ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಟ್‌ ಫೆವರೆಟ್‌, ಇದು ಕನ್ನಡಿಗರ ಆಯ್ಕೆ: ಮಹತ್ವದ ಸಮೀಕ್ಷೆಯಲ್ಲಿ ಬಹಿರಂಗ- ಅಂಕಿಅಂಶ

ನವದೆಹಲಿ, ಮೇ. 02: ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಜನರ ಮನಸ್ಥಿತಿ ಅಳೆಯಲು ಎನ್‌ಡಿಟಿವಿ ಸಮೀಕ್ಷೆ ನಡೆಸಿದ್ದು, 2018 ರಲ್ಲಿ ಕಾಂಗ್ರೆಸ್‌ನ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಇನ್ನೂ ಹೆಚ್ಚಿನ ಆದ್ಯತೆಯ ಅಭ್ಯರ್ಥಿಯಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.

ಲೋಕನೀತಿ - ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಸಹಭಾಗಿತ್ವದಲ್ಲಿ ಎನ್‌ಡಿಟಿವಿ ನಡೆಸಿರುವ ಹೊಸ ಅಭಿಪ್ರಾಯ ಸಂಗ್ರಹದಲ್ಲಿ ಕೇವಲ ನಾಲ್ಕು ರಷ್ಟು ಜನರು ಮಾತ್ರ ತಮ್ಮ ಮತವು ಮುಖ್ಯಮಂತ್ರಿ ಅಭ್ಯರ್ಥಿಯ ಮೇಲೆ ಅವಲಂಬಿತವಾಗಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.

NDTV Public Opinion: Siddaramaiah Most Preferred Chief Minister Of Karnataka

ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 40 ರಷ್ಟು ಜನರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಇಷ್ಟಪಡುತ್ತಾರೆ ಎಂದು ಸಮೀಕ್ಷೆಯು ಹೇಳುತ್ತದೆ, ಅಂದರೆ ಶೇಕಡಾ 22 ರಷ್ಟು ಜನರು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮತ್ತೆ ಮುಖ್ಯಮಂತ್ರಿ ಸೀಟ್‌ನಲ್ಲಿ ನೋಡಲು ಬಯಸುತ್ತಾರೆ. ಶೇಕಡಾ 15 ರಷ್ಟು ಜನರು ಸಿದ್ದರಾಮಯ್ಯನವರ ನಂತರ ಕೇವಲ ಒಂದು ವರ್ಷ ಮಾತ್ರ ಸಿಎಂ ಆಗಿದ್ದ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಆದರೆ, ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು 4 ಪ್ರತಿಶತದಷ್ಟು ಜನರು ಆಯ್ಕೆ ಮಾಡಿದ್ದಾರೆ.

2006ರಲ್ಲಿ ಎಚ್‌ಡಿ ದೇವೇಗೌಡರ ಜಾತ್ಯಾತೀತ ಜನತಾದಳದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದ ಸಿದ್ದರಾಮಯ್ಯ, ಬಿಜೆಪಿಯ ಭಾಗವಾಗಿದ್ದ ಗಣಿ ಉದ್ಯಮಿಗಳಾದ ರೆಡ್ಡಿ ಸಹೋದರರ ವಿರುದ್ಧ ಬಳ್ಳಾರಿಗೆ 2010ರ ಪಾದಯಾತ್ರೆ ಮೂಲಕ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಬೆಳೆದರು. 2013 ರಲ್ಲಿ, ಹಿಂದುಳಿದ ಜಾತಿಯ ಮೊದಲ ತಲೆಮಾರಿನ ರಾಜಕೀಯ ನಾಯಕ ಉನ್ನತ ಹುದ್ದೆಗೇರಿದರು. ಬಳಿಕ ಕಾಂಗ್ರೆಸ್‌ನ ಅತ್ಯಂತ ಯಶಸ್ವಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾದರು.

NDTV Public Opinion: Siddaramaiah Most Preferred Chief Minister Of Karnataka

2021 ರಲ್ಲಿ, ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಹೆಚ್ಚಾಗಿ ಬೆಳಕಿಗೆ ಬಂದ ನಂತರ ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಏರಿದರು. ಸದ್ಯ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಹತ್ವದ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದ್ದರೆ, ಅತ್ತ ಬಿಜೆಪಿ ಅವರೇ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಉಳಿಯುತ್ತಾರೆ ಎಂದು ಸ್ಪಷ್ಟಪಡಿಸಿದೆ.

75 ವರ್ಷ ವಯಸ್ಸಿನ ಸಿದ್ದರಾಮಯ್ಯ ಅವರು ವೃದ್ಧರಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. 56 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 44 ರಷ್ಟು ಜನರು ಅವರಿಗೆ ಆದ್ಯತೆ ನೀಡಿದ್ದಾರೆ. 18 ರಿಂದ 25ರ ವಯೋಮಾನದವರಲ್ಲಿ ಶೇ.40ರಷ್ಟು ಮಂದಿ ಅವರನ್ನು ಮುಖ್ಯಮಂತ್ರಿಯಾಗಿ ನೋಡಬೇಕೆಂದು ಬಯಸಿದ್ದಾರೆ.

63ರ ವರ್ಷದ ಬಸವರಾಜ ಬೊಮ್ಮಾಯಿ ಅವರ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ವೃದ್ಧರ ಗುಂಪಿನಲ್ಲಿರುವ 22% ಜನರು ಬೆಂಬಲಿಸಿದರೆ, 18 ರಿಂದ 25 ವಯಸ್ಸಿನ 28 ಪ್ರತಿಶತ ಜನರು ಅವರನ್ನು ಮತ್ತೆ ಸಿಎಂ ಅಗಿ ಬಯಸುತ್ತಾರೆ. ಆದರೆ, ಹೆಚ್ಚಿನ ಮತದಾರರು ನಿರ್ದಿಷ್ಟ ಅಭ್ಯರ್ಥಿಗಳ ಬದಲಿಗೆ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 56 ರಷ್ಟು ಜನರು ಪಕ್ಷವನ್ನು ಅನುಸರಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ ಶೇಕಡಾ 36 ರಷ್ಟು ಜನರು ಅಭ್ಯರ್ಥಿಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ಚಲಾಯಿಸುವವರ ಶೇಕಡಾವಾರು ಪ್ರಮಾಣ ಕೇವಲ 4%.

ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಬೆಂಬಲಿಗರು ವೈಯಕ್ತಿಕ ಅಭ್ಯರ್ಥಿಗಳ ಬದಲಿಗೆ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಸಮೀಕ್ಷೆ ತೋರಿಸಿದೆ. ಬಿಜೆಪಿ ಬೆಂಬಲಿಗರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅಭ್ಯರ್ಥಿ ಯಾರೆಂಬುದನ್ನು ಲೆಕ್ಕಿಸದೆ ಪಕ್ಷಕ್ಕೆ ಮತ ಚಲಾಯಿಸುವುದಾಗಿ 49 ಪ್ರತಿಶತದಷ್ಟು ಜನರು ಹೇಳಿದರೆ, ಅಭ್ಯರ್ಥಿಯು ತಮ್ಮ ಆದ್ಯತೆಯಾಗಿರುತ್ತದೆ ಎಂದು 47 ಪ್ರತಿಶತದಷ್ಟು ಜನರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+