ಅತ್ಯಾಚಾರ ಪ್ರಕರಣ: ನಿತ್ಯಾನಂದ ಸ್ವಾಮಿ ವಿಚಾರಣೆ ನ.7ಕ್ಕೆ ಮುಂದೂಡಿಕೆ

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಅಕ್ಟೋಬರ್ 10 : ಆರತಿ ರಾವ್ ಎನ್ನುವರ ಮೇಲಿನ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿಯ ವಿವಾದಿತ ನಿತ್ಯಾನಂದ ಸ್ವಾಮಿ ಮಂಗಳವಾರ ರಾಮನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾದರು.

ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದರು. ಪ್ರಕರಣದ ಅರೋಪಿತರಾದ ನಿತ್ಯಾನಂದ ಹಾಗೂ ಆತನ ಶಿಷ್ಯರಾದ ರಾಗಿಣಿ, ಜಮುನರಾಣಿ, ಶಿವವಲ್ಲಭೆನೀನೆ, ಗೋಪಾಲ ರೆಡ್ಡಿ ಸೇಲಂ, ಧನಶೇಖರ್ ಸೇರಿದಂತೆ ಎಳು ಮಂದಿ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದರು.

Nithyananda rape case, Ramanagara court adjourns hearing on Nov 7th

ಇಂದಿನ ವಿಚಾರಣೆಗೆ ಸರ್ಕಾರಿ ವಕೀಲ ವಡವಡಗಿ ಗೈರಾಗಿದ್ದರು. ಕೋರ್ಟ್ ನಿಂದ ಹೂರಬಂದ ನಿತ್ಯಾನಂದ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಬಿಡದಿಯ ಆಶ್ರಮದ ಕಡೆಗೆ ಪ್ರಯಾಣ ಬೆಳಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Controversial Godman Nithyananda Swamy appears before the Ramanagara sessions court in sex scandal case on Oct 10th. Judge Gopalakrishna Rai postponed the next hearing on November 7.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ