ್ಲೆಗೆ ವಿಶುವಲ್ಸ್ ಇವೆ. ನಿಮ್ಮ ಆರೋಪಕ್ಕೆ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಇದೆ. ಅದು ಬಿಟ್ಟರೆ ಬೇರೇನಿಲ್ಲ. ನನ್ನ ದೂರಿನ ಎಫ್‍ಐಆರ್ ದಾಖಲಿಸಿಲ್ಲ. ಕಾನೂನು ಎಲ್ಲರಿಗೂ ಸಮಾನವಲ್ಲವೇ ಎಂದು ಪ್ರಶ್ನಿಸಿದರು. ಅಂಬೇಡ್ಕರರ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಆದರೆ, ನೀವು ಲಕ್ಷ್ಮಿ ಹೆಬ್ಬಾಳ್ಕರರಿಗೆ ಹೆಚ್ಚಿನ ಆದ್ಯತೆ, ಹಕ್ಕು ಕೊಟ್ಟಿದ್ದೀರಿ ಎಂದು ಟೀಕಿಸಿದರು. ಮಾನವ ಹಕ್ಕು ಉಲ್ಲಂಘನೆ ಆಗುವಂತೆ ನಡೆದುಕೊಂಡಿದ್ದೀರಿ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+