Get Updates
Get notified of breaking news, exclusive insights, and must-see stories!

ಮೈತ್ರಿಯಾ ಪ್ರಕರಣ: ಬಿಗ್ ಬಾಸ್ ಗಳಿಗೆ ಬಿಗ್ ಬಾಸ್

ಮೈತ್ರಿಯಾ ಗೌಡ-ಕಾರ್ತಿಕ್ ಗೌಡ ವಿವಾ(ಹ)ದವನ್ನು ಹಿಡಿದು ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳು ದಿನನಿತ್ಯ ಪ್ರಚಾರ ಮಾಡುತ್ತಿರುವ ರಂಗು-ರಂಗಿನ ಸುದ್ದಿಗಳನ್ನು ನೋಡಿ ನೋಡಿ ಬೆಸತ್ತು ಕನ್ನಡ ಸುದ್ದಿ ಚಾನೆಲ್ ಗಳನ್ನು ನೋಡುವುದೇ ಬೇಡ ಎಂಬ ತೀರ್ಮಾನಕ್ಕೆ ಸಾಮಾನ್ಯರು ಬಂದಿದ್ದಾರೆ ಅಚ್ಚರಿ ವಿಷಯವೇನಲ್ಲ.

ಮೈತ್ರೀಯಾ ಗೌಡ ಯಾರು? ಒಬ್ಬ ರೂಪದರ್ಶಿ ಕಮ್ ಸಿನಿಮಾ ನಟಿ. ಕಾರ್ತಿಕ್ ಗೌಡ ಹಿರಿಯ ರಾಜಕಾರಣಿ ಸದಾನಂದಗೌಡ ಮಗ. ಇಷ್ಟು ಬಿಟ್ಟರೆ ಇವರ ಪ್ರಣಯಪ್ರಸಂಗಕ್ಕೆ ಆದ್ಯತೆ ನೀಡಿ ದಿನದ ಇಪ್ಪತ್ತು ನಾಲ್ಕು ಗಂಟೆಗಳು ಚರ್ಚಿಸಲು ಇದೇನಾದ್ರೂ ರಾಷ್ಟ್ರೀಯ ಹಿತಾಸಕ್ತಿಯ ವಿಷಯವೇ?.

ಇಷ್ಟಕ್ಕೂ ಆಕೆಗೆ ಆ ಹುಡುಗನಿಂದ ಅನ್ಯಾಯವಾಗಿದ್ದರೆ ನೇರವಾಗಿ ಪೋಲೀಸರಿಗೆ ಹೋಗಿ ಕಂಪ್ಲೇಟ್ ಕೊಟ್ಟು ನ್ಯಾಯಕ್ಕೆ ಹೋರಾಟ ಮಾಡಬೇಕು. ಇದನ್ನು ಬಿಟ್ಟು ಆಕೆ ಮಾಡುತ್ತಿರುವುದೇನು?. ಟಿವಿ ಚಾನೆಲ್ ಗಳ ಮುಂದೆ ತನ್ನ ನಟನಾ ಪ್ರದರ್ಶನ.

ಗೌರಿಹಬ್ಬದ ದಿನವಂತೂ ನಮ್ಮ ಚಾನೆಲ್ ಗಳು ನಡೆದುಕೊಂಡ ರೀತಿ ಅಸಹ್ಯವೆನ್ನಿಸದೆ ಇರಲಾರದು. ಕ್ಷಣ ಕ್ಷಣದ ಪ್ರಸಾರ. ಆಕೆಯೆ ಹಿಂದೆ-ಮುಂದೆ ಒಂದು ಬೈಟ್ ಗಾಗಿ ಓಡಿದ್ದೇ ಓಡಿದ್ದು. ಆಕೆ, ಇಲ್ಲಾ ಆಕೆ ಸಿಗದೇ ಹೋದರೆ ಆಕೆಯ ಅಕ್ಕ, ಅಮ್ಮ, ಅವರ ಕುಟುಂಬ ಅಬ್ಬಾ! ಅವರ ಮೂಲದವರಿಗೆ ಹೋಗಿ ಅವರೆಲ್ಲಾ ಇಂಟರ್ ವ್ಯೂ ಗಳ ಮೇಲೆ ಇಂಟರ್ ವ್ಯೂಗಳನ್ನು ಮಾಡಿದ್ದೇ ಮಾಡಿದ್ದು.[ತಪ್ಪಿದ್ದರೆ ನನ್ನನ್ನು ಹ್ಯಾಂಗ್ ಮಾಡಿ: ಮೈತ್ರಿಯಾ]

ಬ್ರೇಕಿಂಗ್ ನ್ಯೂಸ್ ಗಳ ಬಗ್ಗೆ ಹೇಳುವುದೇ ಬೇಡ

ಬ್ರೇಕಿಂಗ್ ನ್ಯೂಸ್ ಗಳ ಬಗ್ಗೆ ಹೇಳುವುದೇ ಬೇಡ

ಬ್ರೇಕಿಂಗ್ ನ್ಯೂಸ್ ಗಳ ಬಗ್ಗೆ ಹೇಳುವುದೇ ಬೇಡ. ಆಕೆ ಬೆಳಗ್ಗೆಯಿಂದ ರಾತ್ರಿಯವರಿಗೂ ಎಲ್ಲಾ ಚಾನೆಲ್ ಗಳನ್ನು ಸುತ್ತಿ ರಾತ್ರಿ 10 ಗಂಟೆ ಸಮಯದಲ್ಲಿ ಆರ್.ಟಿ.ನಗರದ ಪೋಲಿಸ್ ಠಾಣೆಗೆ ಹೊರಟಾಗ ಆಕೆಯ ಎಸ್ಕಾರ್ಟ್ ವಾಹನಗಳಂತೆ ಇವರೆಲ್ಲಾ ಹಿಂಬಾಲಿಸಿದ್ದೇ ಹಿಂಬಾಲಿಸಿದ್ದು, ಅದನ್ನು ನೇರ ದೃಶ್ಯಗಳು ಅಂತ ಪ್ರಸಾರ ಬೇರೆ. ನಮಗ್ಯಾಕೆ ಬೇಕು ಸ್ವಾಮಿ ಹಿಂಬಾಲಿಸೋ ಹಿಂಸೆ

ಚಾನೆಲ್ ಗಳ ಟಿಆರ್ ಪಿ ವಾರ್

ಚಾನೆಲ್ ಗಳ ಟಿಆರ್ ಪಿ ವಾರ್

ಬೇಕ್ರಿಂಗ್ ನ್ಯೂಸ್...'ಪೋಲಿಸ್ ಠಾಣೆ ಕಡೆಗೆ ಹೊರಟ ಮೈತ್ರಿಯಾ ಗೌಡ', 'ಮೈತ್ರಿಯಾಗೌಡ ಪೋಲಿಸ್ ಠಾಣೆಗೆ ಆಗಮನ'... ಆಕೆ ಕಂಪ್ಲೇಟ್ ಕೊಡಬೇಕಾದ್ರೆ ಆ ಕಂಪ್ಲೇಟ್ ಕಾಪಿ ಮೇಲೆ ಪೈಪೋಟಿ ಬಿದ್ದು ಅದನ್ನು ಸೆರೆಹಿಡಿದು ಪ್ರಚಾರ ಮಾಡೋದು.

ಕ್ಷಣಕ್ಷಣದ ತಾಜಾಸುದ್ದಿ ಅಂತೇಳಿ ಅದನ್ನು ಬಿಂಬಿಸಿ ಪ್ರಸಾರ ಮಾಡಿದ್ದೇ ಮಾಡಿದ್ದು. ಇದೇನು ಆಕೆಯ ಖಾಸಗಿ ವ್ಯವಹಾರವೋ ಇಲ್ಲ ಈ ಖಾಸಗಿ ಚಾನೆಲ್ ಗಳ ಟಿಆರ್ ಪಿ ಹಪಾಹಪಿಗಾಗಿ ಪತ್ರಿಕಾಧರ್ಮದ ನೈತಿಕ ಮೌಲ್ಯಗಳ ಅಧಃಪತನನವೋ ಅರ್ಥವಾಗುತ್ತಿಲ್ಲ.

ಒಂದೊಂದು ಬಾರಿ ಒಂದೊಂದು ಚಾನೆಲ್ ಒಂದೊಂದು ಹೊಸ ವಿಷ್ಯ ಹೇಳುತ್ತಾ ಇದ್ದಾರೆ ಸತ್ಯ ಯಾರಿಗೆ ತಿಳಿಯುತ್ತೆ. ಸಾಲದ್ದಕ್ಕೆ ಸತ್ಯ ತಿಳಿದು ಪ್ರೇಕ್ಷಕಗೇನೂ ಆಗಬೇಕಿಲ್ಲ. ಒಂದು ಸಹಾನುಭೂತಿಯ ನಿಟ್ಟುಸಿರು ಬಿಡಬಲ್ಲೆವು ಅಷ್ಟೇ.

ಇದನ್ನು ಬಿಟ್ಟರೆ ಚರ್ಚೆಗೆ ಬೇರೆ ವಿಷಯವೇ ಇಲ್ಲ

ಇದನ್ನು ಬಿಟ್ಟರೆ ಚರ್ಚೆಗೆ ಬೇರೆ ವಿಷಯವೇ ಇಲ್ಲ

ರಾಜ್ಯದಲ್ಲಿ ಇದನ್ನು ಬಿಟ್ಟರೆ ಚರ್ಚೆಗೆ ಬೇರೆ ವಿಷಯವೇ ಇಲ್ಲವೇನೋ ಅನ್ನೋವಂತೆ ಇಂದಿಗೂ ಬಿಡದಂತೆ ಚಾನೆಲ್ ಗಳು ನಿರಂತರವಾಗಿ ಚರ್ಚೆ ಮಾಡುತ್ತಲ್ಲೇ ಇದ್ದಾವೆ. ಒಂದು ಚಾನೆಲ್ ನಲ್ಲಿ ಆಕೆಯ ಪರವಾಗಿ ವಿಷಯ ಪ್ರಸಾರವಾದರೆ, ಅದೇ ಸಮಯಕ್ಕೆ ಪ್ರತಿಯಾಗಿ ಆಕೆಯ ವಿರುದ್ದವಾಗಿ ಇನ್ನೊಂದು ಚಾನೆಲ್ ನಲ್ಲಿ ಕಾರ್ಯಕ್ರಮ.

ಉತ್ತರ ಕರ್ನಾಟಕ ಎದುರಿಸುತ್ತಿರುವ ಅತಿವೃಷ್ಟಿ ಸಮಸ್ಯೆ ಬಗ್ಗೆ ಶಾಸಕರು, ಸಚಿವರನ್ನು ಇದೇ ರೀತಿ ಹಿಂದೆ ಬಿದ್ದು ಪ್ರಶ್ನಿಸಿ ಪುಣ್ಯಕಟ್ಟಿಕೊಳ್ಳಿ. ಮನರಂಜನೆಯೇ ಸುದ್ದಿ ವಾಹಿನಿಯ ಉದ್ದೇಶ ಎನಿಸಿದ್ದರೆ ಅದಕ್ಕಿಂತ ದುರಂತ ಬೇರೆ ಇಲ್ಲ.

ಚಾನೆಲ್ ಗಳೇ ನ್ಯಾಯಾಲಯಗಳಾಗಿ ಪರಿವರ್ತನೆ

ಚಾನೆಲ್ ಗಳೇ ನ್ಯಾಯಾಲಯಗಳಾಗಿ ಪರಿವರ್ತನೆ

ಈಗಂತೂ ಘನ ಚಾನೆಲ್ ಗಳೇ ನ್ಯಾಯಾಲಯಗಳಾಗಿ ಪರಿವರ್ತನೆ ಆಗಿವೆ. ವರದಿಗಾರರೇ IO (Investing Officer)ಗಳು, ಆಂಕರ್ ಗಳೆ ಲಾಯರ್ ಗಳು ಜೊತೆಗೆ ನ್ಯಾಯಾಧೀಶರ ಪಾತ್ರನಿರ್ವಹಿಸುತ್ತಿದ್ದಾರೆ. ಅನ್ಯಾಯವಾಗಿದ್ದರೆ ಪೋಲಿಸರಿಗೆ ಕಂಪ್ಲೇಟ್ ಕೊಡೋದನ್ನು ಬಿಟ್ಟು ಚಾನೆಲ್ ಗಳಿಗೆ ಆಶ್ರಯಿಸೋ ಪರಿಪಾಠ ಹೆಚ್ಚುತ್ತಿದೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕಿದೆ. ಇದರ ಜೊತೆಗೆ ಕಾನೂನು ತಜ್ಞರು ಕೂಡಾ ಆರೋಪಿ-ಪ್ರತ್ಯಾರೋಪಿಗಳನ್ನು ಕೆರಳಿಸುವ ಹಾಗೆ ಮಾತನಾಡಿದ ಪ್ರಸಂಗಗಳು ಪ್ರಸಾರವಾಗಿವೆ.

ನಾನೊಬ್ಬದ್ದೀನಿ ಅಂತ ರಿಷಿ ಅನ್ನೋನು ಬಂದಿದ್ದಾನೆ

ನಾನೊಬ್ಬದ್ದೀನಿ ಅಂತ ರಿಷಿ ಅನ್ನೋನು ಬಂದಿದ್ದಾನೆ

ಈಗ ಇದರೊಳಗೆ ನಾನೊಬ್ಬದ್ದೀನಿ ಅಂತ ರಿಷಿ ಅನ್ನೋನು ಬಂದಿದ್ದಾನೆ. ಇನ್ನೇನು ರೋಚಕವಾದ ಸುದ್ದಿಗಳು ಮಹಾಪೂರವೇ ಚಾನೆಲ್ ಗಳಲ್ಲಿ ಹರಿದು ಬರುತ್ತಿದ್ದೆ. ಒಟ್ಟಾರೆ ಈ ಮೈತ್ರಿಯಾ ಪ್ರಕರಣ ಬಿಗಬಾಸ್ ಗಳಿಗೆ ಬಿಗ್ ಬಾಸ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದೆ. ನ್ಯಾಯಾಲಯವಾದರೂ ಈ ಬಗ್ಗೆ ಗಮನ ಹರಿಸಿ ಪ್ರೇಕ್ಷಕರನ್ನು ರಕ್ಷಿಸಬೇಕು ಎಂದು ಕೋರುತ್ತೇನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+