ಧರ್ಮಸ್ಥಳ ಪರ ನಿಂತ ನಿತ್ಯಾನಂದ, ಕೈಲಾಸದಿಂದಲೇ ಕೊಟ್ಟ ಮಸೇಜ್ ಏನು
ಧರ್ಮಸ್ಥಳದ ವಿಚಾರವು ಇದೀಗ ಕೇವಲ ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ಹಾಗೂ ವಿದೇಶಿ ಮಾಧ್ಯಮಗಳಲ್ಲೂ ಭಾರೀ ಚರ್ಚೆಗಳು ನಡೆದಿವೆ. ಇದೀಗ ಧರ್ಮಸ್ಥಳದ ಪರವಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸದಿಂದಲೇ ಮೆಸೇಜ್‌ವೊಂದನ್ನು ಕಳುಹಿಸಿದ್ದಾರೆ. ಈ ಮೆಸೇಜ್ ಇದೀಗ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದರ ನಡುವೆ ನಿತ್ಯಾನಂದ ಸ್ವಾಮಿ ಸಪೋರ್ಟ್ ಮಾಡಿರುವುದು ವೈರಲ್ ಆಗುತ್ತಿದೆ.
ಧರ್ಮಸ್ಥಳದ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅಪಪ್ರಚಾರವನ್ನುಂಟು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಜೆಡಿಎಸ್ ಪಕ್ಷವು #ಧರ್ಮಸ್ಥಳಸತ್ಯಯಾತ್ರೆ ನಡೆಸುವುದಾಗಿ ಹೇಳಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳ ವತಿಯಿಂದ "ಧರ್ಮಸ್ಥಳ ಸತ್ಯ ಯಾತ್ರೆ"ಯನ್ನು ಕೈಗೊಂಡಿದ್ದು ಕಾರ್ಯಕರ್ತರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮ ರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿ ಎಂದು ಜೆಡಿಎಸ್ ಹೇಳಿದೆ.

ಬಿಜೆಪಿ ಸಹ ಧರ್ಮಸ್ಥಳ ವಿಚಾರದಲ್ಲಿ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ಹಿಂದೂಗಳ ಭಕ್ತಿ ಹಾಗೂ ನಂಬಿಕೆಗಳನ್ನು ಘಾಸಿಗೊಳಿಸುವುದು ನಗರ ನಕ್ಸಲರ ಫುಲ್ ಟೈಂ ಉದ್ಯೋಗ ಎಂದು ಬಿಜೆಪಿ ಹೇಳಿದೆ. ಹಿಂದೂ ಧರ್ಮದ ನಂಬಿಕೆಗಳ ಮೇಲೆ ತಮ್ಮ ನಿರಂತರ ದಾಳಿಗಳ ನಡುವೆಯೂ, ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿನ ಭಕ್ತರ ಜನಜಂಗುಳಿ ಕೊಂಚವೂ ಕಡಿಮೆಯಾಗದಿರುವುದು ನಗರ ನಕ್ಸಲರ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.
ಹೀಗಾಗಿ ಹಿಂದೂ ಶ್ರದ್ಧಾ ಕೇಂದ್ರಗಳಾದ ಶಬರಿಮಲೆ, ಶನಿ ಶಿಂಗಾಪುರ, ಈಶಾ ಪ್ರತಿಷ್ಠಾನ, ಧರ್ಮಸ್ಥಳಗಳ ಮೇಲೆ ಷಡ್ಯಂತ್ರ ರೂಪಿಸಿದ ಬಳಿಕ ಈಗ ಚಾಮುಂಡಿ ಬೆಟ್ಟದ ಮೇಲೆ ಸಹ ಕೆಂಗಣ್ಣು ಬೀರಿರುವುದು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಘಜ್ನಿ, ಘೋರಿ, ಔರಂಗಜೇಬನಂತಹ ಕ್ರೂರಿ ಮತಾಂಧರನ್ನು ಎದುರಿಸಿದ ಬಳಿಕವೂ ಹಿಂದೂ ಸಮಾಜ ಪುಟಿದೆದ್ದು ನಿಂತಿದೆ, ಅಂತಹದರಲ್ಲಿ ನಗರ ನಕ್ಸಲರ ಇಂತಹ ಷಡ್ಯಂತ್ರಗಳು ತೃಣಕ್ಕೆ ಸಮ ಎಂದು ಕಿಡಿಕಾರಿದೆ.
ಇದೀಗ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸಹ ಧರ್ಮಸ್ಥಳದ ಪರವಾಗಿ ಧ್ವನಿ ಎತ್ತಿದ್ದಾರೆ. ನಿತ್ಯಾನಂದ ಇದೀಗ ಕೈಲಾಸದಿಂದಲೇ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪರವಾಗಿ ನಿಲ್ಲುವುದಾಗಿ ಘೋಷಿಸಿಕೊಂಡಿದ್ದಾರೆ. ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಕೈಲಾಸದಲ್ಲಿ ವಾಸಿಯಾಗಿದ್ದು ಅಲ್ಲಿಂದಲೇ ಸ್ಪೆಷಲ್ ಮೆಸೇಜ್ ಹಂಚಿಕೊಂಡಿದ್ದಾರೆ. ಕೈಲಾಸದಿಂದಲೇ ನಾವು ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ.
ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಧರ್ಮಸ್ಥಳಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಪವಿತ್ರ ಕೈಲಾಸ ರಾಷ್ಟ್ರ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎನ್ನುವ ಪುಸ್ತಕಗಳನ್ನು ಗೌರವದ ಸಂಕೇತವಾಗಿ ಕೊಡುವುದಾಗಿ ಹೇಳಿಕೊಂಡಿದ್ದಾರೆ. ನಾವು ಧಾರ್ಮಿಕ ಕ್ಷೇತ್ರಗಳ ಪರವಾಗಿ ಇದ್ದೇವೆ. ನಾವು ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಪರಸ್ಪರ ಗೌರವಿಸುತ್ತಿದ್ದು, ಅವರಿಗೆ ಬೆಂಬಲ ಕೊಡುತ್ತಿದ್ದೇವೆ ಎಂದು ಎಂದು ಹೇಳಿಕೊಂಡಿದ್ದಾರೆ.
ಧಾರ್ಮಿಕ ಕ್ಷೇತ್ರ ಹಾಗೂ ಧರ್ಮಸ್ಥಳದ ಪರವಾಗಿ ನಮ್ಮ ಬೆಂಬಲ ಯಾವಾಗಲೂ ಇರಲಿದೆ. ಈ ಎಲ್ಲಾ ಆರೋಪಗಳು ಮತ್ತು ಹೋರಾಟಗಳಿಗೆ ಸೂಕ್ತ ನ್ಯಾಯ ಸಿಗಲಿ, ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳೆಲ್ಲೂ ಶೀಘ್ರ ಮುಕ್ತವಾಗಲಿ ಎಂದು ಆಶಿಸುತ್ತಿದ್ದೇವೆ ಎಂದು ಕೈಲಾಸದಿಂದ ಘೋಷಿಸಲಾಗಿದೆ.












Click it and Unblock the Notifications