Karnataka Election: ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ ಗೆಲ್ಲಿಲ್ಲ ಅಂದ್ರೆ ಹೆಸರು ಬದಲಾಯಿಸಿಕೊಳ್ತೇನೆ ಎಂದ ನಲಪಾಡ್
ರಾಹುಲ್ ಗಾಂಧಿ ಹೋದ ಕಡೆ ಬಿಜೆಪಿಗೆ ಲಾಭವಾಗುತ್ತೆ ಎಂದಿದ್ದ ಸಿಸಿ ಪಾಟೀಲ್ ಹೇಳಿಕೆಗೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಯ ಶಕ್ತಿ ಏನು ಎಂದು ಸಚಿವ ಸಿಸಿ ಪಾಟೀಲ್ ಅವರಿಗೆ ಗೊತ್ತಿಲ್ಲ, ಈ ಬಾರಿ ರಾಜ್ಯದಲ್ಲಿ ಎಲ್ಲೆಲ್ಲಿ ರಾಹುಲ್ ಗಾಂಧಿ ಹೋಗುತ್ತಾರೆ ಅಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ನಲಪಾಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಲಪಾಡ್, ಸಿಸಿ ಪಾಟೀಲ್ ಲೇವಡಿ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ವಿನೋದ್ ಅಸೂಟಿಗೆ ಯೂತ್ ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿಸುವಲ್ಲಿ ನಲಪಾಡ್ ವಿಫಲವಾಗಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿನೋದ್ ಅಸೂಟಿಗೆ ಸರ್ಕಾರದಲ್ಲಿ ಚೇರ್ಮನ್ ಸೀಟ್ ಕೊಡಿಸುವ ಭರವಸೆ ನೀಡಿದ್ದೇವೆ, ಗೆಲ್ಲುವ ಅವಕಾಶ ಇದ್ದ ಕಡೆ ಯುವಕರಿಗೆ ಟಿಕೆಟ್ ಕೊಡಲಾಗಿದೆ ಎಂದು ಹೇಳಿದರು.

ಟಿಕೆಟ್ ಕೊಡೋಡು ಅಷ್ಟೆ ಮುಖ್ಯವಾಗಲ್ಲ, ಗೆಲ್ಲುವುದು ಬಹಳ ಮುಖ್ಯ ಎಂದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಶೆಟ್ಟರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದರು. 224 ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲಿ ಕೂಡ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ, ಬಿಜೆಪಿಯಲ್ಲಿ ಯಾರೂ ಮುಸ್ಲಿಮರು ಇಲ್ವಾ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಯಾರೂ ಪ್ರಶ್ನೆ ಮಾಡ್ತಿಲ್ಲ ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ್ರೆ ಪಕ್ಷದ ಬಲ ಹೆಚ್ಚುತ್ತೆ
ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಮಾತನಾಡಿ, ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವುದು ಪಕ್ಷಕ್ಕೆ ಲಾಭವಾಗುತ್ತದೆ ಎಂದರು. ರಾಹುಲ್ ರಾಜ್ಯಕ್ಕೆ ಭೇಟಿ ನೀಡಿ ಹೋದ ನಂತರ ಕಾಂಗ್ರೆಸ್‌ಗೆ ಹಲವು ಕಡೆಗಳಲ್ಲಿ ಗೆಲುವು ದಕ್ಕಿದೆ. ಅವರ ಬಗ್ಗೆ ಹಲವರು ಟೀಕೆ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಅವರಿಗೆ ಸತ್ಯದ ಅರಿವಾಗುತ್ತದೆ. ಬಸವಣ್ಣನವರ ಜಯಂತಿಯಂದೇ ಇಂತಹ ಮಾತುಗಳನ್ನಾಡುವವರಿಗೆ ಇನ್ನೇನು ಹೇಳಬೇಕು ಎಂದು ಸಿಸಿ ಪಾಟೀಲ್ ಹೇಳಿಕೆಗೆ ತಿರುಗೇಟು ಕೊಟ್ಟರು.

ರಾಹುಲ್ ಗಾಂಧಿ ರಾಜ್ಯ ಭೇಟಿ ಬಗ್ಗೆ ಮಾತನಾಡಿದ್ದ ಬಿಜೆಪಿ ಸಚಿವ ಸಿಸಿ ಪಾಟೀಲ್ ರಾಹುಲ್ ಬಂದು ಹೋದರೆ ಬಿಜೆಪಿಗೆ ಲಾಭವಾಗುತ್ತದೆ. ಅವರು ಪ್ರಚಾರ ಮಾಡಿದ ಕಡೆ ಬಿಜೆಪಿ ಗೆಲುವು ಸುಲಭವಾಗುತ್ತದೆ ಎಂದು ಲೇವಡಿ ಮಾಡಿದ್ದರು. ಪಾಟೀಲ್ ಹೇಳಿಕೆಗೆ ಹಲವು ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿಗೆ ಸನ್ಮಾನ
ಕೂಡಲ ಸಂಗಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಲಾಗಿದೆ. ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರು ದಂಪತಿ ಕಾಂಗ್ರೆಸ್ ನಾಯಕಿನಗೆ ಬಸವಣ್ಣನ ಬೆಳ್ಳಿಯ ಮೂರ್ತಿಯನ್ನು ನೀಡಿ ಗೌರವಿಸಿದರು.












Click it and Unblock the Notifications