ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!

Posted By:
Subscribe to Oneindia Kannada

ಬೆಂಗಳೂರು, ಜೂನ್ 05: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಸಬ್ ವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಣ್ಮರೆಯಾಗಿದ್ದ ಅನುಪಮಾ ಅವರು ಫೇಸ್ ಬುಕ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಲಿಕ್ಕರ್ ಲಾಬಿಗೆ ಮಣಿದಿರುವ ಸಿದ್ದರಾಮಯ್ಯಅವರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, 'ರಮ್' ರಾಜ್ಯ ಎಂದು ಹೇಳಿದ್ದಾರೆ. ಈ ನಡುವೆ ಅನುಪಮಾ ಶೆಣೈ ಅವರಿಗೆ ನ್ಯಾಯ ಸಿಗಬೇಕಿದೆ ಎಂದು ಆನ್ ಲೈನ್ ಅಭಿಯಾನ ಆರಂಭವಾಗಿದೆ.

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರ ಹೆಸರಿನ ಭವನದ ಪಕ್ಕದಲ್ಲಿ ವೈನ್ ಶಾಪ್ ಕಟ್ಟುವುದನ್ನು ವಿರೋಧಿಸಿದ್ದ ಅನುಪಮಾ ಅವರು ಇತ್ತೀಚೆಗೆ ಶಾಪ್ ಓನರ್ ರವಿ ಹಾಗೂ ಇನ್ನಿತರರನ್ನು ಬಂಧಿಸಿದ್ದರು. ಸಿಆರ್ ಪಿಸಿ 107 ಅನ್ವಯ ಅವರನ್ನು ಶನಿವಾರದಂದು ತಾಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

Anupama Shenoy

ಆದರೆ, ಜನಕ್ಕೆ ಒಳ್ಳೆಯದು ಮಾಡಲು ಹೊರಟ ಅನುಪಮಾ ಅವರ ವಿರುದ್ಧವೇ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಿಂದ ಮನನೊಂದ ಅನುಪಮಾ ಅವರು ಜಿಲ್ಲಾ ಎಸ್ಪಿ ಆರ್ ಚೇತನ್ ಅವರಿಗೆ ರಾಜೀನಾಮೆ ಸಲ್ಲಿಸಿ ಯಾರ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗಿದ್ದರು. [ಅನುಪಮಾ ಶೆಣೈ ಬಗ್ಗೆ ಒಂದಿಷ್ಟು]

ಅನುಪಮಾ ಶೆಣೈ ಅವರು ಭಾನುವಾರ ತಮ್ಮ ಅಳಲನ್ನು ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ತೋಡಿಕೊಂಡಿದ್ದಾರೆ.ಈಗ ಪ್ರೊಫೈಲ್ ಪಿಕ್ಚರ್ ಕೂಡಾ ಬದಲಾಯಿಸಿಕೊಂಡಿದ್ದಾರೆ. "ಯಾವಾಗ ಅನ್ಯಾಯವೇ ಕಾನೂನಾಗುತ್ತದೆ, ಆಗ ಬಂಡಾಯವೇಳುವುದು ನಮ್ಮ ಕರ್ತವ್ಯ ವಾಗುತ್ತದೆ" (when injustice become the law, rebellion becomes the duty) ಎಂಬ ಚಿತ್ರ ಹಾಕಿದ್ದಾರೆ. ಶೆಣೈ ಅವರ ಬೆಂಬಲಕ್ಕೆ ಅನೇಕ ಮಂದಿ ನಿಂತಿದ್ದಾರೆ.

ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಜನತೆ ಸವಾಲ್!

ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಜನತೆ ಸವಾಲ್!

-
-
-

ಈ ಹಿಂದೆ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ಸರ್ಕಾರ ವಿಜಯಪುರದ ಇಂಡಿಯ ಡಿವೈಎಸ್ ಪಿಯಾಗಿ ವರ್ಗಾವಣೆ ಮಾಡಿರುವುದು ಭಾರೀ ವಿವಾದಕ್ಕೆ ಈಡಾಗಿತ್ತು. ಸರ್ಕಾರದ ನಿರ್ಧಾರ ವಿರೋಧಿಸಿ ಕೂಡ್ಲಿಗಿ ಜನತೆ ಬಂದ್ ಗೆ ಕರೆ ನೀಡಿದ್ದರು. ಆಗಲೂ ಸಾಮಾಜಿಕ ಜಾಲತಾಣಗಳಲ್ಲಿಯೂ ಅನುಪಮಾ ಶೆಣೈ ಅವರಿಗೆ ನೈತಿಕ ಬೆಂಬಲ ವ್ಯಕ್ತವಾಗಿತ್ತು.[ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶೆಣೈ ದಿಢೀರ್ ರಾಜೀನಾಮೆ]

ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಫಣಿಯೂರಿನವರಾದ ಅನುಪಮಾ ಅವರ ತಂದೆ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದರೆ, ತಾಯಿ ಬಿಡಿ ಕಟ್ಟುವ ಮೂಲಕ ಜೀವನೋಪಾಯ ಸಾಗಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Netizen have started a campaign 'Justice For Anupama Shenoy IPS', Anupama had resigned for the post of DYSP, Kudligi sub-division Ballari. She took Facebook and condemned Siddaramaiah government's liquor lobby. Public supporting her on social networking sites.
Please Wait while comments are loading...