ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮೊದಲ ಬಾರಿಗೆ ಕ್ರಿಶ್ಚಿಯನ್ನರಿಗೆ ಟಿಕೆಟ್ ಇಲ್ಲ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 20- ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಸಜ್ಜಾಗುತ್ತಿದೆ. ದಿಲ್ಲಿಯಿಂದ ಹಳ್ಳಿಯವರೆಗೂ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಕ್ರಿಶ್ಚಿಯನ್ನರನ್ನು ಓಲೈಸುತ್ತಾ ಬಂದಿದ್ದ ಪಕ್ಷವು ಈ ಬಾರಿ ರಾಜ್ಯದಲ್ಲಿ ಆ ಸಮುದಾಯಕ್ಕೆ ಯಾರೊಬ್ಬರಿಗೂ ಚುನಾವಣಾ ಟಿಕೆಟ್ ನೀಡಿಲ್ಲ.

ರಾಜ್ಯದಲ್ಲಿ ಕಳೆದ 33 ವರ್ಷಗಳ ಲೋಕಸಭಾ ಚುನಾವಣೆಯ ಇತಿಹಾಸವನ್ನು ಕೆದಕಿ ನೋಡಿದರೆ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವೊಬ್ಬ ಕ್ರಿಶ್ಚಿಯನ್ನರೂ ಸ್ಥಾನ ಪಡೆದಿಲ್ಲ.

ರಾಜ್ಯದ ಜನಸಂಖ್ಯೆ 6.18 ಕೋಟಿ ಮಂದಿಯಿದ್ದು, ಇದರಲ್ಲಿ ಕ್ರಿಶ್ಚಿಯನ್ನರು ಶೇ. 3-4 ರಷ್ಟಿದ್ದಾರೆ. ಇವರಲ್ಲಿ ಬಹುತೇಕರು ಕಾಂಗ್ರೆಸ್ ಬೆಂಬಲಿಗರು ಎಂದು ಪರಿಗಣಿಸಲಾಗಿದೆ. ಪ್ರತಿ ಚುನಾವಣೆಯಲ್ಲೂ ಕ್ರಿಶ್ಚಿಯನ್ನರಿಗೆ 1 ಟಿಕೆಟ್ ಆದರೂ ಲಭಿಸುತ್ತಿತ್ತು.

no-christian-in-karnataka-state-congress-lok-sabha-candidate-list
ಕಾಂಗ್ರೆಸ್ ಪಕ್ಷವು 1980ರಲ್ಲಿ ಅಸ್ಕರ್ ಫರ್ನಾಂಡಿಸ್ ಅವರನ್ನು ಕಣಕ್ಕಿಳಿಸಿತ್ತು. ಮುಂದೆ ನಾಲ್ಕು ಬಾರಿ ಚುನಾವಣೆಗಳಲ್ಲಿ ಅವರು ಆರಿಸಿ ಬಂದರು. 1998ರಲ್ಲಿ ಪಕ್ಷವು ಅಸ್ಕರ್ ಫರ್ನಾಂಡಿಸ್ ಜತೆಗೆ ಮಾರ್ಗರೆಟ್ ಆಲ್ವಾ ಅವರಿಗೂ ಟಿಕೆಟ್ ನೀಡಿತು. ಆದರೆ ಇಬ್ಬರೂ ಪರಾಜಿತರಾದರು.

ಅದಾದನಂತರ ಮಾರ್ಗರೆಟ್ ಆಳ್ವಾ ಅವರು 1998ರ ಚುನಾವಣೆಯನ್ನು ಗೆದ್ದರು. ಅದಾಗುತ್ತಿದ್ದಂತೆ 2004ರಲ್ಲಿ ಮತ್ತೆ ಸೋತರು. 2009ರಲ್ಲಿ ಪಕ್ಷವು ಎಚ್ ಟಿ ಸಾಂಗ್ಲಿಯಾನ ಮತ್ತು ಮಾರ್ಗರೆಟ್ ಆಳ್ವಾ ಇಬ್ಬರಿಗೂ ಟಿಕೆಟ್ ನೀಡಿತು. ಆದರೆ ಇಬ್ಬರೂ ಪರಾಜಿತರಾದರು.

'ಪಕ್ಷದ ವತಿಯಿಂದ ಕೆಲವು ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಹೈಕಮಾಂಡ್ ಅಂತಿಮ ಗಳಿಗೆಯಲ್ಲಿ ಯಾರನ್ನು ಕಣಕ್ಕಿಳಿಸಿಲ್ಲ' ಎಂದು ಹೇಳಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರು ಅದೇ ಉಸಿರಿನಲ್ಲಿ 'ಅದರರ್ಥ ನಾವು ಕ್ರಿಶ್ಚಿಯನ್ನರನ್ನು ಕೈಬಿಟ್ಟಿದ್ದೇವೆ ಅಂತಲ್ಲ. ಬೇರೆ ಬೇರೆ ವೇದಿಕೆಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾಣ ಕಲ್ಪಿಸುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಕ್ರಿಶ್ಚಿಯನ್ನರನ್ನು ಕೈಬಿಟ್ಟಿರುವುದಕ್ಕೆ ವಿರೋಧ/ ಟೀಕೆಗಳು ಕೇಳಿಬಂದಿವೆ. ಪ್ರಸ್ತುತ ರಾಜಸ್ಥಾನದ ಗವರ್ನರ್ ಆಗಿರುವ ಮಾರ್ಗರೆಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ ಸಹ ಈ ಬಾರಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬುದು ಗಮನಾರ್ಹ.

ಇನ್ನು, ಮಾಜಿ ಪೊಲೀಸ್ ಅಧಿಕಾರಿ ಎಚ್ ಟಿ ಸಾಂಗ್ಲಿಯಾನ ಅವರಂತೂ ಕಾಂಗ್ರೆಸ್ ನೀತಿಯನ್ನು ವಿರೋಧಿಸಿ, ಮತ್ತೆ ಬಿಜೆಪಿಯತ್ತ ಒಲವು ತೋರುವ ಸೂಚನೆಗಳಿವೆ. 2004ರಲ್ಲಿ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.

English summary
Lok Sabha polls 2014: No Christian in karnataka State Congress Lok Sabha candidate List. For the first time in 33 years, no candidate from the Christian community in Karnataka has found a place on the list of nominees announced by the Congress for the upcoming Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X