ಹೊರಗೆ ಧಾರಾಕಾರ ಮಳೆ, ಒಳಗೆ ಆರೋಪಗಳ ಸುರಿಮಳೆ
ನವದೆಹಲಿ, ಆಗಸ್ಟ್. 13: ನವದೆಹಲಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಮಳೆ ಪರಿಣಾಮ ರಸ್ತೆಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿತ್ತು. ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದ್ದು ನಾಗರಿಕರು ಪರಿತಪಿಸುವಂತಾಯಿತು.
ಕಾಂಗ್ರೆಸ್ ಪ್ರತಿಭಟನೆಯಿಂದ ಸಂಸತ್ ಇಷ್ಟು ದಿನ ಕಲಾಪದಲ್ಲಿ ಸರಿಯಾದ ಚರ್ಚೆಗಳಾಗುತ್ತಿಲ್ಲ ಎಂದು ಹೇಳಲಾಗುತ್ತಿತ್ತು. ಬುಧವಾರದ ಕಲಾಪ ಆಡಳಿತ ಮತ್ತು ವಿರೋಧ ಪಕ್ಷಗಳ ವಾಕ್ಸಮರಕ್ಕೆ ಸಾಕ್ಷಿಯಾಯಿತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಆರೋಪ ಪ್ರತ್ಯಾರೋಪದ ಸುರಿಮಳೆಯಾಯಿತು. ಕಲಾಪ ಗುರುವಾರ ಸಹ ಕಲಾಪ ರಾಜಕೀಯ ನಾಯಕರ ಮಾತಿನ ಭರಾಟೆಯಲ್ಲೇ ಕಳೆದು ಹೋಗುವ ಸಾಧ್ಯತೆಯಿದೆ.
ತಮ್ಮ ಮುಂದಿನ ಚಿತ್ರ ಶಾಂದಾರ್ ದ ಟ್ರೇಲರ್ ಬಿಡುಗಡೆ ಸಂದರ್ಭ ಕಾಣಿಸಿಕೊಂಡ ಬಾಲಿವುಡ್ ನಟ ಶಾಹೀದ್ ಕಪೂರ್ ಮತ್ತು ಬೆಡಗಿ ಆಲಿಯಾ ಭಟ್. ಶಾಲಾ ಮಕ್ಕಳ ಪಜೀತಿ... ಇನ್ನಷ್ಟು ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿ...(ಪಿಟಿಐ ಚಿತ್ರಗಳು)

ದೆಹಲಿಯಲ್ಲಿ ವರುಣನ ಆರ್ಭಟ
ನವದೆಹಲಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಮಳೆ ಪರಿಣಾಮ ರಸ್ತೆಗೆ ನುಗ್ಗಿದ ನೀರು. ಕೆಲ ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.

ಮಳೆಯಲ್ಲಿ ಮನೆಗೆ
ದೆಹಲಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆ ಮನೆ ಕಡೆ ಹೊರಟ ಬೈಕ್ ಸವಾರರು ಕಂಡಿದ್ದು ಹೀಗೆ.

ಎಲ್ಲವೂ ಜಲಾವೃತ
ಧಾರಾಕಾರ ಮಳೆ ಪರಿಣಾಮ ದೆಹಲಿಯ ಪ್ರದೇಶವೊಂದಕೆ ನುಗ್ಗಿದ ಮಳೆ ನೀರು. ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದ್ದು ನಾಗರಿಕರು ಪರಿತಪಿಸಬೇಕಾಯಿತು.

ಸಂಸತ್ ಭವನ
ಸಂಸತ್ ಭವನದ ಒಳಗೆ ರಾಜಕೀಯ ನಾಯಕರ ವಾಕ್ಸ್ಮರ ನಡೆಯುತ್ತಿದ್ದರೆ, ಮಳೆರಾಯ ತನ್ನ ಆಗಮನದ ಸೂಚನೆಯನ್ನು ನೀಡುತ್ತಿದ್ದ. ಮೋಡಗಳ ನಡುವೆ ಸಂಸತ್ ಭವನ ಕಂಡ ದೃಶ್ಯ.

ಮಲ್ಲಿಕಾರ್ಜುನ ಖರ್ಗೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮಗಳನ್ನು ಖಂಡಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.

ವೆಂಕಯ್ಯ ನಾಯ್ಡು ಉತ್ತರ
ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಪ್ರಶ್ನೆಗೆ ಸಂಸತ್ ನಲ್ಲಿ ಉತ್ತರ ನೀಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು.

ಸೋನಿಯಾ ಪ್ರತಿಭಟನೆ
ಕಾಂಗ್ರೆಸ್ ಸದಸ್ಯರ ಅಮಾನತು ಖಂಡಿಸಿ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರು ಪಾರ್ಲಿಮೆಂಟ್ ಒಳಗಡೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಶಾಂದಾರ್ ಆಲಿಯಾ
ತಮ್ಮ ಮುಂದಿನ ಚಿತ್ರ ಶಾಂದಾರ್ ದ ಟ್ರೇಲರ್ ಬಿಡುಗಡೆ ಸಂದರ್ಭ ಕಾಣಿಸಿಕೊಂಡ ಬಾಲಿವುಡ್ ನಟ ಶಾಹೀದ್ ಕಪೂರ್ ಮತ್ತು ಬೆಡಗಿ ಆಲಿಯಾ ಭಟ್.

ಮಕ್ಕಳಾಟವಲ್ಲ
ರಾಜೌರಿ ಜಿಲ್ಲೆಯ ಹಳ್ಳಿಯ ಮಕ್ಕಳು ಶಾಲೆಗೆ ಪ್ರತಿದಿನ ಆಗಮಿಸುವುದೇ ಹೀಗೆ. ಮಕ್ಕಳು ಬೇಕೆಂತಲೇ ನದಿ ಬಳಿ ತೆರಳಿದ್ದಾರೆ ಅಂದುಕೊಳ್ಳಬೇಡಿ, ಇಲ್ಲಿನ ದಾರಿ ಇರುವುದೇ ಹೀಗೆ.












Click it and Unblock the Notifications