Get Updates
Get notified of breaking news, exclusive insights, and must-see stories!

NDTV survey: ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಒಕ್ಕಲಿಗರು, ಲಿಂಗಾಯತರು ಬಿಜೆಪಿಗೆ!

ನವದೆಹಲಿ, ಮೇ. 02: ಕರ್ನಾಟಕದಲ್ಲಿ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರ ಮತಗಳು ಚುನಾವಣೆಯಲ್ಲಿ ಭಾರಿ ಪ್ರಭಾವ ಬೀರುತ್ತವೆ. ಇದೇ ಕಾರಣಕ್ಕೆ ಎರಡು ಸಮುದಾಯಗಳ ಮತಗಳಿಗಾಗಿ ರಾಜಕೀಯ ಪಕ್ಷಗಳು ಹಲವು ಕಸರತ್ತು ನಡೆಸುತ್ತವೆ. ಈ ಸಲಿ ಇವುಗಳ ಮತಗಳು ಎಲ್ಲಿ, ಯಾರಿಗೆ ಹಂಚಿಕೆಯಾಗಿವೆ ಎಂಬುದನ್ನು ಎನ್‌ಡಿಟಿವಿ ಸಮೀಕ್ಷೆ ಬಹಿರಂಗಪಡಿಸಿದೆ.

ಎನ್‌ಡಿಟಿವಿಯ ಹೊಸ ಅಭಿಪ್ರಾಯ ಸಂಗ್ರಹವು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಸಹಭಾಗಿತ್ವದಲ್ಲಿ ನಡೆದಿದ್ದು, ಯಾದೃಚ್ಛಿಕವಾಗಿ ಆಯ್ಕೆಯಾದ 21 ವಿಧಾನಸಭಾ ಕ್ಷೇತ್ರಗಳಿಂದ 2,143 ಮತದಾರರನ್ನು ಸಂದರ್ಶನ ನಡೆಸಲಾಗಿದೆ. ಈ ಸಮೀಕ್ಷೆಯು ಒಕ್ಕಲಿಗರು ಮುಖ್ಯವಾಗಿ ಕಾಂಗ್ರೆಸ್ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಜಾತ್ಯಾತೀತ ಜನತಾ ದಳ ನಡುವೆ ವಿಭಜನೆಗೊಂಡಿರುವುದನ್ನು ಹೊರಹಾಕಿದೆ.

NDTV Public Opinion: Vokkaligas divided between Congress and jds, Lingayats with BJP

ಈ ಪೈಕಿ ಶೇ 34ರಷ್ಟು ಮಂದಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದು, ಶೇ 36ರಷ್ಟು ಜನ ಜೆಡಿಎಸ್‌ ಪರವಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಕ್ಕಲಿಗರು ಫಲಿತಾಂಶದ ಮೇಲೆ ಪ್ರಭಾವ ಬೀರುವ 58 ಸ್ಥಾನಗಳ ಪೈಕಿ ಕೇವಲ 15 ಸ್ಥಾನಗಳನ್ನು ಗೆದ್ದ ಬಿಜೆಪಿಗೆ ಕೆಲವೇ ಕೆಲವು ಮತಗಳು ಹೋಗಿವೆ ಎನ್ನಲಾಗಿದೆ. ಇನ್ನೊಂದು ಪ್ರಬಲ ಲಿಂಗಾಯತ ಸಮುದಾಯ ಈಗಲೂ ಬಿಜೆಪಿಯೊಂದಿಗಿರುವಂತೆ ಕಂಡುಬರುತ್ತಿದ್ದು, ಶೇ.67ರಷ್ಟು ಮಂದಿ ಬಿಜೆಪಿಗೆ ಮತ ಹಾಕುವ ಉದ್ದೇಶ ಹೊಂದಿದ್ದಾರೆ.

ರಾಜ್ಯದ ಬಹುಪಾಲು ಮುಸ್ಲಿಂ ಮತಗಳು (59%) ಕಾಂಗ್ರೆಸ್‌ನೊಂದಿಗೆ ಉಳಿಯುವ ಸಾಧ್ಯತೆಯಿದೆ.ಆರ್ಥಿಕವಾಗಿ ದುರ್ಬಲ ವರ್ಗದವರಲ್ಲಿ ಅರ್ಧದಷ್ಟು ಜನರು ಕಾಂಗ್ರೆಸ್‌ಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಉಳಿದ ಅರ್ಧದಲ್ಲಿ ಕೇವಲ ಶೇ.23ರಷ್ಟು ಮಂದಿ ಮಾತ್ರ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆಡಳಿತ ಪಕ್ಷವು ಮೇಲ್ವರ್ಗಗಳಲ್ಲಿ ಜನಪ್ರಿಯವಾಗಿದೆ. ಅವರಲ್ಲಿ ಶೇ 31ರಷ್ಟು ಮಂದಿ ಮಾತ್ರ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.

NDTV Public Opinion: Vokkaligas divided between Congress and jds, Lingayats with BJP

ಒಕ್ಕಲಿಗ ಭದ್ರಕೋಟೆಗಳಿಗೆ ನುಗ್ಗಿ ಲಿಂಗಾಯತ ಬೆಂಬಲ ಉಳಿಸಿಕೊಳ್ಳಲು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಆ ನಿಟ್ಟಿನಲ್ಲಿ ಮಾರ್ಚ್‌ನಲ್ಲಿ ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಪಡಿಸಿ ಎರಡು ಸಮುದಾಯಗಳ ನಡುವೆ ಹಂಚಿಕೆ ಮಾಡಿದೆ. ಆದರೆ, ಮೀಸಲಾತಿಯಲ್ಲಿಯೂ ಒಕ್ಕಲಿಗರಿಗೆ ಹೋಲಿಸಿದರೆ ಶೇಕಡಾವಾರು ಪಾಯಿಂಟ್ ಲಿಂಗಾಯತರಿಗೆ ಹೆಚ್ಚು.

ಜನಸಂಖ್ಯೆಯ ಸುಮಾರು 17 ಪ್ರತಿಶತವನ್ನು ಒಳಗೊಂಡಿರುವ ರಾಜ್ಯದ ಏಕೈಕ ಅತಿದೊಡ್ಡ ಸಮುದಾಯ ಮತ್ತು ರಾಜ್ಯಕ್ಕೆ ಒಂಬತ್ತು ಮುಖ್ಯಮಂತ್ರಿಗಳನ್ನು ನೀಡಿರುವ ಲಿಂಗಾಯತರು 224 ವಿಧಾನಸಭಾ ಸ್ಥಾನಗಳಲ್ಲಿ 90 ರಿಂದ 100 ರಷ್ಟು ಕ್ಷೇತ್ರಗಳಲ್ಲಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಬಹುದು.

ಆರಂಭದಲ್ಲಿ ಕಾಂಗ್ರೆಸ್‌ನ ಬೆಂಬಲಿಗರಾಗಿದ್ದ ಲಿಂಗಾಯತ ಸಮುದಾಯವು 80 ರ ದಶಕದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಲಿಂಗಾಯತ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಹಠಾತ್ತನೆ ವಜಾಗೊಳಿಸಿದ ನಂತರ ತಮ್ಮ ನಿಷ್ಠೆಯನ್ನು ಬಿಜೆಪಿ ಕಡೆಗೆ ಬದಲಾಯಿಸಿತು. ಬಿಎಸ್ ಯಡಿಯೂರಪ್ಪ ಅವರ ನೇತೃತ್ವ ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟಿತು.

ಲಿಂಗಾಯತಗಳಿಗಿಂತ ಸ್ವಲ್ಪ ಚಿಕ್ಕದಾದರೂ, ಒಕ್ಕಲಿಗರು ರಾಜ್ಯದ ಜನಸಂಖ್ಯೆಯ 15 ಪ್ರತಿಶತ ಇದ್ದು, ರಾಜಕೀಯವಾಗಿಯೂ ನಿರ್ಣಾಯಕರಾಗಿದ್ದಾರೆ, ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಯನ್ನು ಈ ಸಮುದಾಯ ನೀಡಿದೆ. ಹಳೆ ಮೈಸೂರು ಪ್ರದೇಶ, ಬೆಂಗಳೂರು ಗ್ರಾಮಾಂತರದ ನಾಲ್ಕು ಸ್ಥಾನಗಳನ್ನು ಒಳಗೊಂಡಂತೆ ರಾಜ್ಯದ 224 ವಿಧಾನಸಭಾ ಸ್ಥಾನಗಳಲ್ಲಿ 61 ಕ್ಷೇತ್ರಗಳನ್ನು ಒಕ್ಕಲಿಗರು ಆಳುತ್ತಿದ್ದಾರೆ.

ಬಿಜೆಪಿ ಸರ್ಕಾರವು ತನ್ನ ಹೊಸ ನೀತಿಯಲ್ಲಿ ಅವರಿಗೆ ಮೀಸಲಾತಿ ನೀಡುವುದರ ಜೊತೆಗೆ, ಬೆಂಗಳೂರು ವಿಮಾನ ನಿಲ್ದಾಣದ ಬಳಿ ಬೆಂಗಳೂರಿನ ಸ್ಥಾಪಕ ಮತ್ತು 16 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಮುಖ್ಯಸ್ಥ ನಾಡಪ್ರಭು ಕೆಂಪೇಗೌಡರ 108 ಅಡಿ ಬೃಹತ್ ಪ್ರತಿಮೆಯನ್ನು ನಿರ್ಮಿಸಿದೆ. ಇದಲ್ಲದೇ 17ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನನ್ನು ಇಬ್ಬರು ಒಕ್ಕಲಿಗ ನಾಯಕರು ಕೊಂದಿದ್ದಾರೆ ಎಂಬ ಅಭಿಪ್ರಾಯವನ್ನು ಬಿಜೆಪಿ ಹರಿಯಬಿಟ್ಟಿತ್ತು. ಇದು ಚುನಾವಣೆಗೂ ಮುನ್ನ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+