'ಮೈಥಿಲಿ' ನೋಡಲು ಬನ್ನಿ, ಬೆಣ್ಣೆ ದೋಸೆ ತಿನ್ನಿ
ದಾವಣಗೆರೆ, ಆಗಸ್ಟ್, 08 : ಸ್ಪೂರ್ತಿ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 'ಮೈಥಿಲಿ' ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದು, ಭಾನುವಾರ ಸಂಜೆ 6.30 ಕ್ಕೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.
ವಿದ್ಯಾಸಾಗರ ಆರ್ಟ್ ಅಕಾಡೆಮಿ ಸಂಸ್ಥೆಯಿಂದ ಆಯೋಜನೆಗೊಂಡ ನಾಟಕವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ನೀವು-ನಾವು ದಾವಣಗೆರೆ ಸಂಸ್ಥೆಯ ಸಹಕಾರದಲ್ಲಿ ಜರುಗಲಿದೆ.[ಬೆಂಗಳೂರಿನ ಯಕ್ಷದಶಾಹಕ್ಕೆ ಹೋಗೋಣ ಬನ್ನಿ]

'ಮೈಥಿಲಿ' ನಾಟಕವನ್ನು ರಚಿಸಿ, ನಿರ್ದೇಶಿಸಿ, ರಂಗ ಸಜ್ಜಿಕೆ ನಿರ್ವಹಿಸಿದವರು ಶಿವಮೊಗ್ಗದ ಖ್ಯಾತ ರಂಗ ನಿರ್ದೇಶಕರಾದ ಡಾ. ಸಾಸ್ವೆಹಳ್ಳಿ ಸತೀಶ್. ಇದಕ್ಕೆ ನೀನಾಸಂನ ಉಮೇಶ್ ಆಚಾರ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಮೈಥಿಲಿಯು ಸಂಪೂರ್ಣ ಮಹಿಳಾ ಪ್ರಧಾನ ನಾಟಕವಾಗಿದ್ದು, ಶತಮಾನಕಾಲದಿಂದಲೂ ಸೀತೆ ವಿಚಾರದಲ್ಲಿ ಒಪ್ಪಿಕೊಂಡದ್ದನ್ನು ಪ್ರಶ್ನಿಸುವ, ತರ್ಕಕ್ಕೆ ಹಚ್ಚುವ ಮತ್ತು ಪುರಾಣ ಯೋಜಿತ ಘಟನೆಗಳ ಹಿಂದಿನ ವಿರೂಪಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.
ಇದರಲ್ಲಿ ಬರುವ ಸೀತೆ ಬಹುಮುಖ್ಯವಾಗಿ ಆಧುನಿಕ ಸೀತೆ. ಏನೊಂದನ್ನೂ ಪ್ರಶ್ನಿಸದೆ ಎಲ್ಲಾ ಸಂಕಷ್ಟವನ್ನೂ ಸಹಿಸಿಕೊಂಡದ್ದೇ ಈ ಸೀತೆಯ ಶ್ರೇಷ್ಠತೆ ಎಂಬ ವಿವೇಕದ ಮಾತನ್ನು ಒಪ್ಪುವುದು ಅನಿವಾರ್ಯತೆಯಲ್ಲ. ಹಾಗೆ ಮಾಡಿದ್ದಲ್ಲಿ ಎಲ್ಲವನ್ನೂ ಸಹಿಸಿಕೊಂಡು ತೆಪ್ಪಗಿರುವುದೇ ಹೆಣ್ಣಿನ ಆದರ್ಶವೆಂಬಂತಾಗಿ ಬಿಡುತ್ತದೆ.
ಹಾಗಾಗಿ ಈ ಮೈಥಿಲಿ, ಆಧುನಿಕ ಮೈಥಿಲಿಯಾಗಿ ಪ್ರಶ್ನೆಗಳಿಗೂ, ನೀಡುವ ನೈಜ ಕಾರಣಗಳಿಗೆ ನಾವು ಜಾಣ ಕುರುಡರಾಗದೇ ಮೈಥಿಲಿಯ ಮನದ ಮಾತುಗಳಿಗೆ ಕಿವಿಯೂ, ದನಿಯೂ ಆಗಬೇಕಾದ ಜರೂರತ್ತು ಇದೆ ಎಂಬುದನ್ನು ನಾಟಕ ತಿಳಿಸಿಕೊಡುತ್ತದೆ.












Click it and Unblock the Notifications