ಬಿಜೆಪಿ ಪ್ರಣಾಳಿಕೆಯಲ್ಲಿ ‘ನಂದಿನಿ’ಗೆ ಸ್ಪೆಷಲ್ ಸ್ಥಾನಮಾನ!

ಬೆಂಗಳೂರು: ಅಮುಲ್ & ನಂದಿನಿ ವಿಚಾರ ಜನವರಿಯಿಂದ ಸದ್ದು ಮಾಡುತ್ತಿದೆ. ಅದ್ರಲ್ಲೂ ಗುಜರಾತ್‌ನ ಅಮುಲ್ ಜೊತೆ ನಂದಿನಿ ವಿಲೀನ ಆಗುತ್ತೆ ಎಂಬ ಸುದ್ದಿ ಹರಡಿದ್ದೇ ತಡ ಬಿರುಗಾಳಿ ಎದ್ದಿತ್ತು. ಈ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಂದಿನಿಯನ್ನ ಅಮುಲ್ ಜೊತೆ ವಿಲೀನ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂಬ ಸಂದೇಶ ಸಿಕ್ಕಿತ್ತು. ಹೋರಾಟದ ಎಫೆಕ್ಟ್ ಈಗ ರಿಫ್ಲೆಕ್ಟ್ ಆಗಿದೆಯಾ? ಅಂತಾ ಬಿಸಿಬಿಸಿ ಚರ್ಚೆ ಶುರುವಾಗಿದೆ.

ಹೀಗೆ ಮತ್ತೊಮ್ಮೆ ಅಮುಲ್ & ನಂದಿನಿ (Nandini Amul) ವಿಚಾರ ಚರ್ಚೆಗೆ ಬರಲು ಕಾರಣ ಬಿಜೆಪಿ ಇಂದು ಬಿಡುಗಡೆ ಮಾಡಿರುವ ಕರ್ನಾಟಕ ಚುನಾವಣಾ ಪ್ರಣಾಳಿಕೆ. ತಾವು ಅಧಿಕಾರಕ್ಕೆ ಬಂದರೆ ಮುಂದೆ ಏನೆಲ್ಲಾ ಕೆಲಸ ಮಾಡುತ್ತೇವೆ ಎಂಬ ಬಗ್ಗೆ ಬಿಜೆಪಿ ಈ ಪ್ರಣಾಳಿಕೆಯಲ್ಲಿ ಮಾಹಿತಿ ನೀಡಿದ್ದು, ಕನ್ನಡ ನಾಡಿನ ಹೆಮ್ಮೆಯ ಬ್ರಾಂಡ್ 'ನಂದಿನಿ' ವಿಚಾರ ಕೂಡ ಚರ್ಚೆಗೆ ಬಂದಿದೆ. ಈ ಮೂಲಕ ಹೋರಾಟದ ಕಿಚ್ಚಿನ ಬಿಸಿ ತಲುಪಿತಾ? ಎಂದು ವಿಪಕ್ಷಗಳ ನಾಯಕರು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರು ಬಿಜೆಪಿ ನಾಯಕರನ್ನ ಪ್ರಶ್ನೆ ಮಾಡುತ್ತಿದ್ದಾರೆ.

Nandini and Amul discussion

ಬಡವರಿಗೆ 'ನಂದಿನಿ' ಉಚಿತ!

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಬಾರಿ ಸಾಕಷ್ಟು ಉಚಿತ ಉಡುಗೊರೆ ನೀಡುವುದಾಗಿ ಆಶ್ವಾಸನೆ ನೀಡಿದೆ. ಈ ಬಾರಿ ಪ್ರಣಾಳಿಕೆಯಲ್ಲಿ ಬಿಜೆಪಿ, ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 3 ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಜೊತೆಗೆ BPL ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತ, 5 ಕೆಜಿ ತಿಂಗಳಿಗೆ ಸಿರಿಧಾನ್ಯ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಅರ್ಧ ಲೀಟರ್ ನಂದಿನಿ ಹಾಲು ಉಚಿತವಾಗಿ ನೀಡುವ ವಿಚಾರದ ಸುತ್ತ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

'ನಂದಿನಿ' ಪರ ಮತ್ತೆ ಅಭಿಯಾನ!

ನಂದಿನಿ ಮತ್ತು ಅಮುಲ್ ವಿಚಾರ ಚರ್ಚೆಗೆ ಬಂದಾಗ ಟ್ವಿಟ್ಟರ್‌ನಲ್ಲೇ ಅತಿಹೆಚ್ಚು ಚರ್ಚೆ ಶುರುವಾಗಿತ್ತು, ಈಗಲೂ ಅಷ್ಟೇ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅರ್ಧ ಲೀಟರ್ ನಂದಿನಿ ಹಾಲು ಉಚಿತವಾಗಿ ಕೊಡುವ ಭರವಸೆ ನೀಡಿದ ಬಳಿಕ ಮತ್ತೊಮ್ಮೆ ಟ್ವಿಟ್ಟರ್ ಅಖಾಡ ಅಮುಲ್ & ನಂದಿನಿ ಚರ್ಚೆಗೆ ವೇದಿಕೆಯಾಗಿದೆ. ನಂದಿನಿ ಪರ ಟ್ವೀಟ್‌ಗಳ ಅಭಿಯಾನ ಶುರುವಾಗಿದ್ದು, ಆ ಬಗ್ಗೆ ಸಂಪೂರ್ಣ ವಿವರ ಮುಂದೆ ತಿಳಿಯೋಣ.

'ಇದು ಹೋರಾಟಗಾರರ ತಾಕತ್ತು..✌️'

ನಂದಿನಿ ಉಳಿಸಿ ಎಂದು ಹೋರಾಟ ಶುರು ಮಾಡಿದ್ದವರೇ ಈಗ ಬಿಜೆಪಿ ಪ್ರಣಾಳಿಕೆ ಪ್ರಸ್ತಾಪಿಸಿ ಚರ್ಚೆ ಆರಂಭಿಸಿದ್ದಾರೆ. ರೂಪೇಶ್ ರಾಜಣ್ಣ ಟ್ವಿಟ್ಟರ್‌ನಲ್ಲಿ 'ಇದು ಹೋರಾಟಗಾರರ ತಾಕತ್ತು..✌️ ತಮ್ಮ ವಾಲ್ ಮೇಲೆ ಅಮುಲ್ ಪೋಟೋ ಹಾಕೊಂಡ್ ಕನ್ನಡಿಗರ ಹೋರಾಟ ಅಣಕಿಸುತ್ತಿದ್ದ ಫೇಕ್ ವೀರರು ಬೆಳಗ್ಗಿನಿಂದ ನಾಪತ್ತೆ.. ಪಾಪ. ಹಾಗೆ ಬರೀ ಹಾಲು ಅನ್ನದೆ ನಂದಿನಿ ಹೆಸರನ್ನು ಬಳಸಿದ್ದಾರೆ ಅಂದ್ರೆ ನಂದಿನಿ ಹಾಲಿನ ಪರ ಹೋರಾಟ ಇಂದು ಆಳುವವರಿಗೆ ತಲುಪಿದೆ ಎಂದರ್ಥ. ನಂದಿನಿ ಹಾಲು ಎಂದೂ ಕನ್ನಡಿಗರ ಹೆಮ್ಮೆ..' ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ ವಿರುದ್ಧ ಟ್ವೀಟ್ ಶುರು!

ಮತ್ತೊಂದ್ಕಡೆ ನಂದಿನಿ ಪರ ಟ್ವೀಟ್ ಶುರುವಾಗಿರುವ ಹೊತ್ತಲ್ಲೇ, ಕಿತ್ತಾಟ ಕೂಡ ಶುರುವಾಗಿದೆ. ಈ ಹಿಂದೆ ಅಮುಲ್ ಪರವಾಗಿ ಧ್ವನಿ ಎತ್ತಿದ್ದವರೇ ಈಗ ನಂದಿನಿ ಪರ ಮಾತನಾಡುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆರೋಪ ಮಾಡುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಮತ್ತೊಮ್ಮೆ ಟ್ವಿಟ್ಟರ್ ಅಮುಲ್ ಹಾಗೂ ನಂದಿನಿಯ ಚರ್ಚೆಗೆ ಭಾರಿ ದೊಡ್ಡ ವೇದಿಕೆ ಒದಗಿಸಿದೆ. ಇದಕ್ಕೆ ರಾಜಕೀಯ ಪಕ್ಷಗಳು ಅಧಿಕೃತವಾಗಿ ಎಂಟ್ರಿಯಾದರೆ, ಚರ್ಚೆ ಇನ್ನೊಂದು ಲೆವೆಲ್ ರೀಚ್ ಆಗೋದು ಪಕ್ಕಾ. ಜೊತೆಗೆ ಚುನಾವಣಾ ಅಸ್ತ್ರವಾಗಿಯೂ ಬಳಕೆಯಾಗೋದು ಗ್ಯಾರಂಟಿ.

ಒಟ್ನಲ್ಲಿ ಚುನಾವಣೆ ಹೊತ್ತಲ್ಲೇ ಮತ್ತೊಮ್ಮೆ ಅಮುಲ್ & ನಂದಿನಿ ವಿಚಾರ ಮುನ್ನೆಲೆಗೆ ಬಂದಿದೆ. ಬಿಜೆಪಿ ಕೂಡ ನಂದಿನಿ ವಿಚಾರದಲ್ಲಿ ಭರ್ಜರಿ ಉಚಿತ ಕೊಡುಗೆ ನೀಡಲು ಮುಂದಾಗಿದೆ. ಆದರೆ ಇದೆಲ್ಲಾ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕನ್ನಡ ನಾಡಿನಲ್ಲಿ ಅಧಿಕಾರ ಹಿಡಿಯುವವರು ಯಾರು ಎಂಬ ಸತ್ಯ ಬಹಿರಂಗವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+